ಗ್ರಾಹಕರಿಗೆ ಸಿಲಿಂಡರ್ ಬಿಸಿ: ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ!

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳು ದುಬಾರಿಯಾಗಿವೆ. ಸರ್ಕಾರವು ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ. ಅದರ ನಂತರ ನೀವು ಮಾರುಕಟ್ಟೆ ದರದಲ್ಲಿ ಸಿಲಿಂಡರ್‌ಗಳನ್ನು ಖರೀದಿಸಬೇಕು. ಆದರೆ ಇದೀಗ ನೀವು ಹೆಚ್ಚುವರಿ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಲು 50 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.

Written by - Yashaswini V | Last Updated : Dec 3, 2020, 01:45 PM IST
  • ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳು ದುಬಾರಿಯಾಗಿವೆ.
  • ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ.
  • ವಾಣಿಜ್ಯ ಸಿಲಿಂಡರ್ ಬೆಲೆಯನ್ನೂ 56 ರೂ.ಗೆ ಹೆಚ್ಚಿಸಲಾಗಿದೆ.
ಗ್ರಾಹಕರಿಗೆ ಸಿಲಿಂಡರ್ ಬಿಸಿ: ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ! title=
File Image

ಬೆಂಗಳೂರು: ಸಬ್ಸಿಡಿ ರಹಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ (Non-Subsidised LPG) ಬೆಲೆಗಳು ಏರಿಕೆಯಾಗಿವೆ. ಐಒಸಿ ಡಿಸೆಂಬರ್‌ನಲ್ಲಿ ಅನಿಲ ಬೆಲೆಗಳನ್ನು ಬಿಡುಗಡೆ ಮಾಡಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ದೇಶಾದ್ಯಂತ 50 ರೂ. ಹೆಚ್ಚಿಸಿದೆ. ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳು (LPG Cylinder) ದುಬಾರಿಯಾಗಿವೆ. ಸರ್ಕಾರವು ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತದೆ. ಅದರ ನಂತರ ನೀವು ಮಾರುಕಟ್ಟೆ ದರದಲ್ಲಿ ಸಿಲಿಂಡರ್‌ಗಳನ್ನು ಖರೀದಿಸಬೇಕು. ಆದರೆ ಇದೀಗ ನೀವು ಹೆಚ್ಚುವರಿ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಸಲು 50 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.

ನಿಮ್ಮ ನಗರದ ಹೊಸ ಎಲ್‌ಪಿಜಿ ದರಗಳು :-
ಐಒಸಿ ವೆಬ್‌ಸೈಟ್‌ನ ಪ್ರಕಾರ ಈ ಹೆಚ್ಚಳದೊಂದಿಗೆ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ (LPG) ಸಿಲಿಂಡರ್ ದರ 644 ರೂ. ಆಗಿದ್ದು, ಈ ಮೊದಲು 594 ರೂ. ಇತ್ತು. ಕೋಲ್ಕತ್ತಾದಲ್ಲೂ ಇದರ ದರ 670.50 ರೂ.ಗಳಿಗೆ ಏರಿದೆ, ಅದು ಮೊದಲು 620.50 ರೂ. ಆಗಿತ್ತು. ಮುಂಬೈಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 594 ರೂ.ಗಳಿಂದ 644 ರೂ.ಗೆ ಏರಿದೆ. ಚೆನ್ನೈನಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 610 ರೂ.ಗಳಿಂದ 660 ರೂ.ಗೆ ಏರಿದೆ. ಇದಲ್ಲದೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನೂ 56 ರೂ.ಗೆ ಹೆಚ್ಚಿಸಲಾಗಿದೆ.

Good News: ಈಗ ನೀವು WhatsApp, SMS ಮೂಲಕ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬುಕ್ ಮಾಡಬಹುದು

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಡಿಸೆಂಬರ್‌ನಲ್ಲಿ...

14.2 ಕೆಜಿ ಎಲ್‌ಪಿಜಿ ಸಿಲಿಂಡರ್
ನಗರ ಹಳೆಯ ದರ ಹೊಸ ದರ
ದೆಹಲಿ 594 644
ಮುಂಬೈ 594 644
ಕೋಲ್ಕತಾ 620.50 670.50
ಚೆನ್ನೈ 610 660

ವಾಣಿಜ್ಯ ಸಿಲಿಂಡರ್ ಸಹ 56 ರೂ. ಏರಿಕೆ 

19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ
ನಗರ ಹೊಸ ದರ
ದೆಹಲಿ 1296
ಮುಂಬೈ 1244
ಕೋಲ್ಕತಾ 1351
ಚೆನ್ನೈ 1410.50

LPG Price: ಈ ಸಿಲಿಂಡರ್‌ಗಳ ಬೆಲೆ 55 ರೂಪಾಯಿಗಳವರೆಗೆ ಹೆಚ್ಚಳ

ತೈಲ ಕಂಪನಿಗಳು ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನಿಗದಿಪಡಿಸುತ್ತವೆ. ಇದಕ್ಕೂ ಮೊದಲು ಜುಲೈ ತಿಂಗಳಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸಿದ್ದವು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ದೇಶೀಯ ಎಲ್‌ಪಿಜಿ ಅನಿಲದ ಸಬ್ಸಿಡಿಯನ್ನೂ ಸಹ ನೀಡಿಲ್ಲ. ಇದರೊಂದಿಗೆ ಸರ್ಕಾರ ನೇರವಾಗಿ 20 ಸಾವಿರ ಕೋಟಿ ರೂ.ಗಳನ್ನೂ ಉಳಿಸಿದೆ.

Trending News