ದೆಹಲಿ: ಟಿವಿ ಜಾಹೀರಾತುಗಳು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.  ಚಾಕೊಲೇಟ್ ಕಂಪನಿ ಕ್ಯಾಡ್ಬರಿಯ (Cadbury) ಜಾಹೀರಾತೊಂದು ಆರನೇ ತರಗತಿಯಲ್ಲಿ ಓದುತ್ತಿರುವ ಹುಡುಗನ ಮನಸ್ಸಿನ ಮೇಲೆ ಭಾರೀ  ಪರಿಣಾಮವನ್ನು ಬೀರಿದೆ. ಮಗ ತಂದೆ ಹೇಳಿದ ಮಾತನ್ನು ನಿರ್ಲಕ್ಷಿಸಿದ್ದಾನೆ. ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡಲು ತಂದೆ ಹೇಳಿದಾಗ  "ಕೆಲಸ ಮಾಡದಿರುವುದು ಸಹ ಸಹಾಯ ಮಾಡುತ್ತದೆ" ಎಂಬ ಉತ್ತರ ಮಗನಿಂದ ಬಂದಿದೆ. ಮಗು  ಜಾಹೀರಾತಿನಿಂದ (Avertisement) ಎಷ್ಟು ಪ್ರಭಾವಿತನಾಗಿದ್ದಾನೆ ಎನ್ನುವುದು ಇದಕ್ಕೆ ಉದಾಹರಣೆಯಾಗಿದೆ. 


COMMERCIAL BREAK
SCROLL TO CONTINUE READING

ಮಕ್ಕಳ ಮೇಲೆ ಪ್ರಭಾವ ಬೀರುತ್ತಿರುವ ಜಾಹೀರಾತು : 
ಮಗನ ಉತ್ತರದಿಂದ ಅಸಮಾಧಾನಗೊಂಡ ತಂದೆ ಅಮಿತ್ ಗಾಂಧಿ,  ಕಂಪನಿಯ ಜಾಹೀರಾತಿನ ವಿರುದ್ಧ ನೇರವಾಗಿ ಅಜ್ಮೀರ್ ಗ್ರಾಹಕ ಆಯೋಗಕ್ಕೆ ಅರ್ಜಿ ಸಲ್ಲಿಸಿದರು. ಈ ಜಾಹೀರಾತು ಭಾರತೀಯ ಸಂಸ್ಕೃತಿ ಮತ್ತು ನೈತಿಕತೆಗೆ ವಿರುದ್ಧವಾಗಿದೆ, ಆದ್ದರಿಂದ ಇದನ್ನು ತಕ್ಷಣ ನಿಷೇಧಿಸಬೇಕು ಎಂದು  ಅರ್ಜಿಯಲ್ಲಿ ಕೋರಿದ್ದಾರೆ.  ಗ್ರಾಹಕ ಆಯೋಗವು ಕಂಪನಿಗೆ ನೋಟಿಸ್ (Notice) ನೀಡಿದ್ದು, ಮೇ 4 ರವರೆಗೆ ಉತ್ತರ ನೀಡುವಂತೆ ಹೇಳಿದೆ. 


ಇದನ್ನೂ ಓದಿ ಈ ರಾಜ್ಯದಲ್ಲಿ 18ರಿಂದ 45ವರ್ಷದ ಒಳಗಿನವರಿಗೆ ಕರೋನಾ ಲಸಿಕೆ ನೀಡುವ ಪ್ರಸ್ತಾವನೆ


ಅಜ್ಮೀರ್‌ನ ರಾಮ್‌ನಗರದಲ್ಲಿ ವಾಸಿಸುವ ವಕೀಲ ಅಮಿತ್ ಗಾಂಧಿನನ್ನು ಎಂಬವರು ತನ್ನ ಮಗನಲ್ಲಿ ತಾತನಿಗೆ ಔಷಧಿ (Medicine)  ನೀಡು ಎಂದು ಹೇಳಿದ್ದಾರೆ. ಈ ವೇಳೆ ಚಾಕಲೆಟ್ (Chocolate) ತಿನ್ನುತ್ತಿದ್ದ ಮಗ ತಂದೆಯ ಮಾತನ್ನು ಕೇಳಿಸಿಕೊಂಡಿಲ್ಲ. ತಂದೆ ಮತ್ತೆ ಗದರಿ ಅದೇ ಕೆಲಸವನ್ನು ಹೇಳಿದಾಗ   ಏನನ್ನೂ ಮಾಡದಿರುವುದು ಜನರಿಗೆ ಸಹಾಯ ಮಾಡುತ್ತದೆ ಮತ್ತು ಅವರ ಜೀವವನ್ನು ಉಳಿಸುತ್ತದೆ" ಎಂಬ ಉತ್ತರ ಮಗನಿಂದ ಬಂದಿದೆ.  ಇದರ ನಂತರ, ಮಗ  ತಂದೆಗೆ ಚಾಕೊಲೇಟ್ ಕಂಪನಿಯ (Chocolate company) ಜಾಹೀರಾತಿನ ಬಗ್ಗೆ ಹೇಳಿದ್ದಾನೆ, ಅದೇ ಜಾಹೀರಾತನ್ನು ತಂದೆಗೆ ತೋರಿಸಿದ್ದಾನೆ. 


5 ಲಕ್ಷ ಪರಿಹಾರ ಕೋರಿದ ಅಮಿತ್ ಗಾಂಧಿ :
ತಪ್ಪುದಾರಿಗೆಳೆಯುವ ಜಾಹೀರಾತನ್ನು (Avertisement)ನಿಷೇಧಿಸಬೇಕೆಂದು ಅಮಿತ್ ಗಾಂಧಿ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ ಮತ್ತು 5 ಲಕ್ಷ ರೂ. ಪರಿಹಾರವನ್ನು ಕೋರಿದ್ದಾರೆ. ಅರ್ಜಿಯನ್ನು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ರಮೇಶ್ ಕುಮಾರ್ ಶರ್ಮಾ, ಸದಸ್ಯ ಅಲ್ಕಾ ರಾಣಿ ಜೈನ್ ಅವರು ವಿಚಾರಣೆ ನಡೆಸಿದ್ದು, ಚಾಕೊಲೇಟ್ ಕಂಪನಿಗೆ ನೋಟಿಸ್ ನೀಡಲಾಗಿದೆ.


ಇದನ್ನೂ ಓದಿ RC Renewal: 'ಹಳೆಯ ವಾಹನ ಮಾಲೀಕ'ರಿಗೆ ಬಿಗ್ ಶಾಕ್: 'RC ನವೀಕರಣ' ಫೀಸ್ ಭಾರಿ ಹೆಚ್ಚಳ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.