Coronavirus : ಕೇಂದ್ರ ಸರ್ಕಾರದಿಂದ ಮುನ್ನೆಚ್ಚರಿಕಾ ಕ್ರಮ : ಸರ್ಕಾರ ನೌಕರರಿಗೂ ನಿರ್ದೇಶನ ಜಾರಿ

ಆಯಾ ವಿಭಾಗದ ಮುಖ್ಯಸ್ಥರು ಎಷ್ಟು ಜನ ಕಚೇರಿಗೆ ಬರಬೇಕು ಎನ್ನುವುದನ್ನು ನಿಯಂತ್ರಿಸಬಹುದು. ಅಥವಾ ಆಡಳಿತಾತ್ಮಕ ಆಧಾರದ ಮೇಲೆ ಹೆಚ್ಚಿನ ನೌಕರರು ಕಚೇರಿಗೆ ಬರಲು ತಿಳಿಸಲೂ ಬಹುದು. ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ. 

Written by - Ranjitha R K | Last Updated : Apr 20, 2021, 09:36 AM IST
  • ಶೇಕಡಾ 50 ಕ್ಕಿಂತ ಕಡಿಮೆ ಸಿಬ್ಬಂದಿಗಳು ಮಾತ್ರ ಕಚೇರಿಗೆ ಹಾಜರಾಗಬೇಕು
  • ಉದ್ಯೋಗಿಗಳು ಫೋನ್ ಮತ್ತು ಇತರ ವಿಧಾನಗಳ ಮೂಲಕ ಸಂಪರ್ಕದಲ್ಲಿರಬೇಕು
  • ದಿವ್ಯಾಂಗ ಮತ್ತು ಗರ್ಭಿಣಿಯರಿಗೆ ಕಚೇರಿಗೆ ಬರುವುದರಿಂದ ವಿನಾಯಿತಿ
Coronavirus : ಕೇಂದ್ರ ಸರ್ಕಾರದಿಂದ ಮುನ್ನೆಚ್ಚರಿಕಾ ಕ್ರಮ : ಸರ್ಕಾರ ನೌಕರರಿಗೂ ನಿರ್ದೇಶನ ಜಾರಿ title=
ಶೇಕಡಾ 50 ಕ್ಕಿಂತ ಕಡಿಮೆ ಸಿಬ್ಬಂದಿಗಳು ಮಾತ್ರ ಕಚೇರಿಗೆ ಹಾಜರಾಗಬೇಕು (file photo)

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್  (Coronavirus) ಸಾಂಕ್ರಮಣದ ದೃಷ್ಟಿಯಿಂದ ಕೇಂದ್ರ ಸರ್ಕಾರ ಬಹು ದೊಡ್ಡ ನಿರ್ಧಾರವನ್ನು ತೆಗೆದುಕೊ ತೆಗೆದುಕೊಂಡಿದೆ.  ತನ್ನ ನೌಕರರಿಗೆ ಹಲವಾರು ಮಾರ್ಗಸೂಚಿಗಳನ್ನು (Guidelines) ಪ್ರಕಟಿಸಿದೆ. ಇದರ ಪ್ರಕಾರ ಸರ್ಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಪಾಳಿಗಳನ್ನು ನಿಗದಿಪಡಿಸಲು ಮತ್ತು ನೌಕರರ ಹಾಜರಾತಿಯನ್ನು ಮಿತಿಗೊಳಿಸಲು ಆದೇಶ ನೀಡಲಾಗಿದೆ.

50 ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ :
ಸಿಬ್ಬಂದಿ ಸಚಿವಾಲಯದ ಹೇಳಿಕೆಯ ಪ್ರಕಾರ, ಉಪ ಕಾರ್ಯದರ್ಶಿ, ಅವರ ಸಮಮಟ್ಟದ ಅಧಿಕಾರಿಗಳು ಮತ್ತು ಕೆಳಗಿನ ಮಟ್ಟದ ಅಧಿಕಾರಿಗಳ ಉಪಸ್ಥಿತಿಯನ್ನು 50 ಪ್ರತಿಶತಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಉಪ ಕಾರ್ಯದರ್ಶಿ ಮಟ್ಟದ ಎಲ್ಲ ಅಧಿಕಾರಿಗಳು, ಅವರ ಸಮಾನ ಮತ್ತು ಮೇಲ್ಪಟ್ಟದ ಅಧಿಕಾರಿಗಳು ನಿಯಮಿತವಾಗಿ ಕಚೇರಿಗೆ ಬರಬೇಕಾಗುತ್ತದೆ.

ಇದನ್ನೂ ಓದಿ: Former PM Tested Covid-19 Positive - ಮಾಜಿ ಪ್ರಧಾನಿ ಮನಮೋಹನ್ ಸಿಂಗ್ Corona Positive, AIIMSಗೆ ದಾಖಲು

ದಿವ್ಯಾಂಗ ಮತ್ತು ಗರ್ಭಿಣಿಯರು ಕಚೇರಿಗೆ ಬರುವಂತಿಲ್ಲ : 
ಆಯಾ ವಿಭಾಗದ ಮುಖ್ಯಸ್ಥರು ಎಷ್ಟು ಜನ ಕಚೇರಿಗೆ ಬರಬೇಕು ಎನ್ನುವುದನ್ನು ನಿಯಂತ್ರಿಸಬಹುದು. ಅಥವಾ ಆಡಳಿತಾತ್ಮಕ ಆಧಾರದ ಮೇಲೆ ಹೆಚ್ಚಿನ ನೌಕರರು (employees)ಕಚೇರಿಗೆ ಬರಲು ತಿಳಿಸಲೂ ಬಹುದು. ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ. ಮುಂದಿನ ಆದೇಶದವರೆಗೆ ಅವರು ಮನೆಯಿಂದಲೇ ಕೆಲಸ (work from home) ಮಾಡಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಇನ್ನು ಕಂಟೈನ್‌ಮೆಂಟ್ ವಲಯದಲ್ಲಿ ವಾಸಿಸುವವರು,  ತಮ್ಮ ಪ್ರದೇಶವು ಕಂಟೈನ್‌ಮೆಂಟ್ ವಲಯದಿಂದ (Containment zone) ಹೊರಬರುವವರೆಗೆ ಕಚೇರಿಗೆ ಹಾಜರಾಗುವಂತಿಲ್ಲ. 

ಈ ನಿಯಮಗಳು ಏಪ್ರಿಲ್ 30 ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೆ :
ಕೋವಿಡ್ -19 (COVID-19) ಪ್ರಕರಣದಲ್ಲಿ ಅನಿರೀಕ್ಷಿತ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಲಾದ ಈ ಮಾರ್ಗಸೂಚಿಗಳು ತಕ್ಷಣವೇ ಜಾರಿಗೆ ಬರಲಿದ್ದು, ಏಪ್ರಿಲ್ 30 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ನಾಗರಿಕರು, ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಈ ಎಲ್ಲಾ ನಿಯಮಗಳನ್ನು ಅನುಸರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. 

ಇದನ್ನೂ ಓದಿ: Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ

ಫೋನ್ ಮತ್ತು ಇತರ ವಿಧಾನಗಳ ಮೂಲಕ ಉದ್ಯೋಗಿಗಳೊಂದಿಗೆ ಸಂಪರ್ಕ : 
ಕಚೇರಿಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ, ಬೆಳಿಗ್ಗೆ 9:30 ರಿಂದ ಸಂಜೆ 6 ರವರೆಗೆ ಮತ್ತು ಬೆಳಿಗ್ಗೆ 10 ರಿಂದ ಸಂಜೆ 6: 30 ರವರೆಗಿನ ಶಿಫ್ಟ್ ನಲ್ಲಿ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ ಎಂದು, ಸರ್ಕಾರ ತಿಳಿಸಿದೆ. ಸಚಿವಾಲಯವು, 'ಯಾವುದೇ ನಿರ್ದಿಷ್ಟ ದಿನದಂದು ಕಚೇರಿಗೆ ಬಾರದ ಅಧಿಕಾರಿಗಳು, ಫೋನ್ (Phone) ಅಥವಾ ಇತರ ಸಂವಹನ ಮಾಧ್ಯಮಗಳ ಮೂಲಕ ಮನೆಯಿಂದ ಕೆಲಸ ಮಾಡಬೇಕಾಗುತ್ತದೆ.

ಕಚೇರಿ ಕೆಲಸಗಾರರಿಗೆ ನಿಯಮಗಳು:
ಮಾಸ್ಕ್ (Mask) ಹಾಕುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,  ಸ್ಯಾನಿಟೈಜರ್ ಬಳಸುವುದು, ಆಗಾಗ ಕೈ ತೊಳೆಯುವುದು ಸೇರಿದಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಕಚೇರಿಗೆ ಬರುವ ಅಧಿಕಾರಿಗಳು, ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ. ಮೀಟಿಂಗ್ ಗಳು ವಿಡಿಯೋ ಕಾನ್ಫರೆನ್ಸ್ (Video Conference) ಮೂಲಕವೇ ನಡೆಯಲಿದ್ದು, ಕಚೇರಿಗೆ ಹೊರಗಿನವರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚಿಸಿದೆ. ಅಲ್ಲದೆ, ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ನಿಲ್ಲಿಸಿ, ಹಾಜರಾತಿಗೆ ರಿಜಿಸ್ಟರ್ ಅನ್ನು ಬಳಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿLatest News On Corona Vaccination: May 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೂಡ ಲಸಿಕೆ, ಮಾರುಕಟ್ಟೆಯಲ್ಲಿಯೂ ಸಿಗಲಿದೆ ಲಸಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News