Indian Currency: ನಿಮ್ಮ ಬಳಿ ಈ ನಾಣ್ಯ ಇದ್ದರೆ ನೀವೂ ಆಗಬಹುದು ಕರೋಡ್ ಪತಿ , ಹೇಗೆ ತಿಳಿಯಿರಿ

Indian Currency : 10 ಕೋಟಿ ರೂ.ಗಳ ಬಿಡ್ ಮಾಡಲಾಗುತ್ತಿರುವ ನಾಣ್ಯ, ಸಾಮಾನ್ಯ ನಾಣ್ಯವಂತು ಅಲ್ಲವೇ ಅಲ್ಲ. ಇದು ಬಹಳ ಅಪರೂಪದ ನಾಣ್ಯವಾಗಿರಲೇಬೇಕು. ಹಾಗಿದ್ದರೆ ಈ ನಾಣ್ಯ ಯಾವುದು ನೋಡೋಣ. 

Written by - Ranjitha R K | Last Updated : Jul 21, 2021, 01:55 PM IST
  • ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮಗಿದೆಯೇ
  • ಹಾಗಿದ್ದರೆ ನಿಮ್ಮ ಬಳಿ ಈ ನಾಣ್ಯ ಇದೆಯಾ ನೋಡಿಕೊಳ್ಳಿ
  • ಈ ನಾಣ್ಯ ನಿಮ್ಮ ಬಳಿ ಇದ್ದರೆ ಕುಳಿತಲ್ಲೇ 10 ಕೋಟಿ ರೂ. ಸಂಪಾದಿಸಬಹುದು.
Indian Currency: ನಿಮ್ಮ ಬಳಿ ಈ ನಾಣ್ಯ ಇದ್ದರೆ ನೀವೂ ಆಗಬಹುದು  ಕರೋಡ್ ಪತಿ , ಹೇಗೆ ತಿಳಿಯಿರಿ  title=
ಈ ನಾಣ್ಯ ನಿಮ್ಮ ಬಳಿ ಇದ್ದರೆ ಕುಳಿತಲ್ಲೇ 10 ಕೋಟಿ ರೂ. ಸಂಪಾದಿಸಬಹುದು. (photo india.com)

ನವದೆಹಲಿ : Indian Currency : ನಿಮಗೂ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿಯಿದೆ. ನೀವು ಸಂಗ್ರಹಿಸಿದ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ಮಾರಾಟ (Online coin sale) ಮಾಡುವ ಮೂಲಕ, ಸಾಕಷ್ಟು ಹಣವನ್ನು ಗಳಿಸಬಹುದು. ಕೆಲವೇ ನಿಮಿಷಗಳಲ್ಲಿ ಇದು ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡಬಹುದು. ಆದರೆ ನೆನಪಿರಲಿ ನಿಮ್ಮ ಬಳಿ ಈ ನಾಣ್ಯ ಇರುವುದು ಅಗತ್ಯ. ಈ ನಾಣ್ಯ ನಿಮ್ಮ ಬಳಿ ಇದ್ದರೆ ಕುಳಿತಲ್ಲೇ  ಕ್ಷಣ ಮಾತ್ರಗಳಲ್ಲಿ 10 ಕೋಟಿ ರೂಪಾಯಿಗಳನ್ನು ಸಂಪಾದಿಸಬಹುದು. 

ಈ ಅಪರೂಪದ ನಾಣ್ಯದ ಬೆಲೆ 9 ಕೋಟಿ 99 ಲಕ್ಷ ರೂಪಾಯಿಗಳು  :
10 ಕೋಟಿ ರೂ.ಗಳ ಬಿಡ್ ಮಾಡಲಾಗುತ್ತಿರುವ ನಾಣ್ಯ, ಸಾಮಾನ್ಯ ನಾಣ್ಯವಂತು ಅಲ್ಲವೇ ಅಲ್ಲ. ಇದು ಬಹಳ ಅಪರೂಪದ ನಾಣ್ಯವಾಗಿರಲೇಬೇಕು (Old coin sale). ಹಾಗಿದ್ದರೆ ಈ ನಾಣ್ಯ ಯಾವುದು ನೋಡೋಣ. ಈ ನಾಣ್ಯ ಬ್ರಿಟಿಷ್ ಆಳ್ವಿಕೆಯ ಕಾಲದ್ದಾಗಿದೆ.  ಈ 1 ರೂಪಾಯಿ ನಾಣ್ಯವನ್ನು 1885 ರಲ್ಲಿ ಮುದ್ರಿಸಲಾಗಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ (Online platform) ನೋಂದಾಯಿಸಿಕೊಳ್ಳುವ ಮೂಲಕ ನೀವು ಆನ್‌ಲೈನ್ ಬಿಡ್‌ಗಳನ್ನು ಆಹ್ವಾನಿಸಬಹುದು. ಈ ನಾಣ್ಯಕ್ಕಾಗಿ, 9 ಕೋಟಿ 99 ಲಕ್ಷ ರೂಪಾಯಿಗಳಿಗೆ ಬಿಡ್ ಕೂಗಬಹುದು. 

ಇದನ್ನೂ ಓದಿ : IRCTC: ಆನ್‌ಲೈನ್ ಟಿಕೆಟ್ ಬುಕ್ ಆಗಿಲ್ಲ, ಆದರೆ ಖಾತೆಯಿಂದ ಹಣ ಕಡಿತಗೊಂಡಿದೆಯೇ? ಈ ರೀತಿ ರೀಫಂಡ್ ಪಡೆಯಬಹುದು

ಬಿಡ್‌ ಮಾಡುವುದು ಹೇಗೆ? 
ಈ ಹಳೆಯ ಮತ್ತು ಅಪರೂಪದ ರೀತಿಯ ನಾಣ್ಯಕ್ಕಾಗಿ, ನೀವು ಆನ್‌ಲೈನ್ ಪ್ಲಾಟ್‌ಫಾರ್ಮ್ OLX ನಲ್ಲಿ ನೋಂದಾಯಿಸಿಕೊಳ್ಳಬೇಕು. ಲಾಗಿನ್ ಮಾಡಲು ನಿಮ್ಮ ಪ್ರೊಫೈಲ್ ಅನ್ನು ಕ್ರೀಯೇಟ್ ಮಾಡಬೇಕು. ಇದರ ನಂತರ, OLX ನಲ್ಲಿ ಉಚಿತವಾಗಿ ಜಾಹೀರಾತನ್ನು ಪೋಸ್ಟ್ ಮಾಡುವ ಮೂಲಕ, ಬಿಡ್‌ಗಳನ್ನು ಆಹ್ವಾನಿಸಬಹುದು. ಯಾರಿಗೆ ಈ ನಾಣ್ಯಗಳನ್ನು ಖರೀದಿಸಲು ಆಸಕ್ತಿ ಇರುತ್ತದೆಯೋ ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ.  ಇದಲ್ಲದೆ, ನಿಮ್ಮ ಪ್ರೊಫೈಲ್  ಕ್ರೀಯೇಟ್ ಮಾಡಿ Indiamart.com ಮೂಲಕ  ಕೂಡಾ ಗೆ ಲಾಗಿನ್ ಆಗಬಹುದು. ನಿಮ್ಮಲ್ಲಿರುವ ನಾಣ್ಯದ ಫೋಟೋ ಕ್ಲಿಕ್ ಮಾಡಿ ಅದನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಬಹುದು. ನಂತರ ಬಿಡ್‌ಗಳನ್ನು ಆಹ್ವಾನಿಸಬಹುದು. ಇಲ್ಲಿ ಕೂಡಾ ನಾಣ್ಯ ಖರೀದಿಸಲು ಆಸಕ್ತಿ ಇರುವವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಅಲ್ಲದೆ, ಹಣವನ್ನು ಹೇಗೆ ತೆಗೆದುಕೊಳ್ಳುವುದು ನಾಣ್ಯವನ್ನು ಹೇಗೆ ನೀಡುವುದು ಈ ಎಲ್ಲಾ ವಿಚಾರಗಳ ಬಗ್ಗೆ ಮಾತುಕತೆಯ   ಸಮಯದಲ್ಲಿ ನಿರ್ಧರಿಸಬಹುದು. 

ಇದನ್ನೂ ಓದಿ : EPFO: ನಿಮ್ಮ ಪಿಎಫ್ ಖಾತೆ ಸಂಖ್ಯೆಯಲ್ಲಿ ಅಡಗಿರುವ ಈ ಪ್ರಮುಖ ಮಾಹಿತಿ ಬಗ್ಗೆ ತಿಳಿದಿದೆಯೇ?

(ವಿವಿಧ ಮೂಲಗಳ ಆಧಾರದ ಮೇಲೆ ಈ ಮಾಹಿತಿಯನ್ನು ನೀಡಲಾಗಿದೆ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ಯಾವುದೇ ರೀತಿಯಲ್ಲೂ ಪುಷ್ಟೀಕರಿಸುವುದಿಲ್ಲ. )  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News