ಮಹಾರಾಷ್ಟ್ರ: ಭಿವಾಂಡಿಯ ರೈತ ಜನಾರ್ಧನ್ ಭೋಯಿರ್ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಇಲ್ಲ ಎಂದಲ್ಲ , ರೈತನೊಬ್ಬ ಹೆಲಿಕ್ಯಾಪ್ಟರ್ ಮಾಲೀಕ (helicopter owner) ಎಂದರೆ ನಂಬುವುದು ಕಷ್ಟ. ಆದರೆ ಇದು ಅಕ್ಷರಶಃ ಸತ್ಯ.  ವಿಷಯ ಏನಂದ್ರೆ, ಜನಾರ್ದನ್ (Janardhan) ತನ್ನ ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸುತ್ತಾರೆ. ಈ ಕಾರಣದಿಂದ ತನ್ನ ಪ್ರಯಾಣ ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದ ಜನಾರ್ಧನ್ ಹೆಲಿಕ್ಯಾಪ್ಟರ್ ಖರೀದಿಸಿದ್ದಾರೆ. 


COMMERCIAL BREAK
SCROLL TO CONTINUE READING

ಡೈರಿ ವ್ಯವಹಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ರೈತ ಜನಾರ್ದನ್ : 
ಕೃಷಿ ಮತ್ತು ಹಾಲು ವ್ಯಾಪಾರ ಮಾಡುವ ರೈತ ಜನಾರ್ದನ್ ಭೋಯಿರ್ ಡೈರಿ ವ್ಯವಹಾರಕ್ಕಾಗಿ ಆಗಾಗ್ಗೆ ಪಂಜಾಬ್ (Punjab) , ಗುಜರಾತ್ (Gujrat), ಹರಿಯಾಣ, ರಾಜಸ್ಥಾನದಂತಹ (Rajastan) ಪ್ರದೇಶಗಳಿಗೆ ಪ್ರಯಣ ಬೆಳೆಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ತನ್ನ ಪ್ರಯಾಣ ಸುಗಮವಾಗಿರಲಿ ಎಂಬ ಕಾರಣದಿಂದಾಗಿ,  30 ಕೋಟಿ ಮೌಲ್ಯದ ಹೆಲಿಕಾಪ್ಟರ್ (Helicopter) ಖರೀದಿಸಿದ್ದಾರೆ. ಹೆಲಿಕ್ಯಾಪ್ಟರ್ ಖರೀದಿಸಿದ ಕಾರಣ ಇದೀಗ ಲ್ಲಾ ಕಡೆ ಜನಾರ್ಧನ್ ಅವರದ್ದೇ ಮಾತು.  


ಇದನ್ನೂ ಓದಿ : Fastag : ಮಧ್ಯರಾತ್ರಿಯಿಂದ Fastag ಅನಿವಾರ್ಯ, ವಿಸ್ತರಣೆ ಆಗಲ್ಲ ಡೆಡ್ ಲೈನ್..! ಇಲ್ಲಿದೆ ಅಗತ್ಯ ಮಾಹಿತಿ


ಮಾರ್ಚ್ 15 ರಂದು ತಲುಪಲಿರುವ ಹೆಲಿಕ್ಯಾಪ್ಟರ್ : 
ಜನಾರ್ದನ್ ಭೋಯಿರ್ (Janardhan ) ಅವರು ತಮ್ಮ ಮನೆಯ ಸಮೀಪ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಇದಲ್ಲದೆ, ತನ್ನ 2.5 ಎಕರೆ ಜಾಗದಲ್ಲಿ ಪೈಲಟ್ ರೂಮ್ (pilot room), ಟೆಕ್ನಿಷಿಯನ್ ರೂಮ್ ಸಹ ಸಿದ್ಧಪಡಿಸಲಾಗಿದೆ. ಮಾರ್ಚ್ 15 ರಂದು  ಜನಾರ್ಧನ್ ಅವರಿಗೆ ಹೆಲಿಕ್ಯಾಪ್ಟರ್ ಡೆಲಿವೆರಿ (Delivery) ಸಿಗಲಿದೆ.  


ಜನಾರ್ದನ್ ಭೋಯಿರ್ ಕೃಷಿಯ (Agricuture) ಹೊರತಾಗಿ, ರಿಯಲ್ ಎಸ್ಟೇಟ್ (Real Estate) ನಡೆಸುತ್ತಾರೆ. ಅನೇಕ ದೊಡ್ಡ ಕಂಪನಿಗಳು ಭಿವಾಂಡಿ ಪ್ರದೇಶದಲ್ಲಿ ಗೋದಾಮುಗಳನ್ನು ಹೊಂದಿದ್ದು, ಇದರಿಂದ ಉತ್ತಮ ಬಾಡಿಗೆಗಳನ್ನು ಕೂಡಾ ಪಡೆಯುತ್ತಾರೆ. ಜನಾರ್ದನ್ ಭೋಯಿರ್ ಸಹ ಅನೇಕ ಗೋದಾಮುಗಳನ್ನು ಹೊಂದಿದ್ದು, ಇದರಿಂದ ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ಸಂಪಾಸುತ್ತಾರೆ. 


ಇದನ್ನೂ ಓದಿ : New Labor Laws ಜಾರಿಗೆ ಮುಂದಾದ ಕೇಂದ್ರ ಸರ್ಕಾರ, ನೌಕರರಿಗೆ ಸಿಗಲಿದೆ ಬಿಗ್ ಗಿಫ್ಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.