Buddha Principles: ಪ್ರಸ್ತುತ ದಿನಗಳಲ್ಲಿ ತತ್ವ ಆದರ್ಶಗಳೇ ಕಣ್ಮರೆಯಾಗುತ್ತಿವೆ. ಅಸೂಯೆ, ಮದ ಮತ್ಸರ, ಕಾಮ ಕ್ರೋದಗಳಿಂದ ಸಮಾಜ ತುಂಬಿ ಹೋಗಿದೆ. ಉತ್ತಮ ಸಮಾಜ ಮಾತ್ರವಲ್ಲದೇ ಉತ್ತಮ ವ್ಯಕ್ತಿಯಾಗಲು ಕೆಲವೊಂದು ತತ್ವಗಳು ಅನಿವಾರ್ಯವಾಗಿದೆ.ಅದರಲ್ಲೂ ಸಮಾಜದ ಅಂಕುಡೊಂಕು ತಿದ್ದು ಪಡೆಗೆ ಬುದ್ದನ ಬೋಧಿಸಿದ ತತ್ವಗಳು ಅನಿವಾರ್ಯವಾಗಿದೆ. 


COMMERCIAL BREAK
SCROLL TO CONTINUE READING

ಪಾಲಿಸಬೇಕಾಸದ ಬುದ್ದನ ತತ್ವಗಳು


ನಾವು ನಡೆಯುವ ದಾರಿ ಸರಿಯಾಗಿದ್ದರೆ, ನಾವು ಮಾಡುವ ಕಾರ್ಯ ಸತ್ಯ ಶುದ್ಧವಾಗಿದ್ದರೆ ಎಂಥಹ ಕಠಿಣ ಪರಿಸ್ಥಿತಿ ಎದುರಿಸಬಹುದು. ಅಹಿಂಸೆಯನ್ನು ಮಾರ್ಗ,  ದಾನ ಮಾಡುವುದು, ಸತ್ಯ ಬೋಧನೆ, ಮದ್ಯಪಾನ ಮಾಡದಿರುವುದು ಹಾಗೂ ಶೀಲವಂತನಾಗಿ ಬದುಕುವಂತೆ ಕರೆ ನೀಡಿದನು. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಈ ಪಂಚಶೀಲಗಳನ್ನು ಅಳವಡಿಸಿಕೊಂಡರೆ ಈ ಸಮಾಜ ಸುಖ, ಶಾಂತಿ, ನೆಮ್ಮದಿಯಿಯ ಬದುಕಿಗೆ ಸರಳ ಸೂತ್ರವಾಗಿದೆ. 


ಇದನ್ನೂ ಓದಿ: Buddha Purnima: ಬುದ್ಧ ದೇವ ಮಾನವ ಆಗಲು ಕಾರಣವೇನು.. ಮಹತ್ವ ಇಲ್ಲಿದೆ ನೋಡಿ!


ಅಹಿಂಸೆಯ ತತ್ವ
ದಿನ ಬೆಳಾಗಾದರೆ ಕೊಲೆ, ಹಲ್ಲೆ ಸುದ್ದಿಗಳೇ ಕಿವಿಗಳಿಗೆ ಬಂದು ಅಪ್ಪಳಿಸುತ್ತವೆ. ಇತ್ತಿಚೀನ ದಿನಗಳಲ್ಲಿ ಅಹಿಂಸೆ ಮಾರ್ಗ ಬದಲಾಗಿ  ಹಿಂಸೆ ಮಾರ್ಗದಲ್ಲಿ ನಡೆಯುವವರೇ ಹೆಚ್ಚು... ಪ್ರಸ್ತುತ ದಿನಗಳಲ್ಲಿ ಬುದ್ದನ 
ಅಹಿಂಸೆಯ ತತ್ವ ಅನುಸರಿಸುವುದು ಪಾಲಿಸುವುದು ತುಂಬಾ ಅಗತ್ಯವಾಗಿದೆ.  ಅಷ್ಟೇ ಅಲ್ಲದೇ ಪ್ರಾಣಿ ಬಲಿ ಮಹಾ ಪಾಪ ಎಂದು ಸಾರಿದ್ದಾರೆ.


ನಾವು ಯಾವ ಪ್ರಾಣಿಗೂ ಜೀವ ಕೊಡಲಾರೆವೂ, ಅವುಗಳ ಜೀವ ತೆಗೆಯುವ ಹಕ್ಕು ನಮ್ಮಗಿಲ್ಲ. ನಾವು ನಮ್ಮ ದೇಹವನ್ನು ಪ್ರಾಣವನ್ನು ಪ್ರೀತಿಸುವಂತೆ ಇತರೆ ಪ್ರಾಣಿಗಳನ್ನು ಪ್ರೀತಿಸಬೇಕು. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರಿ.ಯಾರೇ, ಏನೇ ಹೇಳಿದರೂ ಕೂಡ ಅದನ್ನು ಒರೆಗಚ್ಚಿ ನೋಡಿ, ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು.  


ಇದನ್ನೂ ಓದಿ: Viral Video: ಬಿಸಿಲಿನ ತಾಪದಿಂದ ಪಾರಾಗಲು ಕಾಡಿನ ರಾಜ ಅನುಸರಿಸಿದ ಐಡಿಯಾ ಮನುಷ್ಯರನ್ನು ಫೇಲಾಗಿಸುತ್ತದೆ!


ಸತ್ಯ ಮಾರ್ಗ
ಇಂದು ವಿದ್ಯಾವಂತರಾಗಿರುವ ಅನ್ಯಾಯ ವಿರುದ್ದ ಹೋರಾಡ ಬೇಕಾದ ನ್ಯಾಯವಾದಿಗಳು, ಪೊಲೀಸರು, ಸರ್ಕಾರ ನಡೆಸಬೇಕಾದ ಮಂತ್ರಿಗಳು, ನಾಗರಿಕರು ದುಡ್ಡಿನ ಹಿಂದೆ ಬಿದ್ದು, ಸತ್ಯವನ್ನು ಹತ್ಯೆ ಗಯುತ್ತಿದ್ದಾರೆ. ಅಂಥಹ ಮನಸ್ಥಿತಿ ಉಳ್ಳವರಿಗೆ ಬುದ್ದನ ಸತ್ಯ ನಿಯಮ ಬಹುಮುಖ್ಯವಾಗಿದೆ. 


ಕಷ್ಟಗಳಿಗೆ ಸ್ಪಂದಿಸುವುದು


ಕಷ್ಟ ಎಂದು ಬಂದರೆ ಅವರನ್ನು ನೋಡಿ ಅಸಹ್ಯ ಪಡುವ ಬದಲು  ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದು ಒಳ್ಳೆಯ ವ್ಯಕ್ತಿಯ ಗುಣವಾಗಿದೆ ಎಂದು ಪ್ರತಿಪಾದಿಸುತ್ತಾರೆ. 


ಯಶಸ್ವಿ ಜೀವನಕ್ಕೆ ಎಂಟು ಮಾರ್ಗ 
ಜೀವನವೂ ಯಶಸ್ವಿಯಾಗಿ ಸಾಕಾರಗೊಳ್ಳಬೇಕಾದರೆ ಎಂಟು ಸನ್ಮಾರ್ಗಗಳಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಿಸಿದರೆ ಜೀವನದ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಸಾಗಬಹುದು ಎನ್ನುತ್ತಾರೆ. 


ಬುದ್ದನ ಎಂಟು ಮಾರ್ಗಗಳು


  • ಸರಿಯಾದ ದೃಷ್ಟಿ 

  • ಉತ್ತಮ  ಆಲೋಚನೆ 

  • ಯಾರಿಗೂ ಕೆಡು ಬಯಸದಿರುವುದು

  • ಸತ್ಯ ನುಡಿಯುವುದು

  • ಪರರ ಭಾವನರಗಳನ್ನು ಗೌರವಿಸುವುದು.

  • ಸಕಾರಾತ್ಮಕ ಚಿಂತನೆ

  • ಸರಿಯಾದ ತಿಳುವಳಿಕೆ

  • ನೈತಿಕ ನಡವಳಿಕೆ


ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಒಂದಿಷ್ಟು ಬದಲಾವಣೆ ಜೊತೆಗೆ ಉತ್ತಮ ವ್ಯಕ್ತಿಯಾಗಲು ಸಹಕಾರಿಯಾಗಬಹುದು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.