ನವದೆಹಲಿ: Women Squad In Cobra Battalion- ಕ್ಷಣಾರ್ಧದಲ್ಲಿ ನಕ್ಸಲರನ್ನು ಧರೆಗುರುಳಿಸುವವಲ್ಲಿ ನಿಷ್ಣಾತರಾಗಿರುವ  ಕೋಬ್ರಾ ಕಮಾಂಡೋಗಳಲ್ಲಿ ಲೇಡಿ ಕಮಾಂಡೋಗಳನ್ನು ಮೊದಲ ಬಾರಿಗೆ ಶಾಮೀಲುಗೊಳಿಸಲಾಗುತ್ತಿದೆ.  ಸಿಆರ್‌ಪಿಎಫ್‌ನ ಕೋಬ್ರಾ ಬೆಟಾಲಿಯನ್ ಅನ್ನು ಈಗಾಗಲೇ ಕಾಡಿನಲ್ಲಿ ಅಡಗಿರುವ ನಕ್ಸಲರ ವಿರುದ್ಧ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ, ಆದರೆ ಈಗ ಮೊದಲ ಬಾರಿಗೆ ಮಹಿಳಾ ಕಮಾಂಡೋಗಳು ಸಹ ನಕ್ಸಲೈಟ್‌ಗಳನ್ನು ಎದುರಿಸಲು ಕೋಬ್ರಾ ಪಡೆಗೆ ಸೇರಲಿದ್ದಾರೆ. ಗುರುಗ್ರಾಮ್‌ನ ಸಿಆರ್‌ಪಿಎಫ್ ಅಕಾಡೆಮಿಯಲ್ಲಿ ನಡೆಯುತ್ತಿರುವ ತರಬೇತಿ ಮುಗಿದ ನಂತರ ಈ ಕಮಾಂಡೋಗಳನ್ನುಚತ್ತೀಸ್ಗಡ  ಹಾಗೂ ಒಡಿಶಾ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಪುಲ್ವಾಮ ದಾಳಿ: 100 ಗಂಟೆಯೊಳಗೆ ಕಾಶ್ಮೀರದಲ್ಲಿ JeM ನಾಯಕರನ್ನು ಹೊಡೆದುರುಳಿಸಿದ ಸೇನೆ


ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜನೆ
ಫೆಬ್ರುವರಿ 6 ರಂದು ಕೋಬ್ರಾ ಬಟಾಲಿಯನ್ ಮೊದಲ ಮಹಿಳಾ ಘಟಕ CRPF ನಲ್ಲಿ ಅಧಿಕೃತವಾಗಿ ಶಾಮೀಲುಗೊಳಿಸಲಾಗುತ್ತಿದೆ. ಕೋಬ್ರಾ ಕಮಾಂಡೋಗಳ ವಿಶೇಷತೆ ಎಂದರೆ ಈ ಕಮಾಂಡೋಗಳು ಶತ್ರುಗಳ ಮೇಲೆ ಯಾವ ರೀತಿ ಹಲ್ಲೆ ನಡೆಸುತ್ತಾರೆ ಎಂದರೆ, ಶತ್ರುಗಳಿಗೆ ತಾವು ಧರೆಗುರುಳಿದ ಅನುಭವ ಕೂಡ ಆಗುವುದಿಲ್ಲ. ನಕ್ಸಲರ ಕೋರ್ ಪ್ರದೇಶವಾಗಿರುವ ಜಾಗದಲ್ಲಿ ಈ ಕಮಾಂಡೋಗಳನ್ನೂ ನಿಯೋಜಿಸಲಾಗುತ್ತದೆ. ನಕ್ಸಲರ ನಿಗ್ರಹಕ್ಕೆ ಇದೆ ಮೊದಲ ಬಾರಿಗೆ ಮಹಿಳಾ ಯುನಿಟ್ ಶಾಮೀಲುಗಳಿಸಲು ತಮಗೆ CRPF ಡಿಜಿ ಅವರಿಂದ ಅಧಿಕೃತ ಆದೇಶ ದೊರೆತಿದೆ ಎಂದು ಅಸಿಸ್ಟೆಂಟ್ ಕಮಾಂಡೆಂಟ್ ಸುಖಪಾಲ್ ಸಿಂಗ್ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅವರನ್ನು ಶೀಘ್ರದಲ್ಲಿಯೇ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- Amit Shah: ಕೇಂದ್ರ ಸರ್ಕಾರದಿಂದ 'ದೇಶ ಕಾಯೋ'ಯೋಧರಿಗೆ 'ಭರ್ಜರಿ ಗುಡ್ ನ್ಯೂಸ್'...!


ಕೋಬ್ರಾ ಯುನಿಟ್ ಸೇರಿದ 34 ಮಹಿಳಾ ಕಮಾಂಡರ್ ಗಳು
ಮಾಹಿತಿ ಪ್ರಕಾರ ಪ್ರಸ್ತುತ 34 ಮಹಿಳೆಯರನ್ನು ಕೋಬ್ರಾ ತಂಡದಲ್ಲಿ ಶಾಮೀಲುಗೊಳಿಸಲಾಗುತ್ತಿದೆ. ಆದರೆ ಮುಂಬರುವ ಕೆಲ ತಿಂಗಳುಗಳಿಗೆ ಈ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸಲಾಗುತ್ತಿದೆ. ಅಭಯಾರಣ್ಯ ಹೊಕ್ಕು ನಕ್ಸಲರ ಮೇಲೆ ಹಲ್ಲೆ ನಡೆಸಲು ಇವರು ತರಬೇತಿ ಪಡೆದಿರುತ್ತಾರೆ. ಹೀಗಾಗಿ ಇವರನ್ನು ಗೊರಿಲ್ಲಾ ವಾರ್ ಗಳಲ್ಲಿ ನಿಪುಣರು ಎಂದು ಹೇಳಲಾಗುತ್ತದೆ. ಕೋಬ್ರಾ ಬಟಾಲಿಯನ್ ನಲ್ಲಿ ಶಾಮೀಲಾಗುವ ಜವಾನರಿಗೆ ತುಂಬಾ ಕಠಿಣ ತರಬೇತಿ ನೀಡಲಾಗುತ್ತದೆ. ಅತ್ಯಂತ ಫಿಟ್ ಆಗಿರುವ ಜವಾನರಿಗೆ ಮಾತ್ರ ಈ ತಂಡದಲ್ಲಿ ಶಾಮೀಲುಗೊಳಿಸಲಾಗುತ್ತದೆ.


ಇದನ್ನು ಓದಿ- GOVERNMENT JOB: CRPF ನಲ್ಲಿ 800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 1 ಲಕ್ಷ ರೂ.ಗೂ ಅಧಿಕ ವೇತನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.