GOVERNMENT JOB: CRPF ನಲ್ಲಿ 800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 1 ಲಕ್ಷ ರೂ.ಗೂ ಅಧಿಕ ವೇತನ

CRPF Paramedical Staff Vacancy 2020: ಕೇಂದ್ರ ಮೀಸಲು ಪೋಲೀಸ್ ಪಡೆಯಲ್ಲಿ ಖಾಲಿ ಇರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿಗೆ ಸೇರಿದ ಸುಮಾರು 800 ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದರ ಅಡಿಯಲ್ಲಿ ಇನ್ಸ್ಪೆಕ್ಟರ್, ಸಬ್-ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗಾಗಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಲಿದೆ.

Last Updated : Jul 13, 2020, 02:27 PM IST
GOVERNMENT JOB: CRPF ನಲ್ಲಿ 800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 1 ಲಕ್ಷ ರೂ.ಗೂ ಅಧಿಕ ವೇತನ title=

ನವದೆಹಲಿ:  ಕೇಂದ್ರ ಮೀಸಲು ಪೋಲೀಸ್ ಪಡೆಯಲ್ಲಿ ಖಾಲಿ ಇರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿಗೆ ಸೇರಿದ ಸುಮಾರು 800 ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದರ ಅಡಿಯಲ್ಲಿ ಇನ್ಸ್ಪೆಕ್ಟರ್, ಸಬ್-ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗಾಗಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿ ಭರ್ತಿ ಮಾಡಿ, ಸೂಕ್ತ ದಾಖಲೆಗಳನ್ನು ಲಗತ್ತಿಸಿ, ನಿಗದಿಪಡಿಸಲಾಗಿರುವ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಜುಲೈ 20 ರಿಂದ ಆರಂಭಗೊಳ್ಳಲಿದೆ.

ಅಧಿಕೃತ ವೆಬ್ಸೈಟ್-crpf.gov.in

ಖಾಲಿ ಇರುವ ಹುದ್ದೆಗಳ ಸಂಖ್ಯೆ
1. ಇನ್ಸ್‌ಪೆಕ್ಟರ್ (ಡಯೆಟಿಷಿಯನ್) - 01
2. ಉಪ-ಬೋಧಕ (ಸ್ಟಾಫ್ ನರ್ಸ್) - 175
3. ಸಬ್ ಇನ್ಸ್‌ಪೆಕ್ಟರ್ (ರೇಡಿಯೋಗ್ರಾಫರ್) - 08
4. ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಫಾರ್ಮಸಿಸ್ಟ್) - 84
5. ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಫಿಸಿಯೋಥೆರಪಿಸ್ಟ್) - 05
6. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಡೆಂಟಲ್ ಟೆಕ್ನಿಷಿಯನ್- 04
7. ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಲ್ಯಾಬೋರೇಟರಿ ಟೆಕ್ನಿಷಿಯನ್) - 64
8. ಸಹಾಯಕ ಸಬ್ ಇನ್ಸ್‌ಪೆಕ್ಟರ್ / ಎಲೆಕ್ಟ್ರೋ ಕಾರ್ಡಿಯೋಗ್ರಾಫಿ ಟೆಕ್ನಿಷಿಯನ್ -01
9. ಹೆಡ್ ಕಾನ್‌ಸ್ಟೆಬಲ್ (ಭೌತಚಿಕಿತ್ಸೆಯ ಸಹಾಯಕ / ನರ್ಸಿಂಗ್ ಸಹಾಯಕ / ಔಷಧ) - 88
10. ಹೆಡ್ ಕಾನ್‌ಸ್ಟೆಬಲ್ (ಎಎನ್‌ಎಂ / ಸೂಲಗಿತ್ತಿ) - 03
11. ಹೆಡ್ ಕಾನ್‌ಸ್ಟೆಬಲ್ (ಡಯಾಲಿಸಿಸ್ ಟೆಕ್ನಿಷಿಯನ್) - 08
12. ಹೆಡ್ ಕಾನ್‌ಸ್ಟೆಬಲ್ (ಜೂನಿಯರ್ ಎಕ್ಸ್-ರೇ ಸಹಾಯಕ) - 84
13. ಹೆಡ್ ಕಾನ್‌ಸ್ಟೆಬಲ್ (ಪ್ರಯೋಗಾಲಯ ಸಹಾಯಕ) - 05
14. ಹೆಡ್ ಕಾನ್‌ಸ್ಟೆಬಲ್ (ಎಲೆಕ್ಟ್ರಿಷಿಯನ್) - 01
15. ಹೆಡ್ ಕಾನ್‌ಸ್ಟೆಬಲ್ (ಸ್ಟೀವರ್ಡ್) - 03
16. ಕಾನ್‌ಸ್ಟೆಬಲ್ (ಮಸಲ್ಚಿ) - 04
17. ಕಾನ್‌ಸ್ಟೆಬಲ್ (ಕುಕ್) - 116
18. ಕಾನ್‌ಸ್ಟೆಬಲ್ (ಸ್ವೀಪರ್) - 121
19. ಕಾನ್‌ಸ್ಟೆಬಲ್ (ಧೋಬಿ / ವಾಷರ್ಮನ್) - 05
20. ಕಾನ್‌ಸ್ಟೆಬಲ್ (ಪ / ಸಿ) - 03
21. ಕಾನ್‌ಸ್ಟೆಬಲ್ (ಟೇಬಲ್ ಬಾಯ್) - 01
22. ಹೆಡ್ ಕಾನ್ಸ್ಟೇಬಲ್ (ಪಶುವೈದ್ಯಕೀಯ) - 03
23. ಹೆಡ್ ಕಾನ್‌ಸ್ಟೆಬಲ್ (ಲ್ಯಾಬ್ ಟೆಕ್ನಿಷಿಯನ್) - 01
24. ಹೆಡ್ ಕಾನ್‌ಸ್ಟೆಬಲ್ (ರೇಡಿಯೋಗ್ರಾಫರ್) - 01

ವಿದ್ಯಾರ್ಹತೆ: ಎಲ್ಲ ಹುದ್ದೆಗಳಿಗೆ ವಿಭಿನ್ನ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

ವಯೋಮಿತಿ: ಮೇಲಿನ ಹುದ್ದೆಗಳಿಗೆ 18 ವರ್ಷದಿಂದ 23 ವರ್ಷ, 18 ವರ್ಷದಿಂದ 25 ವರ್ಷ ಮತ್ತು 20 ರಿಂದ 25 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಲ್ಲಾ ಹುದ್ದೆಗಳ ವಯಸ್ಸಿನ ಮಿತಿ ವಿಭಿನ್ನವಾಗಿರುತ್ತದೆ.

ಮಹತ್ವದ ದಿನಾಂಕಗಳು
ಅರ್ಜಿ ಪ್ರಾರಂಭ ದಿನಾಂಕ: 20 ಜುಲೈ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2020
ಲಿಖಿತ ಪರೀಕ್ಷೆಯ ದಿನಾಂಕ: 20 ಡಿಸೆಂಬರ್ 2020

ಶುಲ್ಕ
ಗ್ರೂಪ್-ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 200 ರೂ.ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಗ್ರೂಪ್-ಸಿ ಹುದ್ದೆಗಳಿಗೆ 100 ರೂಪಾಯಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಸ್ತ್ರೀ ಕೆಟಗರಿಗಳಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಡಿಐಜಿಪಿ, ಗ್ರೂಪ್ ಸೆಂಟರ್, ಸಿಆರ್‌ಪಿಎಫ್, ಭೋಪಾಲ್‌ PAYABLE AT ಎಸ್‌ಬಿಐ-ಬಂಗ್ರೇಸಿಯಾಗೆ ಬ್ಯಾಂಕ್ ಡ್ರಾಫ್ಟ್ ಕಳುಹಿಸಿ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಶಾರೀರಿಕ ಪರೀಕ್ಷೆ, ಶಾರೀರಿಕ ದಕ್ಷತೆಯ ಟೆಸ್ಟ್ ಹಾಗೂ ಮೆಡಿಕಲ್ ಟೆಸ್ಟ್.

ವೇತನ: ವಿವಿಧ ಹುದ್ದೆಗಳಿಗೆ ವಿವಿಧ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿ ಕೋರಲಾಗಿದೆ.

Trending News