Firing On Asaduddin Owaisi - ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಮೇಲೆ ಗುಂಡು ಹಾರಿಸಿದ ಆರೋಪಿಗಳ ವಿಚಾರಣೆಯಲ್ಲಿ ದೊಡ್ಡ ಮಾಹಿತಿ ಬಹಿರಂಗವಾಗಿದೆ. ಆರೋಪಿ ಸಚಿನ್, ಅಸಾದುದ್ದೀನ್ ಓವೈಸಿಯ ಪ್ರತಿಯೊಂದು ರಾಜಕೀಯ ಭಾಷಣವನ್ನು ಅನುಸರಿಸುತ್ತಾನೆ ಎನ್ನಲಾಗಿದೆ. ಒವೈಸಿ ವಿರುದ್ಧವೂ ಸಚಿನ್ ಕಿಡಿಕಾರಿದ್ದಾರೆ. ಮೀರತ್‌ನಲ್ಲಿ ಅಸಾದುದ್ದೀನ್ ಓವೈಸಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾಗ ಆರೋಪಿಗಳಿಬ್ಬರೂ ಅಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಾರ್ವಜನಿಕ ಸಭೆ (UP Assembly Election 2022) ನಡೆಯುವ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಆರೋಪಿಗಳು ಕಳೆದ ಹಲವು ದಿನಗಳಿಂದ ಅಸಾದುದ್ದೀನ್ ಓವೈಸಿಯನ್ನು (Asaduddin Owaisi Car Attacked) ಬೆನ್ನಟ್ಟುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ ಎನ್ನಲಾಗಿದೆ. ದಾಳಿಯ ಸಂಪೂರ್ಣ ಯೋಜನೆಯನ್ನು ಆರೋಪಿಯೇ ಸಿದ್ಧಪಡಿಸಿದ್ದ. ಇದು ಹಠಾತ್ ದಾಳಿಯಲ್ಲ. ಆರೋಪಿಗಳು ಮೊದಲು ಮೀರತ್‌ಗೆ (Merut) ಹೋಗಿ ವಾಪಸಾಗುತ್ತಿದ್ದಾಗ ಟೋಲ್‌ ಗೇಟ್ ಬಳಿ ಸಮಯ ಸಾಧಿಸಿ ಗುಂಡು ಹಾರಿಸಿ ಕೃತ್ಯ ಎಸಗಿದ್ದಾರೆ.


ಅಸಾದುದ್ದೀನ್ ಓವೈಸಿ ಮತ್ತು ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ಅವರ ಭಾಷಣದಿಂದ ತೀವ್ರ ಕೋಪಗೊಂಡಿರುವುದಾಗಿ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿನ್ ಹೇಳಿದ್ದಾರೆ. ಒವೈಸಿ ಸಹೋದರರಿಬ್ಬರು, ಜನರ ಭಾವನೆ ಹಾಗೂ ನಂಬಿಕೆಯ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಸಚಿನ್ ಆರೋಪ. ಕೆಲ ದಿನಗಳ ಹಿಂದೆ ಸಚಿನ್ (Sachin) ಆಯುಧ ಖರೀದಿಸಿದ್ದರು. ಇದೀಗ ಆಯುಧ ಮಾರಾಟ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.


ಠಾಣೆಯಲ್ಲಿ ಶರಣಾಗತಿಗೆ ಪ್ಲಾನಿಂಗ್ !
ಬಂಧಿತ ಇಬ್ಬರೂ ಆರೋಪಿಗಳು ಸೈದ್ಧಾಂತಿಕವಾಗಿ ಅತ್ಯಂತ ಮತಾಂಧರು ಎಂದು ಇಬ್ಬರನ್ನು ವಿಚಾರಣೆ ನಡೆಸಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  ಆರೋಪಿಗಳು ತಮ್ಮನ್ನು ವಿಲಕ್ಷಣರು ಎಂದು ಬಣ್ಣಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ದಾಳಿಯ ಯೋಜನೆ ದಿಢೀರ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಹಲ್ಲೆ ನಡೆಸಿದ ಬಳಿಕ ಜನಸಂದಣಿಯಿಂದ ತಪ್ಪಿಸಿಕೊಳ್ಳಲು ನೇರವಾಗಿ ಠಾಣೆಗೆ ತೆರಳುವ ಯೋಜನೆ ಆರೋಪಿಗಳದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 


ಒವೈಸಿ ಮೇಲೆ ದಾಳಿ ನಡೆಸಿರುವ ಈ ಆರೋಪಿಗಳು ಯಾರು?
ಪೊಲೀಸರ ಪ್ರಕಾರ, ಸಚಿನ್ ನೋಯ್ಡಾದ ಬಾದಲ್‌ಪುರ ಪ್ರದೇಶದ ನಿವಾಸಿ. ಸಚಿನ್ ಎಲ್ ಎಲ್ ಎಂ ಪದವಿಧರ. ಈ ಹಿಂದೆಯೂ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ನಡೆಯುತ್ತಿದೆ. ಪೊಲೀಸರು ಆತನ ವಿದ್ಯಾಭ್ಯಾಸದ ಕುರಿತು ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಎರಡನೇ ಆರೋಪಿ ಸಹರಾನ್‌ಪುರ ನಿವಾಸಿಯಾಗಿದ್ದು ವೃತ್ತಿಯಲ್ಲಿ ಕೃಷಿಕ. ಆತನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಸಹರಾನ್‌ಪುರ ಪೊಲೀಸರು ಕೂಡ ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ-IPL 2022: RCB ಮುಂದಿನ ಕ್ಯಾಪ್ಟನ್ ಆಗಲಿರುವ ಈ ಆಟಗಾರನ ಮೇಲೆ ದೊಡ್ಡ ಬಾಜಿ..!


ದಾಳಿ ನಡೆಸಲು ಕಾರಣ ಏನು?
ಓವೈಸಿ ಮತ್ತು ಅವರ ಕಿರಿಯ ಸಹೋದರನ ಹೇಳಿಕೆಗಳಿಂದ ಇಬ್ಬರೂ ಆರೋಪಿಗಳು ತುಂಬಾ ಕೋಪಗೊಂಡಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದಾರೆ. ಆರೋಪಿಯು ಫೇಸ್‌ಬುಕ್, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಸಾದುದ್ದೀನ್ ಓವೈಸಿಯ ಭಾಷಣಗಳನ್ನು ಕೇಳುತ್ತಿದ್ದರು ಮತ್ತು ಅವರನ್ನು ಅಪಾರವಾಗಿ ದ್ವೇಷಿಸುತ್ತಿದ್ದರು. ಇಬ್ಬರಿಂದಲೂ ದೇಶಿ ನಿರ್ಮಿತ ಮುಂಗರ್ ಮಾದರಿಯ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇತ್ತೀಚೆಗೆ ವ್ಯಕ್ತಿಯೊಬ್ಬರಿಂದ ಪಿಸ್ತೂಲ್ ಖರೀದಿಸಿದ್ದರು. ಆಯುಧ ಯಾವ ಇಬ್ಬರು ವ್ಯಕ್ತಿಗಳಿಂದ ಖರೀದಿಸಲಾಗಿದೆ ಎಂಬ ಮಾಹಿತಿಯೂ ಕೂಡ ಪೋಲಿಸ್ ವಿಚಾರಣೆಯ ವೇಳೆ ಬಹಿರಂಗಗೊಂಡಿದೆ.


ಇದನ್ನೂ ಓದಿ-ನೀಟ್ ಸ್ನಾತಕೋತ್ತರ 2022 ಮುಂದೂಡಿಕೆ, ಆರೋಗ್ಯ ಸಚಿವಾಲಯ ನೀಡಿದ ಕಾರಣ ಇಲ್ಲಿದೆ


ಹಿಂದೂ ಪರ ಸಂಘಟನೆಯ ಸದಸ್ಯನಾಗಿರುವುದಾಗಿ ಹೇಳಿಕೊಂದಿಯ ಓರ್ವ ಆರೋಪ 
ಸಚಿನ್ ತನ್ನನ್ನು ತಾನು ಒಂದು ಹಿಂದೂ ಪರ ಸಂಘಟನೆಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಆತನ ಫೇಸ್ ಬುಕ್ ಪ್ರೊಫೈಲ್ ಕೂಡ ಸಚಿನ್ ಹಿಂದೂ ಹೆಸರಿನಲ್ಲಿದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 12 ಗಂಟೆಗೆ ಇಬ್ಬರನ್ನೂ ಹಾಪುರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನಲಾಗಿದ್ದು, ಆರೋಪಿಗಳ ಕಸ್ಟಡಿಗೆ ಪೋಲಿಸರು ಯತ್ನಿಸುತ್ತಿದ್ದಾರೆ.


ಇದನ್ನೂ ಓದಿ-Pune: ನಿರ್ಮಾಣದ ಹಂತದ ಕಟ್ಟಡ ಕುಸಿದು 7 ಮಂದಿ ದುರ್ಮರಣ, ಹಲವರಿಗೆ ಗಾಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.