ನವದೆಹಲಿ: 'ಭಾರತ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ' ಎಂದು ಆರೋಪಿಸಿ ಪಂಜಾಬ್ ಮಾಜಿ ಸಿಎಂ ಹಾಗೂ ಅಕಾಲಿ ದಳದ ಪ್ರಮುಖ ಪ್ರಕಾಶ್ ಸಿಂಗ್ ಬಾದಲ್ ಪದ್ಮ ವಿಭೂಷಣ ವನ್ನು ವಾಪಸ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಮತ್ತು ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್(Parkash Singh Badal) ಅವರು ಪದ್ಮ ವಿಭೂಷಣ ವನ್ನು ವಾಪಸ್ ಪಡೆದು ರೈತರಿಗೆ ಸರ್ಕಾರ ದ್ರೋಹ ಬಗೆದಿದೆ ಎಂದು ಹೇಳಿದ್ದಾರೆ. ಶಿರೋಮಣಿ ಅಕಾಲಿದಳ ವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಕೃಷಿ ಮಸೂದೆಗಳನ್ನು ತ್ಯಜಿಸಿದ ಕೆಲವು ತಿಂಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


Viral Video: ತನ್ನ ಮಾಲೀಕನನ್ನು Bike Ride ಮಾಡಿಸುತ್ತಿದೆ ಈ ಶ್ವಾನ, Swag ನೀವು ನೋಡಿ


ಬಿಜೆಪಿ ನೇತೃತ್ವದ ಸರಕಾರ ತಂದಿರುವ ಕೃಷಿ ಮಾರುಕಟ್ಟೆ ಕುರಿತ ಕಾನೂನುಗಳು ಈಗಾಗಲೇ ರೈತರಿಗೆ ಮಾರಕವಾಗಿವೆ ಎಂದು ಸುಖ್ ಬೀರ್ ಬಾದಲ್ ಹೇಳಿದ್ದಾರೆ. ಬಿಜೆಪಿ ಹಿರಿಯ ಮಿತ್ರಪಕ್ಷವಾದರೂ ರೈತರ ಭಾವನೆಗಳಿಗೆ ಬೆಲೆ ನೀಡುವ ಲ್ಲಿ ಸರಕಾರ ಕಿವಿಗೊಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.


ಗ್ರಾಹಕರಿಗೆ ಸಿಲಿಂಡರ್ ಬಿಸಿ: ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ!