ಈ ರಾಜ್ಯದಲ್ಲಿ 18ರಿಂದ 45ವರ್ಷದ ಒಳಗಿನವರಿಗೆ ಕರೋನಾ ಲಸಿಕೆ ನೀಡುವ ಪ್ರಸ್ತಾವನೆ

 ವ್ಯಾಕ್ಸಿನೇಷನ್‌ನಲ್ಲಿ  ಶಿಕ್ಷಕರು ಮತ್ತು ಬ್ಯಾಂಕ್ ಸಿಬ್ಬಂದಿಗಳನ್ನು ಸೇರಿಸಲು ಸರ್ಕಾರ ಚಿಂತಿಸುತ್ತಿದೆ.  22.79 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿಈವರೆಗೆ ಸುಮಾರು 34 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 

Written by - Ranjitha R K | Last Updated : Mar 18, 2021, 04:04 PM IST
  • ಹೋಳಿ ಹಬ್ಬದ ಸಂದರ್ಭದಲ್ಲಿ ಕೋವಿಡ್ -19 ಹೆಚ್ಚುವ ಭೀತಿ
  • 18ರಿಂದ 45ವರ್ಷದ ಒಳಗಿನವರಿಗೆ ಕರೋನಾ ಲಸಿಕೆ ನೀಡುವ ಪ್ರಸ್ತಾವನೆ
  • ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಯುಪಿ ಸರ್ಕಾರ
ಈ ರಾಜ್ಯದಲ್ಲಿ 18ರಿಂದ 45ವರ್ಷದ ಒಳಗಿನವರಿಗೆ ಕರೋನಾ ಲಸಿಕೆ ನೀಡುವ ಪ್ರಸ್ತಾವನೆ  title=
18ರಿಂದ 45ವರ್ಷದ ಒಳಗಿನವರಿಗೆ ಕರೋನಾ ಲಸಿಕೆ ನೀಡುವ ಪ್ರಸ್ತಾವನೆ (file photo)

ಲಕ್ನೋ: ತಿಂಗಳ ಕೊನೆಯಲ್ಲಿ ಹೋಳಿ ಹಬ್ಬವಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಕೋವಿಡ್ -19 (COVID-19) ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಈ ಕಾರಣದಿಂದಾಗಿ ಉತ್ತರ ಪ್ರದೇಶ ಸರ್ಕಾರವು 18 ರಿಂದ 45 ವರ್ಷದೊಳಗಿನ ಜನರಿಗೆ ಲಸಿಕೆ (Vaccination) ನೀಡಲು ಯೋಜಿಸುತ್ತಿದೆ. ಈ ಬಗ್ಗೆ  ಯೋಗಿ ಸರ್ಕಾರ ತನ್ನ ಪ್ರಸ್ತಾವನೆಯನ್ನು ಕೇಂದ್ರದ  ಅನುಮೋದನೆಗಾಗಿ ಕಳುಹಿಸುತ್ತಿದೆ.

ಯಾರಿಗೆ ನೀಡಲಾಗುವುದು  ಕರೋನಾ ಲಸಿಕೆ : 
 ಕೋವಿಡ್ -19  (COVID-19) ಅನ್ನು ತಡೆಗಟ್ಟಲು ರಾಜ್ಯವು ಕ್ರಮ ಕೈಗೊಳ್ಳುತ್ತಿದೆ ಎಂದು  ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಹೇಳಿದ್ದಾರೆ. ರಾಜ್ಯದಲ್ಲಿ  ಚೇತರಿಕೆ ಪ್ರಮಾಣ ಹೆಚ್ಚಾಗಿದ್ದು, ಸಾವಿನ ಪ್ರಮಾಣ ಕಡಿಮೆಯಾಗಿದೆ. ಕೇಂದ್ರಕ್ಕೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಕೋವಿಡ್ -19 ಲಸಿಕೆ (Corona vaccine) ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಲಾಗಿದೆ. ವಿಶೇಷವಾಗಿ  ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗ ಇರುವವರಿಗೆ ಲಸಿಕೆ ನೀಡಲು ಅನುಮತಿ ಕೋರಲಾಗಿದೆ.  ಅಲ್ಲದೆ, ಆಟೋ ಇಮ್ಮ್ಯುನ್ ಕಾಯಿಲೆ ಇರುವ ರೋಗಿಗಳಿಗೂ ಲಸಿಕೆ ಹಾಕಲು  ಅನುಮತಿ ಸಿಗಬಹುದು ಎನ್ನಲಾಗಿದೆ. 

ಇದನ್ನೂ ಓದಿ RC Renewal: 'ಹಳೆಯ ವಾಹನ ಮಾಲೀಕ'ರಿಗೆ ಬಿಗ್ ಶಾಕ್: 'RC ನವೀಕರಣ' ಫೀಸ್ ಭಾರಿ ಹೆಚ್ಚಳ!

ಯುಪಿಯಲ್ಲಿ ಈವರೆಗೆ 34 ಲಕ್ಷ ಜನರಿಗೆ ಲಸಿಕೆ : 
 ವ್ಯಾಕ್ಸಿನೇಷನ್‌ನಲ್ಲಿ (Vaccination)  ಶಿಕ್ಷಕರು ಮತ್ತು ಬ್ಯಾಂಕ್ ಸಿಬ್ಬಂದಿಗಳನ್ನು ಸೇರಿಸಲು ಸರ್ಕಾರ ಚಿಂತಿಸುತ್ತಿದೆ.  22.79 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿಈವರೆಗೆ ಸುಮಾರು 34 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಯುಪಿ ಯಲ್ಲಿ (UP) ಇದುವರೆಗೆ 6 ಲಕ್ಷ 5 ಸಾವಿರ 915 ಜನರು ಕರೋನವೈರಸ್ (Coronavirus) ಸೋಂಕಿಗೆ ಒಳಗಾಗಿದ್ದರು.  ಸುಮಾರು 8751 ಜನರು ಪ್ರಾಣ ಕಳೆದುಕೊಂಡಿದ್ದಾರೆ.  ರಾಜ್ಯದಲ್ಲಿ 5 ಲಕ್ಷ 95 ಸಾವಿರ 150 ಜನ ಗುಣಮುಖರಾಗಿದ್ದರೆ. 

ಇದನ್ನೂ ಓದಿ : Toll Plaza: ಮುಂದಿನ ವರ್ಷದಿಂದ 'ಬಂದ್'‌ ಆಗಲಿದೆ ಟೋಲ್ ಪ್ಲಾಜಾಗಳು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News