ಪುಣೆ: ಮಹಾರಾಷ್ಟ್ರ(Maharashtra)ದ ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಯರವಾಡ ಪ್ರದೇಶದ ಶಾಸ್ತ್ರಿನಗರ(Yerwada Shashtri Nagar)ದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಛಾವಣಿ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಸ್ತವವಾಗಿ ಈ ಪ್ರದೇಶದ ಲೇನ್ ಸಂಖ್ಯೆ 8ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಮಗಾರಿ(Under Construction Building) ನಡೆಯುತ್ತಿತ್ತು. ಗುರುವಾರ ರಾತ್ರಿ 11 ಗಂಟೆಗೆ ಈ ಕಟ್ಟಡ ಒಂದು ಭಾಗ ಕುಸಿದುಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಣಾ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದೆ. ಘಟನೆಯ ಕುರಿತು ಮಾಹಿತಿ ನೀಡಿರುವ ಯರವಾಡ ಪೊಲೀಸ್ ಠಾಣೆ ಇನ್ಸ್ ಸ್ಟೆಕ್ಟರ್ ಶೇಖ್, ‘ಇಲ್ಲಿವರೆಗೆ 7 ಮಂದಿ ಮೃತಪಟ್ಟಿರುವ ಮಾಹಿತಿ ತಿಳಿದುಬಂದಿದೆ. ಮೃತದೇಹಗಳನ್ನು ಸಾಸೂನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದು ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿದ್ದು, ಘಟನೆ ನಡೆದಾಗ ಕಾರ್ಮಿಕರು ಛಾವಣಿ ಕೆಲಸ(Building Collapsed)ದಲ್ಲಿ ತೊಡಗಿದ್ದರು’ ಅಂತಾ ಹೇಳಿದ್ದಾರೆ.
5 people have been reported dead and 2 critically injured. The construction work of a mall was being done here when a heavy steel structure collapsed. All laborers belong to Bihar. The reason for the collapse is under investigation: Rohidas Pawar, DCP Pune Police pic.twitter.com/IC4Cokms1a
— ANI (@ANI) February 3, 2022
ಇದನ್ನೂ ಓದಿ: Bengaluru: ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರ ಆರಂಭವನ್ನು ವಿರೋಧಿಸಿ ಪ್ರತಿಭಟನೆ
ಅವಶೇಷಗಳಡಿ ಸಿಲಿಕಿರುವ ಕಾರ್ಮಿಕರನ್ನು ರಕ್ಷಿಸಲು ಅಗ್ನಿಶಾಮಕದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಲ್ಯಾಬ್ ಸುರಿಯುವಾಗ ಅವಘಡ ಸಂಭವಿಸಿದೆ
Pained by the mishap at an under-construction building in Pune. Condolences to the bereaved families. I hope that all those injured in this mishap recover at the earliest: PM @narendramodi
— PMO India (@PMOIndia) February 4, 2022
ಕಬ್ಬಿಣದ ಚಪ್ಪಡಿಯನ್ನು ಸುರಿಯುವಾಗ ಈ ಅಪಘಾತ ಸಂಭವಿಸಿದೆ. ಚಪ್ಪಡಿ(Iron Slab)ಯನ್ನು ಸುರಿಯಲು ಕಬ್ಬಿಣದ ಸರಳುಗಳಿಂದ ಜಾಲರಿಯನ್ನು ತಯಾರಿಸಲಾಗಿತ್ತು. ಕಾರ್ಮಿಕರು ಬಲೆ ಆಸರೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕುಸಿತವಾಗಿ ಕಾರ್ಮಿಕರ ಮೇಲೆಯೇ ಬಿದ್ದಿದೆ. ಕಬ್ಬಿಣದ ಸರಳುಗಳು ಕಾರ್ಮಿಕರ ದೇಹಕ್ಕೆ ನುಗ್ಗಿವೆ. ಘಟನೆ ಕುರಿತು ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಟರ್‌ಗಳ ಸಹಾಯದಿಂದ ಬಲೆಯಲ್ಲಿ ಸಿಲುಕಿದ್ದ ಕಾರ್ಮಿಕ(Building Worker's)ರನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಯರವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೂಲಿಕಾರರು ಎಲ್ಲಿಂದ ಬಂದಿದ್ದರು ಮತ್ತು ಅವರು ಇಲ್ಲಿ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇನ್ನು ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಇಲ್ಲಿ ಬೇರೆ ರಾಜ್ಯದ ವಧುವಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವುದಿಲ್ಲ, ಕೋರ್ಟ್ ಹೇಳಿದ್ದೇನು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.