ಮೂರು ದಿನಗಳ ನಂತರ ಮತ್ತೆ Petrol ದರ ಏರಿಕೆ, ಹೊಸ ದಾಖಲೆ ನಿರ್ಮಿಸಿದ Petrol-Diesel

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೊಸ ದಾಖಲೆಯನ್ನು ನಿರ್ಮಿಸಿವೆ. 3 ದಿನಗಳ ಪರಿಹಾರದ ನಂತರ ಇಂದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಹೆಚ್ಚಾಗಿದೆ. ದೆಹಲಿಯಲ್ಲಿ, ಪೆಟ್ರೋಲ್ 26 ಪೈಸೆ ಮತ್ತು ಡೀಸೆಲ್ 15 ಪೈಸೆ ಹೆಚ್ಚಾಗಿದೆ. ದರ ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿಗಳನ್ನು ತಲುಪಿದೆ.  

Written by - Yashaswini V | Last Updated : Feb 27, 2021, 11:15 AM IST
  • ಪೆಟ್ರೋಲ್-ಡೀಸೆಲ್ ದುಬಾರಿ
  • 3 ದಿನಗಳ ನಂತರ ಮತ್ತೆ ಬೆಲೆ ಏರಿಕೆ
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೊಸ ದಾಖಲೆಯನ್ನು ನಿರ್ಮಿಸಿವೆ
ಮೂರು ದಿನಗಳ ನಂತರ ಮತ್ತೆ Petrol ದರ ಏರಿಕೆ, ಹೊಸ ದಾಖಲೆ ನಿರ್ಮಿಸಿದ Petrol-Diesel

ನವದೆಹಲಿ: Petrol Price 27 February 2021 Update: ಹಣದುಬ್ಬರದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮೂರು ದಿನಗಳ ಪರಿಹಾರದ ನಂತರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮತ್ತೆ ಹೆಚ್ಚಿಸಲಾಗಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೊಸ ದಾಖಲೆಯನ್ನು ನಿರ್ಮಿಸಿವೆ.  ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇತರ ಸೇವೆಗಳ ಮೇಲೂ ಪರಿಣಾಮ ಬೀರುತ್ತವೆ.

ಮೂರು ದಿನಗಳ ಪರಿಹಾರದ ಬಳಿಕ ಮತ್ತೆ ದರ ಏರಿಕೆ ಬಿಸಿ: 
ಇಂದು, ದೆಹಲಿಯಲ್ಲಿ ಪೆಟ್ರೋಲ್ 26 ಪೈಸೆಗಳಷ್ಟು ದುಬಾರಿಯಾಗಿದೆ ಮತ್ತು ಪ್ರತಿ ಲೀಟರ್‌ಗೆ  91 ರೂಪಾಯಿಗಳನ್ನು ದಾಟಿದೆ. ದೆಹಲಿಯಲ್ಲಿ ಇಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿಗಳಾಗಿದ್ದು, ಇದು ಇದುವರೆಗೆ ಅತಿ ಹೆಚ್ಚಿನ ದರವಾಗಿದೆ. ಮುಂಬೈನಲ್ಲಿ ಪೆಟ್ರೋಲ್ 13 ಪೈಸೆ ಹೆಚ್ಚಳದಿಂದ 97.47 ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಇಂದು ಲೀಟರ್‌ಗೆ 91.35 ರೂ.ಗೆ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 93.17 ರೂ. ತಲುಪಿದೆ.

4 ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ :
ನಗರ ನಿನ್ನೆ ದರ ಇಂದಿನ ದರ
ದೆಹಲಿ 90.93 91.17
ಮುಂಬೈ 97.34  97.47
ಕೋಲ್ಕತಾ 91.12 91.35
ಚೆನ್ನೈ 92.59 93.17

ಇದನ್ನೂ ಓದಿ - RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel

ಈ ವರ್ಷ ಬೆಲೆಗಳು 26 ಪಟ್ಟು ಹೆಚ್ಚಾಗಿದೆ :
ಇಲ್ಲಿಯವರೆಗೆ, ಈ ವರ್ಷದಲ್ಲಿ ಪೆಟ್ರೋಲ್ (Petrol) ಬೆಲೆ 26 ಪಟ್ಟು ಹೆಚ್ಚಾಗಿದೆ. ಈ ವರ್ಷ ಜನವರಿ 1 ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 83.71 ರೂ ಆಗಿದ್ದು, ಇದೀಗ ಅದು 91 ರೂ.ಗಳನ್ನು ದಾಟಿದೆ. ಒಟ್ಟಾರೆಯಾಗಿ, ಪೆಟ್ರೋಲ್ 7 ರೂಪಾಯಿ 46 ಪೈಸೆ ಹೆಚ್ಚಾಗಿದೆ.

ಇದಲ್ಲದೆ ಮುಂಬೈನಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 88.60 ರೂ., ಬೆಲೆಗೆ ಮಾರಾಟವಾಗುತ್ತಿದ್ದು ಇದುವರೆಗಿನ ಅತ್ಯಂತ ದುಬಾರಿ ದರವಾಗಿದೆ. ದೆಹಲಿಯ ಡೀಸೆಲ್ ಲೀಟರ್‌ಗೆ 81.47 ರೂ. ಕೋಲ್ಕತ್ತಾದ ದರ ಲೀಟರ್‌ಗೆ 84.35 ರೂ. ಮತ್ತು ಚೆನ್ನೈನಲ್ಲಿ (Chennai) ಡೀಸೆಲ್ ಬೆಲೆ ಲೀಟರ್‌ಗೆ 86.45 ರೂ.

ಇದನ್ನೂ ಓದಿ - ಫೆಬ್ರವರಿಯಲ್ಲಿ 3ನೇ ಬಾರಿಗೆ ಏರಿಕೆ ಕಂಡ LPG ದರ, ಎಷ್ಟು ದುಬಾರಿಯಾಗಿದೆ ಎಂದು ತಿಳಿಯಿರಿ

4 ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ :
ನಗರ ನಿನ್ನೆ ದರ ಇಂದಿನ ದರ
ದೆಹಲಿ 81.32 81.47
ಮುಂಬೈ 88.44 88.60
ಕೋಲ್ಕತಾ 84.20 84.35
ಚೆನ್ನೈ 86.31 86.45

ನಿಮ್ಮ ನಗರದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೀಗೆ ತಿಳಿಯಿರಿ: 
ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನೂ ನೀವು ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ಐಒಸಿ (IOC)ಯ 9224992249 ಸಂಖ್ಯೆಗೆ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಆರ್ಎಸ್ಪಿ ಮತ್ತು ನಿಮ್ಮ ಸಿಟಿ ಕೋಡ್ ಬರೆದು ಕಳುಹಿಸುವ ಮೂಲಕ ನೀವು ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಪ್ರತಿ ನಗರ ಕೋಡ್ ವಿಭಿನ್ನವಾಗಿದ್ದು ಐಒಸಿ ತನ್ನ ವೆಬ್‌ಸೈಟ್‌ನಲ್ಲಿ ನಿಮಗೆ ಈ ಮಾಹಿತಿ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News