Corona vaccine ಎರಡೂ ಡೋಸ್ ಪಡೆದ ನಂತರವೂ ಕರೋನಾ ಪಾಸಿಟಿವ್ ಆದ ವೈದ್ಯೆ

48 ವರ್ಷದ ವೈದ್ಯೆ  ಜನವರಿ 16 ರಂದು ಮೊದಲ ಡೋಸ್ ಕರೋನಾ ಲಸಿಕೆ  ಪಡೆದಿದ್ದರು. ಇದಾದ ನಂತರ ಮಾರ್ಚ್ 1 ರಂದು ರಡನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಲಸಿಕೆ ಪಡೆದ ನಂತರವೂ ವೈದ್ಯೆಯಲ್ಲಿ ಕರೋನಾ  ಲಕ್ಷಣಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. 

Written by - Ranjitha R K | Last Updated : Mar 14, 2021, 12:37 PM IST
  • ಲಸಿಕೆ ಪಡೆದ ನಂತರವೂ ಕರೋನಾ ಸೋಂಕಿಗೆ ತುತ್ತಾದ ವೈದ್ಯೆ
  • ಮಾಸ್ಕ್ ಧರಿಸದಿರುವುದೇ ಕರೋನಾ ಪಾಸಿಟಿವ್ ಆಗಲು ಕಾರಣ?
  • ದೇಶಾದ್ಯಂತ 25320 ಹೊಸ ಪ್ರಕರಣಗಳು ಬೆಳಕಿಗೆ
Corona vaccine ಎರಡೂ ಡೋಸ್  ಪಡೆದ ನಂತರವೂ ಕರೋನಾ ಪಾಸಿಟಿವ್ ಆದ ವೈದ್ಯೆ title=
ಲಸಿಕೆ ಪಡೆದ ನಂತರವೂ ಕರೋನಾ ಸೋಂಕಿಗೆ ತುತ್ತಾದ ವೈದ್ಯೆ (file photo)

ಜಬಲ್ಪುರ: ಕರೋನಾ ಲಸಿಕೆಯ (Corona vaccine) ಎರಡೂ ಡೋಸ್ ಗಳನ್ನು ಪಡೆದ ನಂತರವೂ ವೈದ್ಯರಲ್ಲಿ ಕರೋನಾ ಸೋಂಕು (Coronavirus) ಕಂಡು ಬಂದಿದೆ. ಮಧ್ಯಪ್ರದೇಶದ ಜಬಲ್ಪುರದ ಸರ್ಕಾರಿ ಗಾಂಧಿ ವೈದ್ಯಕೀಯ ಕಾಲೇಜಿನ ಹಿರಿಯ ಮಹಿಳಾ ವೈದ್ಯೆ ಯೊಬ್ಬರು ಕರೋನಾ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದರು. ಲಸಿಕೆ ಪಡೆದ ನಂತರ ಮಾಸ್ಕ್ (Mask) ಧರಿಸುವ ಅಗತ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದು,  ಮಾಸ್ಕ್ ಅನ್ನು ಧರಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಅಜಾಗರೂಕತೆಯ ಕಾರಣದಿಂದಲೇ ವೈದ್ಯೆ ಲಸಿಕೆ ಪಡೆದ ನಂತರವೂ ಸೋಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. 

ಮಾರ್ಚ್ ಒಂದರಂದು ಲಸಿಕೆಯ ಎರಡನೇ ಡೋಸ್ ಪಡೆದಿದ್ದ ವೈದ್ಯೆ : 
48 ವರ್ಷದ ವೈದ್ಯೆ  ಜನವರಿ 16 ರಂದು ಮೊದಲ ಡೋಸ್ ಕರೋನಾ ಲಸಿಕೆ (Corona vaccine) ಪಡೆದಿದ್ದರು. ಇದಾದ ನಂತರ ಮಾರ್ಚ್ 1 ರಂದು ರಡನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಲಸಿಕೆ ಪಡೆದ ನಂತರವೂ ವೈದ್ಯೆಯಲ್ಲಿ ಕರೋನಾ (COVID-19) ಲಕ್ಷಣಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಮಾರ್ಚ್  10 ರಂದು, ವೈದ್ಯೆಗೆ ಕರೋನಾ (Coronavirus) ಸೋಂಕು ಇರುವುದು ಪತ್ತೆಯಾಗಿದೆ.  ನಂತರ ವೈದ್ಯೆಯನ್ನು 14 ದಿನಗಳ ಐಸೋಲೆಶನ್ ನಲ್ಲಿ ಇರಿಸಲಾಗಿದೆ. 

ಇದನ್ನೂ ಓದಿ : ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?

ಲಸಿಕೆ ಪಡೆದರೂ ಎಚ್ಚರಿಕೆಯಿಂದಿರುವುದು ಅಗತ್ಯ :
ಲಸಿಕೆ ಪಡೆದಾಯಿತು ಎಂದು ಬೇಕಾ ಬಿಟ್ಟಿ ಇರುವಂತಿಲ್ಲ ಎಂದು ಸರ್ಕಾರ ಮೊದಲೇ ಎಚ್ಚರಿಸಿತ್ತು. ಲಸಿಕೆ ಪಡೆದ ನಂತರವೂ ಸಾಮಾಜಿಕ ಅಂತರ (Social distancing) ಕಾಯ್ದುಕೊಳ್ಳುವುದು, ಮಾಸ್ಕ್ (Mask) ಧರಿಸುವುದು, ಸ್ಯಾನಿಟೈಸರ್ ಬಳಕೆ ಇವುಗಳನ್ನು ತಪ್ಪಿಸುವಂತಿಲ್ಲ ಎಂದು ಈ ಮೊದಲೇ ತಿಳಿಸಲಾಗಿದೆ. 

ದೇಶಾದ್ಯಂತ 25320 ಪ್ರಕರಣಗಳು ಬೆಳಕಿಗೆ :
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 25,320 ಹೊಸ ಪ್ರಕರಣಗಳು ವರದಿಯಾಗಿದೆ.  161 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,13,59,048 ಕ್ಕೆ ಏರಿಕೆಯಾಗಿದ್ದು, ಈವರೆಗೆ 1,58,607 ಜನರು ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ : ಈ ಕಾರಣಕ್ಕಾಗಿ ಕೆನಡಾದ ರಸ್ತೆಗಳಲ್ಲೂ ರಾರಾಜಿಸುತ್ತಿದೆ ನರೇಂದ್ರ ಮೋದಿ ಫ್ಲೆಕ್ಸ್ ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News