"ಧ್ವನಿವರ್ಧಕ ಬಳಕೆ ನಿಷೇಧ": ಸರ್ಕಾರದಿಂದ ಮಹತ್ವದ ಆದೇಶ

"ಆಡಿಟೋರಿಯಂ, ಕಾನ್ಫರೆನ್ಸ್‌ ಹಾಲ್‌, ಸಮುದಾಯ ಭವನ ಮತ್ತು ಔತಣಕೂಟ ಸಭಾಂಗಣ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಕೆ ಅಥವಾ ಸಾರ್ವಜನಿಕ ಸಭೆಯನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ನಡುವೆ ನಡೆಸುವಂತಿಲ್ಲ" ಎಂದು ಸುತ್ತೋಲೆ ಹೊರಡಿಸಲಾಗಿದೆ.   

Written by - Bhavishya Shetty | Last Updated : May 11, 2022, 03:45 PM IST
  • ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆ ನಿಷೇಧ
  • ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ
  • ಮಾರ್ಗಸೂಚಿಯಲ್ಲಿ ಖಡಕ್‌ ಎಚ್ಚರಿಕೆ ರವಾನೆ
"ಧ್ವನಿವರ್ಧಕ ಬಳಕೆ ನಿಷೇಧ": ಸರ್ಕಾರದಿಂದ ಮಹತ್ವದ ಆದೇಶ title=
loudspeaker

ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಅಳವಡಿಕೆ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಕರ್ನಾಟಕ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿದೆ. ಗೊತ್ತುಪಡಿಸಿದ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆದ ಹೊರತಾಗಿ, ಇತರ ಸ್ಥಳಗಳಲ್ಲಿ ಧ್ವನಿವರ್ಧಕ ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸಬಾರದು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ.

ಇದನ್ನು ಓದಿ: ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ ಉಗ್ರ

"ಆಡಿಟೋರಿಯಂ, ಕಾನ್ಫರೆನ್ಸ್‌ ಹಾಲ್‌, ಸಮುದಾಯ ಭವನ ಮತ್ತು ಔತಣಕೂಟ ಸಭಾಂಗಣ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಕೆ ಅಥವಾ ಸಾರ್ವಜನಿಕ ಸಭೆಯನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ನಡುವೆ ನಡೆಸುವಂತಿಲ್ಲ" ಎಂದು ಸುತ್ತೋಲೆ ಹೊರಡಿಸಲಾಗಿದೆ.   

ಇನ್ನೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿ 10 ಡಿಬಿ (ಎ)ಗಿಂತ ಹೆಚ್ಚು ಸೌಂಡ್‌ ಇಡುವಂತಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನೀಡಿರುವ ಶಬ್ದ ಮಾನದಂಡಗಳ ಆದೇಶವನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. 

"ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು 2000 ರ ಅಡಿಯಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು" ಎಂದು ಸುತ್ತೋಲೆಯಲ್ಲಿ ಖಡಕ್‌ ಎಚ್ಚರಿಕೆ ನೀಡಲಾಗಿದೆ. 

ಇದನ್ನು ಓದಿ: ಪಡಿತರ ಚೀಟಿ ಫಲಾನುಭವಿಗಳಿಗೆ ಸಿಹಿಸುದ್ದಿ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

ಏಪ್ರಿಲ್ 12 ರಂದು ಎಂಎನ್‌ಎಸ್ ಕಾರ್ಯಕರ್ತರು ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಟಿಮೇಟಮ್ ನೀಡಿದ್ದರು. ಈ ಬಳಿಕ ದೇಶಾದ್ಯಂತ ಧ್ವನಿವರ್ಧಕಗಳ ಚರ್ಚೆ ಪ್ರಾರಂಭವಾಯಿತು. ಇನ್ನು ಧ್ವನಿವರ್ಧಕ ತೆಗೆದುಹಾಕಿಲ್ಲವೆಂದರೆ, ಲೌಡ್‌ಸ್ಪೀಕರ್‌ ಮೂಲಕ ಹನುಮಾನ್ ಚಾಲೀಸಾ ನುಡಿಸುವುದಾಗಿ ಕಾರ್ಯಕರ್ತರು ಎಚ್ಚರಿಸಿದ್ದರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News