ಗುರುಗ್ರಾಮ: ಇಡಿ-ಸಿಬಿಐ ಅಧಿಕಾರಿಗಳಂತೆ ನಟಿಸಿ ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ತಂದೆ-ಮಗನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೆಡ್‍ಹ್ಯಾಂಡ್‍ ಆಗಿ ಆರೋಪಿಗಳನ್ನು ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

ಬಂಧಿತ ಆರೋಪಿಗಳನ್ನು ಯಶ್ಪಾಲ್ ಅರೋರಾ ಮತ್ತು ರಾಹುಲ್ ಅರೋರಾ ಎಂದು ಗುರುತಿಸಲಾಗಿದೆ. ಇವರಿಬ್ಬರು ನಕಲಿ ಪ್ರಕರಣಗಳ ಮೂಲಕ ಬೆದರಿಕೆ ಹಾಕಿ ಜನರನ್ನು ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು. ನಾವು ಇಡಿ-ಸಿಬಿಐ ಅಧಿಕಾರಿಗಳು ಎಂದು ಹೇಳಿ ಕೋಟಿ-ಕೋಟಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.    


7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : DA ಶೇ.13ರಷ್ಟು ಹೆಚ್ಚಳ, 3 ತಿಂಗಳ ಬಾಕಿ ಹಣ ಕೈಗೆ! 


ಯಶ್ಪಾಲ್ ಬಾತ್ರಾ ಎಂಬುವವರ ವಿರುದ್ಧದ ದೂರನ್ನು ಹಿಂಪಡೆಯಲು ಆರೋಪಿಗಳಾದ ತಂದೆ-ಮಗ ಬರೋಬ್ಬರಿ 4 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಈ ಪ್ರಕರಣ ನಕಲಿಯಾಗಿದ್ದು, ತಂದೆ ಮತ್ತು ಮಗನ ಬಣ್ಣ ಬಯಲಾಗಿದೆ.


ಯಶ್ಪಾಲ್ ಬಾತ್ರಾರಿಗೆ ವಂಚಿಸುತ್ತಿದ್ದ ಈ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಗಿದೆ ಗುರುಗ್ರಾಮದ ಅಪರಾಧ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೂ ಆರೋಪಿಗಳು ನಕಲಿ ಪ್ರಕರಣಗಳ ಮೂಲಕ ಅನೇಕರನ್ನು ಬೆದರಿಸಿ ಹಣ ವಸೂಲಿ ಮಾಡಿರುವ ಬಗ್ಗೆ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಬೇಸಿಗೆ ಹಿನ್ನೆಲೆ ಶಾಲೆಗಳಿಗೆ ಕೇಂದ್ರದ ನೂತನ ಮಾರ್ಗಸೂಚಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.