ನವದೆಹಲಿ: IPL 2022ರ ಮೆಗಾ ಹರಾಜು(IPL 2022 Mega Auction) ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈ ವರ್ಷದ ಐಪಿಎಲ್ ಟೂರ್ನಿ 10 ತಂಡಗಳನ್ನು ಹೊಂದಿರುತ್ತದೆ. ಚುಟುಕು ಪಂದ್ಯಾವಳಿಗೆ ಲಕ್ನೋ ಮತ್ತು ಅಹಮದಾಬಾದ್‌ನಿಂದ ಹೊಸ ತಂಡಗಳನ್ನು ಕೂಡ ಸೇರಿಸಲಾಗಿದೆ. ಕಳೆದ ಋತುವಿನಲ್ಲಿ RCB ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದರು. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. IPL 2022ರಲ್ಲಿ RCBಗೆ ಹೊಸ ಬಲಿಷ್ಠ ನಾಯಕನ ಅಗತ್ಯವಿದೆ. RCB ತಂಡದ ನೂತನ ಕ್ಯಾಪ್ಟನ್(RCB Next Captain) ಯಾರಾಗ್ತಾರೆ ಅನ್ನೋದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಆರ್‌ಸಿಬಿ ತಂಡದ ನಾಯಕನಾಗುವ ಸಾಧ್ಯತೆ ಇರುವ ಒಬ್ಬ ಸ್ಟಾರ್ ಆಟಗಾರನ ಮೇಲೆ ಮೆಗಾ ಹರಾಜಿನಲ್ಲಿ ಫ್ರಾಂಚೈಸಿ ನೀರಿನಂತೆ ಹಣ ಚೆಲ್ಲಲು ಸಜ್ಜಾಗಿದೆ. ಯಾರು ಆ ಆಟಗಾರ ಅಂತೀರಾ..?
RCB ನಾಯಕನಾಗಲಿರುವ ಈ ಆಟಗಾರನ ಮೇಲೆ ದೊಡ್ಡ ಬಿಡ್ಡಿಂಗ್..!
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಡೇವಿಡ್ ವಾರ್ನರ್ ಅವರ ಇತ್ತೀಚಿನ ಪ್ರದರ್ಶನ ನೋಡಿದರೆ ಮುಂಬರುವ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಹಲವಾರು ಊಹಾಪೋಹಗಳು ಪ್ರಾರಂಭವಾಗಿವೆ. ಅತ್ಯುತ್ತಮ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಟಿ-20 ವಿಶ್ವಕಪ್‌ನಲ್ಲಿ ಸ್ಫೋಟಕ ಇನ್ನಿಂಗ್ಸ್ ನಿಂದ ಸುದ್ದಿಯಲ್ಲಿದ್ದರು. ಆಸ್ಟ್ರೇಲಿಯಾ ಚೊಚ್ಚಲ ಟಿ-20 ವಿಶ್ವಕಪ್(T20 World Cup) ಗೆಲ್ಲಲು ವಾರ್ನರ್ ಬಹುದೊಡ್ಡ ಕೊಡುಗೆ ಇದೆ. ಹೀಗಾಗಿ ವಾರ್ನರ್ RCB ತಂಡದ ನಾಯಕರಾಗಬಹುದು ಎಂದು ನಂಬಲಾಗಿದೆ.
ಇದನ್ನೂ ಓದಿ: ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದ ಕೈ ಬಿಡುವ ಸಾಧ್ಯತೆ..!
ವಾರ್ನರ್ ಕೈಬಿಟ್ಟಿದ ಹೈದರಾಬಾದ್
ಗಮನಾರ್ಹ ಸಂಗತಿಯೆಂದರೆ ವಿರಾಟ್ ಕೊಹ್ಲಿ(Virat Kohli) ರಾಯಲ್ ಚಾಲೆಂಜರ್ಸ್ ಬೆಂಗಳೂರು*RCB) ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಆದರೆ ಅವರು ತಂಡದ ಪರವಾಗಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದಲ್ಲಿ ಅವರ ಅತ್ಯುತ್ತಮ ದಾಖಲೆ ಆರ್‌ಸಿಬಿಗೆ ಲಾಭವಾಗಲಿದೆ. ವಾರ್ನರ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್‌ನ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇದೀಗ ಅವರು ಆರ್‌ಸಿಬಿಯನ್ನೂ ಚಾಂಪಿಯನ್ ಮಾಡುವ ಶಕ್ತಿ ಹೊಂದಿದ್ದಾರೆ. IPL 2021ರಲ್ಲಿ ಕಳಪೆ ಫಾರ್ಮ್‌ನ ಕಾರಣ ಹೈದರಾಬಾದ್ ತಂಡ ಈ ಆಟಗಾರನ್ನು ಕೈಬಿಟ್ಟಿತ್ತು. ಹೀಗಾಗಿ ಆರ್‌ಸಿಬಿ ತಂಡದ ನಾಯಕತ್ವವನ್ನು ವಾರ್ನರ್ ವಹಿಸಿಕೊಂಡರೆ ಈ ಬಾರಿ ಟ್ರೋಫಿ ಪಕ್ಕಾ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಟಿ-20ಯಲ್ಲಿ ಸ್ಫೋಟಕ ಬ್ಯಾಟಿಂಗ್
ಟಿ-20ಯಲ್ಲಿ ಡೇವಿಡ್ ವಾರ್ನರ್(David Warner) ಅವರ ಸ್ಫೋಟಕ ಬ್ಯಾಟಿಂಗ್ ಇತರ ತಂಡಗಳಲ್ಲಿ ಭಯ ಮೂಡಿಸಿದೆ. ಚುಟುಕು ಪಂದ್ಯಾವಳಿಯಲ್ಲಿ ವಾರ್ನರ್ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ವಿಶೇಷವೆಂದರೆ ವಾರ್ನರ್ ನಾಯಕತ್ವ ವಹಿಸಿಕೊಂಡರೆ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಸಂಪೂರ್ಣ ಬೆಂಬಲ ಪಡೆಯಲಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ(RCB) ಒಮ್ಮೆಯೂ ಚಾಂಪಿಯನ್ ಆಗಿಲ್ಲ, ಇಂತಹ ಪರಿಸ್ಥಿತಿಯಲ್ಲಿ ವಾರ್ನರ್ ಅವರನ್ನು ನಾಯಕನನ್ನಾಗಿ ಮಾಡುವ ಮೂಲಕ ಟ್ರೋಫಿ ಗೆಲ್ಲುವ ಕನಸನ್ನು ನನಸಾಗಿಸಲು ಫ್ರಾಂಚೈಸಿ ಮಾಲೀಕರು ಕಾತರರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಾರತದ ಈ ಆಟಗಾರನನ್ನು ವೀರೇಂದ್ರ ಸೆಹ್ವಾಗ್‌ಗೆ ಹೋಲಿಸಿದ ಮೈಕಲ್ ಕ್ಲಾರ್ಕ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.