ನವದೆಹಲಿ: ಕೃಷಿ ಕ್ಷೇತ್ರ ಅಭಿವೃದ್ಧಿ ಮತ್ತು ರೈತರಿಗೆ ಸಹಾಯವಾಗಿ ನಿಲ್ಲಲು ಮೋದಿ ಸರ್ಕಾರ (Modi Govt) SMAM (Sub Mission on Agricultural Mechanization) ಕಿಸಾನ್‌ ಯೋಜನೆ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಈಗಾಗಲೆ ಜಾರಿಗೆ ತಂದಿದೆ. ಈ ಯೊಜನೆ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಕೃಷಿ ಉಪಕರಣಗಳನ್ನು ಖರೀದಿಸಲು ನೆರವಾಗಲಿದೆ. 


COMMERCIAL BREAK
SCROLL TO CONTINUE READING

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಕಡಿಮೆ ದರದಲ್ಲಿ ಕೃಷಿ ಉಪಕರಣಗಳನ್ನು ರೈತರು (Farmers) ಖರೀದಿಸುವಂತೆ ಸಹಾಯವಾಗಲು ಸರ್ಕಾರ ಈಗಾಗಲೇ 553 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಲಾಭ ಪಡೆಯಲು ರೈತರು, ಫಲಾನುಭವಿಗಳು  https://agrimachinery.nic.in/. ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.


ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ಬರಲಿದೆ 2000 ರೂ.! ಇಲ್ಲಿದೆ ಫುಲ್ ಡೀಟೇಲ್ಸ್


SMAM ಕಿಸಾನ್‌ ಯೋಜನೆ ಅಡಿಯಲ್ಲಿ ಸರ್ಕಾರ ರೈತತರಿಗೆ 50- 80 ಪ್ರತಿಶತ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳು ದೊರೆಯುವಂತೆ ಮಾಡಿದೆ. ಈ ಯೋಜನೆ ದೇಶದ ಎಲ್ಲಾ ರಾಜ್ಯದ ರೈತರನ್ನು ತಲುಪಲಿದ್ದು ರೈತರು ಈ ಯೋಜನೆಯ ಉಪಯೋಗಪಡೆದುಕೊಳ್ಳಬಹುದು . 


ಈ ಯೋಜನೆಯ ಉಪಯೋಗ ಪಡೆದುಕೊಳ್ಲಲಿಚ್ಚಿಸುವವರು ನಿಮ್ಮ ಗುರುತಿನ ಚೀಟಿ, ಆಧಾರ್ ಕಾರ್ಡ್ (Aadhaar Card) , ಪಾಸ್‌ಪೋರ್ಟ್‌ ಸೈಜ್‌ ಫೋಟೊ, ಭೂಮಿ ಹಕ್ಕು ಪತ್ರ ( ROR), ಯೋಜನೆಯ ಫಲ ಪಡೆದುಕೊಳ್ಲಲಿರುವ ವ್ಯಕ್ತಿಯ ಬ್ಯಾಕ್‌ ಖಾತೆಯ ಪಾಸ್‌ಬುಕ್‌ನ ಮುಖಪುಟದ ನಕಲು , ಆಧಾರ್‌ ಕಾರ್ಡ್‌/ಚುನಾವಣಾ ಗುರುತಿನ ಚೀಟಿಯ ನಕಲು ಪ್ರತಿ, ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ನೀಡಬೇಕಾಗುತ್ತದೆ .


ಇನ್ಮುಂದೆ ರೈತರಿಗೆ ಸುಲಭವಾಗಿ ಸಿಗಲಿದೆ ಅಗ್ಗದ ಸಾಲ, 1.5 ಕೋಟಿ ರೈತರಿಗೆ ಲಾಭ


ನೊಂದಾವಣಿ ವಿಧಾನ ಹೇಗೆ ? 
ರೈತರು ತಮ್ಮ ಹೆಸರನ್ನು ನೋಂದಾಯಿಸಲು ವೆಬ್‌ಸೈಟ್‌ನಲ್ಲಿ ನಿಮ್ಮ ಜಿಲ್ಲೆ , ತಾಲೂಕು , ಗ್ರಾಮವನ್ನು ಆಯ್ಕೆ ಮಾಡಬೇಕು . ರೈತರ ಹೆಸರು ಆಧಾರ್‌ ಕಾರ್ಡ್‌ನಲ್ಲಿ ಇರುವಂತೆ ನೊಂದಾಯಿಸಬೇಕು . ರೈತರ ವಿವರ, ಸಣ್ಣ, ಮಧ್ಯಮ, ದೊಡ್ಡ ಇಳುವರಿದಾರರ ಕುರಿತ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು. ಈ ಮೂಲಕ ವೆಬ್‌ಸೈಟ್‌ನಲ್ಲಿ ಹೆಸರು, ವಿವರ ನೊಂದಾಯಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ .