ದಾಂತೇವಾಡ: ಕೈಯಲ್ಲಿ ಲಾಠಿ ಹಿಡಿದು ಹೀಗೆ ರಸ್ತೆಯಲ್ಲಿ ನಿಂತಿರುವ ಮಹಿಳೆ ಛತ್ತೀಸ್ ಘಡದ ದಾಂತೇವಾಡ ಜಿಲ್ಲೆಯ ಡಿಎಸ್‌ಪಿ ಶಿಲ್ಪಾ ಸಾಹು (DSP Shilpa Sahu). ಇವರು  5 ತಿಂಗಳ ಗರ್ಭಿಣಿ. ಕರೋನವೈರಸ್ (Coronavirus) ಕಾಲದಲ್ಲಿಯೂ ಸುಡು ಬಿಸಿಲಿನಲ್ಲಿ ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆ. ಕೋವಿಡ್ ನಿಯಮವನ್ನು ಉಲ್ಲಂಘಿಸುವವರಿಗೇ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ರಸ್ತೆಗಿಳಿದ 5 ತಿಂಗಳ ಗರ್ಭಿಣಿ ಡಿಎಸ್ಪಿ : 
ಕಾನೂನು ಸುವ್ಯವಸ್ಥೆ ಕಾಪಾಡಬೇಕಾದರೆ ಎಂಥ ಪರಿಸ್ಥಿತಿಯೇ ಇರಲಿ ನಾವು ರಸ್ತೆಗಿಳಿಯಲೇ ಬೇಕು ಎನ್ನುವುದು ಶಿಲ್ಪಾ ಸಾಹು (Shilpa Sahu) ಮಾತು. ಈ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿರಬೇಕಾದರೆ ವಿನಾ ಕಾರಣ ಯಾರೂ ಮನೆಯಿಂದ ಹೊರ ಬರಬಾರದು ಎಂದು ಶಿಲ್ಪಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ..


ಇದನ್ನೂ ಓದಿ : Sunita Kejriwal: ಪತ್ನಿಗೆ ಕೊರೋನಾ ಪಾಸಿಟಿವ್ ಸೆಲ್ಫ್ ಕ್ವಾರಂಟೈನ್ ಆದ ದೆಹಲಿ ಸಿಎಂ!


ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮನವಿ : 
ಕರೋನಾ ವೈರಸ್‌ನಿಂದ (Coronavirus) ರಕ್ಷಿಸಿಕೊಳ್ಳಲು, ಕಡ್ಡಾಯವಾಗಿ  ಮಾಸ್ಕ್ (Mask) ಧರಿಸುವಂತೆ ಜನತೆಯಲ್ಲಿ ಶಿಲ್ಪಾ ಮನವಿ ಮಾಡಿದ್ದಾರೆ. ಅಲ್ಲದೆ ಸಾಮಾಜಿಕ  ಅಂತರ (Social distancing) ಕಾಪಾಡಿಕೊಳ್ಳುವಂತೆಯೂ, ಸಾನಿಟೈಸರ್ ಬಳಸುವಂತೆಯೂ ಅವರು ಹೇಳಿದ್ದಾರೆ. ಬಹಳ ಮುಖ್ಯವಾದ ಕೆಲಸವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸೂಚಿಸಿದ್ದಾರೆ. 


ಸೋಮವಾರ, ಛತ್ತೀಸ್ ಘಡದಲ್ಲಿ 13 ಸಾವಿರ 834 ಕರೋನಾದ (COVID-19) ಹೊಸ ಪ್ರಕರಣಗಳು ದಾಖಲಾಗಿವೆ. 11,815 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಕರೋನಾದಿಂದ 165 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತು ರಾಜ್ಯದಲ್ಲಿ 1 ಲಕ್ಷ 29 ಸಾವಿರ ಸಕ್ರಿಯ ಕರೋನಾ ಪ್ರಕರಣಗಳಿವೆ.  


 ಇದನ್ನೂ ಓದಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೊರೊನಾ ಧೃಢ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.