ನವದೆಹಲಿ : ಇಪಿಎಫ್‌ಒ ಆನ್‌ಲೈನ್ ಮೆಂಬರ್ ಪೋರ್ಟಲ್ ತನ್ನ ಸದಸ್ಯರಿಗೆ ಹಲವಾರು ಸೇವೆಗಳನ್ನು ನೀಡುತ್ತಿದೆ, ಅದು ಅವರ ಪಾಸ್‌ಬುಕ್ ಪರಿಶೀಲಿಸುವುದು, ಅವರ ಇಪಿಎಫ್ ನಿಧಿಯನ್ನು ಟ್ರ್ಯಾಕ್ ಮಾಡುವುದು, ಅವರ ಆನ್‌ಲೈನ್‌ನಲ್ಲಿ ಅಕೌಂಟ್ ವರ್ಗಾಯಿಸುವುದು ಮತ್ತು ತಮ್ಮ ಹಣವನ್ನ ಹಿಂಪಡೆಯಲು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕುವುದು ಹೀಗೆ ನಾನಾ ಸೌಲಭ್ಯಗಳನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಇಪಿಎಫ್ ಸದಸ್ಯರು ಪಡೆಯಬಹುದಾದ ಅಂತಹ ಒಂದು ಸೌಲಭ್ಯವೆಂದರೆ ಯುಎಎನ್ ಪೋರ್ಟಲ್(UAN Portal) ಮೂಲಕ ತಮ್ಮ ಬ್ಯಾಂಕ್ ಬ್ಯಾಂಕ್ ಅಕೌಂಟ್ ನಂಬರ್ ನವೀಕರಿಸುವುದು.


ಇದನ್ನೂ ಓದಿ : Indian Currency: ನಿಮ್ಮ ಬಳಿ ಈ ನಾಣ್ಯ ಇದ್ದರೆ ನೀವೂ ಆಗಬಹುದು ಕರೋಡ್ ಪತಿ , ಹೇಗೆ ತಿಳಿಯಿರಿ


ನಿಮ್ಮ ಇಪಿಎಫ್(EPFO) ಬ್ಯಾಂಕ್ ವಿವರಗಳನ್ನು ಆನ್‌ಲೈನ್‌ನಲ್ಲಿ ಹೇಗೆ ಬದಲಾಯಿಸುವುದು ಎಂಬುದರ ಕುರಿತು ಕೆಲವು ಸರಳ ಮತ್ತು ಸುಲಭ ಹಂತಗಳು ಇಲ್ಲಿವೆ.


- ಅಧಿಕೃತ ಇಪಿಎಫ್‌ಒ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.


- ನಿಮ್ಮ ಯುಎಎನ್ ಲಾಗ್ ಇನ್ ಐಡಿ ಮತ್ತು ಪಾಸ್‌ವರ್ಡ್(Password) ಬಳಸಿ.


 - ಮೆನು ವಿಭಾಗಕ್ಕೆ ಹೋಗಿ.


- ಈಗ “MANAGE” ಬಟನ್ ಕ್ಲಿಕ್ ಮಾಡಿ.


- ಡ್ರಾಪ್-ಡೌನ್ ನಿಂದ, “KYC” ಕ್ಲಿಕ್ ಮಾಡಿ.


 - ನಿಮ್ಮನ್ನು ಮತ್ತೊಂದು ಲ್ಯಾಂಡಿಂಗ್ ಪುಟಕ್ಕೆ ಕರೆದೊಯ್ಯಲಾಗುತ್ತದೆ.


- ಈಗ “BANK” ಆಯ್ಕೆಯನ್ನು ಆರಿಸಿ.


- ನೀವು ಈ ಆಯ್ಕೆಗಳನ್ನು ನೋಡಬಹುದು:


a. ಡಾಕ್ಯುಮೆಂಟ್ ಸಂಖ್ಯೆ (Bank Account Number)


b. ಡಾಕ್ಯುಮೆಂಟ್ ಪ್ರಕಾರ ಹೆಸರು (ಬ್ಯಾಂಕ್ ಖಾತೆಯಲ್ಲಿ ಹೆಸರು)


c. ಐಎಫ್‌ಎಸ್‌ಸಿ ಕೋಡ್


- ಅಗತ್ಯ ವಿವರಗಳನ್ನು ಭರ್ತಿ ಮಾಡಿ.


- ಸೇವ್ ಬಟನ್ ಒತ್ತಿರಿ.


ಇದನ್ನೂ ಓದಿ : UPPSC Recruitment 2021: 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.


ನೀವು ಬದಲಾವಣೆಗಳನ್ನು ಮಾಡಿದ ನಂತರ, ನಿಮ್ಮ ಆನ್‌ಲೈನ್(Online) ಸೇವೆಯು ಅನುಮೋದನೆಗಾಗಿ KYC ಬಾಕಿ ಉಳಿದಿದೆ ಎಂದು ತೋರಿಸುತ್ತದೆ. ಇದರರ್ಥ ನೀವು ನವೀಕರಿಸಿದ ಬ್ಯಾಂಕ್ ವಿವರಗಳ ಪುರಾವೆಗಳನ್ನು ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಬೇಕಾಗುತ್ತದೆ. ನಿಮ್ಮ ಉದ್ಯೋಗದಾತ ನಿಮ್ಮ ಕೆವೈಸಿ ನವೀಕರಣ ವಿನಂತಿಯನ್ನು ಅಂಗೀಕರಿಸಿದ ನಂತರ, ನಿಮ್ಮ ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಲಾಗುತ್ತದೆ / ಬದಲಾಯಿಸಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕವೂ ಈ ಕುರಿತು ಸಂದೇಶವನ್ನು ರವಾನಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ