RC Renewal: 'ಹಳೆಯ ವಾಹನ ಮಾಲೀಕ'ರಿಗೆ ಬಿಗ್ ಶಾಕ್: 'RC ನವೀಕರಣ' ಫೀಸ್ ಭಾರಿ ಹೆಚ್ಚಳ!

15 ವರ್ಷಕ್ಕಿಂತ ಹಳಯ ಮೋಟಾರು ವಾಹನಗಳಿಗೆ RC ನವೀಕರಣಗೊಂಡಿರುವಂತ ದುಬಾರಿ ಶುಲ್ಕ

Last Updated : Mar 18, 2021, 02:55 PM IST
  • ಕೇಂದ್ರ ಸರ್ಕಾರ, 15 ವರ್ಷಗಳಿಗೂ ಹೆಚ್ಚು ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತ ಕಾನೂನು ಜಾರಿಗೆ ತಂದಿದೆ.
  • ಹೊಸ ಕರಡು ಅಧಿಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದೆ.
  • 15 ವರ್ಷಕ್ಕಿಂತ ಹಳಯ ಮೋಟಾರು ವಾಹನಗಳಿಗೆ RC ನವೀಕರಣಗೊಂಡಿರುವಂತ ದುಬಾರಿ ಶುಲ್ಕ
RC Renewal: 'ಹಳೆಯ ವಾಹನ ಮಾಲೀಕ'ರಿಗೆ ಬಿಗ್ ಶಾಕ್: 'RC ನವೀಕರಣ' ಫೀಸ್ ಭಾರಿ ಹೆಚ್ಚಳ! title=

ನವದೆಹಲಿ: ಕೇಂದ್ರ ಸರ್ಕಾರ, 15 ವರ್ಷಗಳಿಗೂ ಹೆಚ್ಚು ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತ ಕಾನೂನು ಜಾರಿಗೆ ತಂದಿದೆ. ಈ ಮೂಲಕ, ಭಾರತದಲ್ಲಿ ಹಳೆಯ ವಾಹನಗಳನ್ನು ಶವ ಪೆಟ್ಟಿಗೆಗೆ ಸಾಗಿಸೋದಕ್ಕೆ ಕೊನೆಯ ಮೊಳೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಸಿದ್ಧವಾಗಿದೆ. ಅದು ಹೇಗೆ ಅದ್ರೇ.. 15 ವರ್ಷಕ್ಕೂ ಹೆಚ್ಚು ಹಳೆಯ ವಾಹನಗಳ ಆರ್ ಸಿ ನವೀಕರಣಕ್ಕೆ ಇದೀಗ ದುಬಾರಿ ಶುಲ್ಕ ವಿಧಿಸುವ ಮೂಲಕವಾಗಿದೆ. ಈ ಮೂಲಕ ಹಳೆಯ ವಾಹನ ಮಾಲೀಕರಿಗೆ ಬಿಗ್ ಶಾಕ್ ಅನ್ನು ಕೇಂದ್ರ ಸರ್ಕಾರ ನೀಡಿದೆ.

ಹೌದು, 15 ವರ್ಷ ಹಳೆಯ ವಾಹನಗಳ ಆರ್ ಸಿ ನವೀಕರಣದ ಶುಲ್ಕ ಹೆಚ್ಚಳದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಹೊಸ ಕರಡು ಅಧಿಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲ(Ministry of Road Transport and Highways)ಯ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ, ಈ ವರ್ಷದ ಕೊನೆಯಲ್ಲಿ (ಅಕ್ಟೋಬರ್ 1, 2021ರಿಂದ) ಅಂತಹ ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು ನವೀಕರಿಸುವುದು ದುಬಾರಿಯಾಗಲಿದೆ. ಈ ಏರಿಕೆಯು ಖಾಸಗಿ ವಾಹನಗಳಿಗೆ ಮಾತ್ರವಲ್ಲದೆ, ಭಾರತದ ವಾಣಿಜ್ಯ ವಾಹನಗಳಿಗೆ ಅನ್ವಯವಾಗಲಿದೆ.

Toll Plaza: ಮುಂದಿನ ವರ್ಷದಿಂದ 'ಬಂದ್'‌ ಆಗಲಿದೆ ಟೋಲ್ ಪ್ಲಾಜಾಗಳು..!

15 ವರ್ಷಕ್ಕಿಂತ ಹಳೆಯ ಮೋಟಾರು ವಾಹನಗಳಿಗೆ RC ನವೀಕರಣ(RC Renewal)ಗೊಂಡಿರುವಂತ ದುಬಾರಿ ಶುಲ್ಕ

ಮೋಟಾರ್ ಸೈಕಲ್ ಗಳು : ₹ 1,000

ಮೂರು ಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳು : ₹ 3,500

ಲಘು ಮೋಟಾರು ವಾಹನ(Heavy Vehicle): ₹ 7,500

ಮಧ್ಯಮ ಸರಕು / ಪ್ರಯಾಣಿಕ ಮೋಟಾರು ವಾಹನ: ₹10,000

Corona Pandemic: 70 ಜಿಲ್ಲೆಗಳಲ್ಲಿ 70 ಜಿಲ್ಲೆಗಳಲ್ಲಿ ಕರೋನಾ ರೋಗಿಗಳಲ್ಲಿ 150% ಹೆಚ್ಚಳ

ಭಾರವಾದ ಸರಕು / ಪ್ರಯಾಣಿಕ ಮೋಟಾರು ವಾಹನ: ₹12,500

ಹೊಸ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ಇತರ ಶುಲ್ಕ(Fees)ಗಳು ಈ ಕೆಳಗ ಕಂಡಿಂತಿದೆ

ಮೋಟಾರು ಸೈಕಲ್(Two Wheeler Vehicle) ಗಳಿಗೆ, ನೋಂದಣಿ ಪ್ರಮಾಣ ಪತ್ರ ನವೀಕರಣಕ್ಕೆ ಅರ್ಜಿ ಸಲ್ಲಿಸುವ ವಿಳಂಬವು ಪ್ರತಿ ತಿಂಗಳ ವಿಳಂಬ ಅಥವಾ ಅದರ ಒಂದು ಭಾಗಕ್ಕಾಗಿ ₹300 ಹೆಚ್ಚುವರಿ ಶುಲ್ಕಕ್ಕೆ ತೆರಬೇಕಾಗಿದೆ.

ಪ್ರತಿ ತಿಂಗಳೂ ವಿಳಂಬಕ್ಕೆ ₹ 500 ಅಥವಾ ಅದರ ಭಾಗವು ಸಾರಿಗೆ ವಾಹನಗಳ ಇತರ ವರ್ಗಗಳಿಗೆ ಸಂಬಂಧಿಸಿದಂತೆ ವಿಧಿಸಲಿದೆ.

"ನಾಯಿ ಸತ್ತಾಗ ಸಂತಾಪ ಸೂಚಿಸುವವರು 250 ರೈತರು ಸತ್ತಾಗ ಸೂಚಿಸುತ್ತಿಲ್ಲ"

ನೋಂದಣಿ ಪ್ರಮಾಣಪತ್ರವು ನಮೂನೆಯಲ್ಲಿ ನೀಡಲಾದ ಅಥವಾ ನವೀಕರಿಸಿದ ಸ್ಮಾರ್ಟ್ ಕಾರ್ಡ್(Smart Card) ಪ್ರಕಾರವಾಗಿದ್ದರೆ ವಾಹನ ಮಾಲೀಕರು ₹ 200 ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಮಾಲಿನ್ಯಕಾರಕ ವಾಹನಗಳನ್ನು ರಸ್ತೆಗಳಿಂದ ಹೊರತೆಗೆಯುವ ಸರ್ಕಾರದ ಪ್ರಯತ್ನಗಳ ಭಾಗವೇ ಈ ಪ್ರಸ್ತಾಪ. ಈ ನಿಟ್ಟಿನಲ್ಲಿ ಇತರ ಪ್ರಯತ್ನಗಳು ಹೊಸದಾಗಿ ಘೋಷಿಸಲ್ಪಟ್ಟ ವಾಹನ ರದ್ದತಿ ನೀತಿ ಮತ್ತು ಹಳೆಯ ವಾಹನಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಹಲವಾರು ಇತರ ಪ್ರೋತ್ಸಾಹಕಗಳನ್ನು ಒಳಗೊಂಡಿವೆ.

ದೇಶದ ಶೇ 61 ರಷ್ಟು ಕೊರೊನಾ ಪ್ರಕರಣ ದಾಖಲಾತಿ ಈ ರಾಜ್ಯದಲ್ಲಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News