UPPSC Recruitment 2021: 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.

3 ಸಾವಿರ ಸ್ಟಾಪ್ ನರ್ಸ್/ ಸಿಸ್ಟರ್ ಗ್ರೇಡ್-2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Written by - Zee Kannada News Desk | Last Updated : Jul 21, 2021, 01:43 PM IST
  • ಉತ್ತರಪ್ರದೇಶ ಸಾರ್ವಜನಿಕ ಸೇವಾ ಆಯೋಗದಲ್ಲಿ ಖಾಲಿ ಇರುವ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಸ್ಟಾಪ್ ನರ್ಸ್/ ಸಿಸ್ಟರ್ ಗ್ರೇಡ್-2 ಹುದ್ದೆಗಳಿಗೆ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
  • ಆನ್ ಲೈನ್ ಮೂಲಕ ಪರೀಕ್ಷಾ ಶುಲ್ಕ ಕಟ್ಟಲು ಆ.12 ಮತ್ತು ಅರ್ಜಿ ಸಲ್ಲಿಸಲು ಆ.16 ಕೊನೆಯ ದಿನಾಂಕವಾಗಿರುತ್ತದೆ
UPPSC Recruitment 2021: 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ.   title=
3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ(UPPSC)ದಲ್ಲಿ ಖಾಲಿ ಇರುವ ಸ್ಟಾಪ್ ನರ್ಸ್/ ಸಿಸ್ಟರ್ ಗ್ರೇಡ್-2(ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು UPPSCಯ ಅಧಿಕೃತ ವೆಬ್ ಸೈಟ್ uppsc.up.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 2021ನೇ ಸಾಲಿನ ಪರೀಕ್ಷೆ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಖಾಲಿ ಇರುವ ಹುದ್ದೆಗಳ ಸಂಖ್ಯೆ

2021ರ ಜುಲೈ 16ರಂದು ಹೊರಡಿಸಲಾದ ಸರ್ಕಾರದ ಅಧಿಕೃತ ಅಧಿಸೂಚನೆ(Notification)ಯ ಪ್ರಕಾರ ಸ್ಟಾಪ್ ನರ್ಸ್/ಸಿಸ್ಟರ್ ಗ್ರೇಡ್-2(ಪುರುಷ) 341 ಹುದ್ದೆಗಳು, ಸ್ಟಾಪ್ ನರ್ಸ್/ಸಿಸ್ಟರ್-2(ಮಹಿಳಾ) 2,671 ಹುದ್ದೆಗಳು ಖಾಲಿ ಇವೆ.  

ಉತ್ತರ ಪ್ರದೇಶದ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಇಲಾಖೆ, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಇಲಾಖೆ ಮತ್ತು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿನ ಖಾಲಿ ಹುದ್ದೆಗಳಿಗೆ(Vacancies) ನೇಮಕಾತಿ ನಡೆಯಲಿದೆ. ಅವಶ್ಯಕತೆಗೆ ಸಂಬಂಧಿಸಿದಂತೆ ಈ ಹುದ್ದೆಗಳ ಸಂಖ್ಯೆ ಹೆಚ್ಚಾಗಬಹುದು ಅಥವಾ ಕಡಿಮೆಯಾಗಲೂಬಹುದು ಎಂದು ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.  

ಇದನ್ನೂ ಓದಿ: Raj Kundra ಹೊಸ WhatsApp ಚಾಟ್ ನಲ್ಲಿ ಹಲವು ಸಂಗತಿಗಳು ಬಹಿರಂಗ

ಹುದ್ದೆ

ತಾತ್ಕಾಲಿಕ, ಗ್ರೂಪ್ ‘B’ ನಾನ್-ಗೆಜೆಟೆಡ್

ಸಂಬಳ

₹9,300- ₹34,800, ಗ್ರೇಡ್ ಪೇ ₹4,600 - (ಪರಿಷ್ಕೃತ ಪೇ ಸ್ಕೇಲ್ ಲೇವಲ್-7 ಪೇ ಮ್ಯಾಟ್ರಿಕ್ಸ್ ₹44,900 - ₹1,42,400)

ಇದನ್ನೂ ಓದಿ: ನಾಯಕತ್ವದ ಬದಲಾವಣೆ ಮಧ್ಯ ಬಿಜೆಪಿ ಶಾಸಕರಿಗೆ ಭೋಜನ ಕೂಟ ಕರೆದ ಸಿಎಂ ಬಿಎಸ್‌ವೈ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಸ್ಟಾಪ್ ನರ್ಸ್/ಸಿಸ್ಟರ್ ಗ್ರೇಡ್-2 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪರೀಕ್ಷಾ ಶುಲ್ಕ ಕಟ್ಟಲು 2021ರ ಆಗಸ್ಟ್ 12 ಕೊನೆಯ ದಿನಾಂಕವಾಗಿದೆ. ಅದೇ ರೀತಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಲು ಆಗಸ್ಟ್ 16 ಅಂತಿಮ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸಲು ವಯಸ್ಸಿನ ಮೀತಿ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 2021ರ ಜುಲೈ 1ರಂತೆ 21-40 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಗಳಿಗೆ ವಯಸ್ಸಿನ ವಿನಾಯತಿ ಸಹ ನೀಡಲಾಗುತ್ತದೆ.

Click here to check Educational Qualification, Application Fee and other details

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News