ನವದೆಹಲಿ: ಸ್ವಲ್ಪ ಸಮಯದ ವಿರಾಮದ ನಂತರ, ದೇಶದ ಹಲವಾರು ಭಾಗಗಳಲ್ಲಿ ಮತ್ತೊಮ್ಮೆ ಬಿಸಿ ಗಾಳಿಯು ಬೀಸುತ್ತಿದೆ. ಉಷ್ಣಾಂಶ ಏರುತ್ತಲೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬುಧವಾರ (ಮೇ 11), ಶಿಕ್ಷಣ ಸಚಿವಾಲಯವು ಹೀಟ್‌ವೇವ್‌ನ ಹಾನಿಕಾರಕ ಅಡ್ಡಪರಿಣಾಮಗಳನ್ನು ನಿಭಾಯಿಸಲು ಶಾಲೆಗಳಿಗೆ ರಕ್ಷಣಾತ್ಮಕ ಮಾರ್ಗಸೂಚಿಗಳನ್ನು ನೀಡಿದೆ. ಏಕರೂಪದ ನಿಯಮಾವಳಿಗಳನ್ನು ಸಡಿಲಿಸಲು ಶಾಲೆಗಳಿಗೆ ಸಲಹೆ ನೀಡಿದೆ. ಅಲ್ಲದೇ, ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲು ಸೂಚಿಸಿದೆ. ಶಾಲಾ ಸಮಯವನ್ನು ಮಾರ್ಪಡಿಸಲು ತಿಳಿಸಿದೆ.
MoE ಹೊರಡಿಸಿದ ಮಾರ್ಗಸೂಚಿಗಳು ಇಲ್ಲಿವೆ:
ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳು ಶಾಲೆಗಳಿಗೆ ಸಮಯವನ್ನು ಮಾರ್ಪಡಿಸಲು ಮತ್ತು ಪ್ರತಿ ದಿನ ಕ್ಲಾಸ್ ಟೈಮಿಂಗ್ ಅನ್ನು ಕಡಿಮೆ ಮಾಡಲು ಕೇಳಿದೆ. ಶಾಲಾ ಸಮಯವು ಬೇಗನೆ ಪ್ರಾರಂಭವಾಗಿ, ಮಧ್ಯಾಹ್ನಕ್ಕಿಂತ ಮೊದಲು ಮುಗಿಯುವಂತೆ ಸರಿ ಹೊಂದಿಸಲು ತಿಳಿಸಿದೆ. ದಿನಕ್ಕೆ ಶಾಲಾ ಅವಧಿಯನ್ನು ಕಡಿಮೆ ಮಾಡಲು ಸಹ ಸಲಹೆ ನೀಡಿದೆ. ಕ್ರೀಡೆಗಳು ಮತ್ತು ಇತರ ಹೊರಾಂಗಣ ಚಟುವಟಿಕೆಗಳಿಂದಾಗಿ ಮಕ್ಕಳು ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬಹುದು. ಆದ ಕಾರಣ ಆದಷ್ಟು ಹೊರಾಂಗಣ ಚಟುವಟಿಕಗಳನ್ನು ಕಡಿಮೆ ಮಾಡಲು ಸಲಹೆ ನೀಡಿದೆ. ಶಾಲಾ ಅಸೆಂಬ್ಲಿಯನ್ನು ಮುಚ್ಚಿದ ಪ್ರದೇಶದಲ್ಲಿ ಅಥವಾ ಕಡಿಮೆ ಸಮಯ ತರಗತಿಯನ್ನು ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.
ಇದನ್ನೂ ಓದಿ: HD Deve Gowda : ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ಹೆಚ್ಡಿಡಿ ಕಳವಳ
ಶಾಲಾ ಬಸ್‌ಗಳು ಅಥವಾ ವ್ಯಾನ್‌ಗಳಲ್ಲಿ ಹೆಚ್ಚು ಜನಸಂದಣಿ ಇರಬಾರದು. ನೆರಳಿನಲ್ಲಿ ಶಾಲೆಯ ಬಸ್‌ಗಳನ್ನು ನಿಲ್ಲಿಸಬೇಕು. ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯಬಾರದು. ಬಸ್‌ನಲ್ಲಿ ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಲಭ್ಯವಿರಬೇಕು. ಕಾಲ್ನಡಿಗೆಯಲ್ಲಿ ಅಥವಾ ಬೈಸಿಕಲ್‌ನಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳು ತಲೆ ಮುಚ್ಚಿಕೊಳ್ಳುವಂತೆ ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಎಲ್ಲಾ ಫ್ಯಾನ್‌ಗಳು ಕಾರ್ಯನಿರ್ವಹಿಸುತ್ತಿರಬೇಕು. ಎಲ್ಲಾ ತರಗತಿ ಕೊಠಡಿಗಳಲ್ಲಿ ಸರಿಯಾಗಿ ಗಾಳಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಸಾಧ್ಯವಾದರೆ ಪವರ್ ಬ್ಯಾಕ್-ಅಪ್ ಲಭ್ಯತೆಯನ್ನು ವ್ಯವಸ್ಥೆಗೊಳಿಸಬಹುದು. ಸೂರ್ಯನ ಬೆಳಕನ್ನು ನೇರವಾಗಿ ತರಗತಿಯೊಳಗೆ ಪ್ರವೇಶಿಸುವುದನ್ನು ತಡೆಯಲು ಪರದೆಗಳು, ಬ್ಲೈಂಡ್‌ಗಳು, ದಿನಪತ್ರಿಕೆಗಳು ಇತ್ಯಾದಿಗಳನ್ನು ಬಳಸಬಹುದು ಎಂದು ಹೇಳಲಾಗಿದೆ.
ಶಾಖ ಅತಿಯಾದಾಗ ಆಹಾರ ಹಾಳಾಗುತ್ತದೆ. ಆದ್ದರಿಂದ PM POSHAN ಅಡಿಯಲ್ಲಿ ಬಿಸಿ-ಬೇಯಿಸಿದ ಊಟವನ್ನು ಬಿಸಿ ಮತ್ತು ತಾಜಾ ನೀಡಬೇಕು. ಪ್ರಭಾರಿ ಶಿಕ್ಷಕರು ಬಡಿಸುವ ಮೊದಲು ಆಹಾರವನ್ನು ಪರಿಶೀಲಿಸಬಹುದು. ಕ್ಯಾಂಟೀನ್‌ಗಳು ಶಾಲೆಗಳಲ್ಲಿ ತಾಜಾ ಮತ್ತು ಆರೋಗ್ಯಕರ ಆಹಾರವನ್ನು ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಮಕ್ಕಳಿಗೆ ಊಟದ ಸಮಯದಲ್ಲಿ ಲಘು ಆಹಾರವನ್ನು ನೀಡುವಂತೆ ಸಲಹೆ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ-ಸಿಎಂ ಬೊಮ್ಮಾಯಿ ಭೇಟಿ: ಸಂಪುಟ ಕುರಿತು ಮಹತ್ವದ ಚರ್ಚೆ
ಶಾಲೆಗಳು ಸಮವಸ್ತ್ರದ ಬಗ್ಗೆ ನಿಯಮಗಳನ್ನು ಸಡಿಲಿಸಬಹುದು. ಚರ್ಮದ ಚಪ್ಪಲಿಗಳಿಗಿಂತ ಕ್ಯಾನ್ವಾಸ್ ಬೂಟುಗಳನ್ನು ಧರಿಸುವುದು ಉತ್ತಮ ಎಂದು ಸಚಿವಾಲಯ ಹೇಳಿದೆ. ವಿದ್ಯಾರ್ಥಿಗಳು ಸಡಿಲವಾದ ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಲು ಅನುಮತಿಸಬಹುದು. ವಿದ್ಯಾರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸಲು ಸಲಹೆ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ