Viral Video: ಬಿಸಿಲಿನ ತಾಪದಿಂದ ಪಾರಾಗಲು ಕಾಡಿನ ರಾಜ ಅನುಸರಿಸಿದ ಐಡಿಯಾ ಮನುಷ್ಯರನ್ನು ಫೇಲಾಗಿಸುತ್ತದೆ!

Lion Viral Video:  ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಒಂದು ಸ್ವಾರಸ್ಯಕರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಸಿಂಹವೊಂದರ ದೇಸೀ ವಿಧಾನವನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರಿ ದಂಗಾಗಿದ್ದಾರೆ.   

Written by - Nitin Tabib | Last Updated : May 4, 2023, 10:14 PM IST
  • ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳೂ ಕೂಡ ದೇಸೀ ವಿಧಾನಗಳನ್ನು ಅನುಸರಿಸುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಲು ಆರಂಭಿಸಿವೆ.
  • ಅವುಗಳು ಅನುಸರಿಸುವ ದೇಸೀ ಉಪಾಯಗಳನ್ನು ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ.
  • ವಾಸ್ತವದಲ್ಲಿ, ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
  • ಇದರಲ್ಲಿ 'ಕಾಡಿನ ರಾಜ' ಅನುಸರಿಸುತ್ತಿರುವ ಜಬರ್ದಸ್ ದೇಸೀ ಉಪಾಯವನ್ನು ತೋರಿಸಲಾಗಿದೆ .
Viral Video: ಬಿಸಿಲಿನ ತಾಪದಿಂದ ಪಾರಾಗಲು ಕಾಡಿನ ರಾಜ ಅನುಸರಿಸಿದ ಐಡಿಯಾ ಮನುಷ್ಯರನ್ನು ಫೇಲಾಗಿಸುತ್ತದೆ! title=
ವೈರಲ್ ವಿಡಿಯೋ

Viral Lion Video: ಸಾಮಾಜಿಕ ಮಾಧ್ಯಮದಲ್ಲಿ, ಜನರು ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸಲು ದೇಸೀ ವಿಧಾನಗಳನ್ನು ಅನುಸರಿಸುವ ವಿಧಾನಗಳನ್ನು ನೀವು ಸಾಕಷ್ಟು ನೋಡಿರಬಹುದು ಮತ್ತು ತಮಾಷೆಯ ರೂಪದಲ್ಲಿ ಅವುಗಳಿಗೆ ಕಾಮೆಂಟ್ ಕೂಡ ಮಾಡಿರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳೂ ಕೂಡ ದೇಸೀ ವಿಧಾನಗಳನ್ನು ಅನುಸರಿಸುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಲು ಆರಂಭಿಸಿವೆ. ಅವುಗಳು ಅನುಸರಿಸುವ ದೇಸೀ ಉಪಾಯಗಳನ್ನು ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ. ವಾಸ್ತವದಲ್ಲಿ, ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ 'ಕಾಡಿನ ರಾಜ' ಅನುಸರಿಸುತ್ತಿರುವ ಜಬರ್ದಸ್ ದೇಸೀ ಉಪಾಯವನ್ನು ತೋರಿಸಲಾಗಿದೆ. ಈ ದೇಸಿ ಉಪಾಯವನ್ನು ನೋಡಿದ ನೆಟ್ಟಿಗರು  ಅವಾಕಾಗಿದ್ದು, ಸಿಂಹದ ಕುರಿತು ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ ಮತ್ತು ವಿಡಿಯೋವನ್ನು ಪದೇ ಪದೇ ವೀಕ್ಷಿಸುತ್ತಿದ್ದಾರೆ. 

ಇದನ್ನೂ ಓದಿ-Urfi Javed ನಂತಹ ಬಟ್ಟೆ ತೊಟ್ಟು ಶಾಪಿಂಗ್ ಮಾಡ್ತೀಳು ಈಕೆ, ಕಣ್ಣಿಗೆ ಬೀಳುತ್ತಲೇ ಹೊಡೆದೋಡಿರುವ ಫರ್ಮಾನು ಹೊರಡಿಸಿದ ಸೂಪರ್ ಮಾರ್ಕೆಟ್!

ಇದುವರೆಗೆ ತಮ್ಮ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗಲು ಮನುಷ್ಯರು ಮಾಡುವ ಹಲವು ದೇಸಿ ಉಪಾಯಗಳನ್ನು ನೀವು ನೋಡಿರಬಹುದು. ಆದರೆ, ಸಿಂಹದ ಈ ದೇಸಿ ಉಪಾಯ ನೋಡಿ ನೀವೂ ಬೆಚ್ಚಿ ಬೀಳುತ್ತೀರಿ. ವೈರಲ್ ಆಗಿರುವ ವೀಡಿಯೋದಲ್ಲಿ, ಸಿಂಹವೊಂದು ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಯಾವ ತಂತ್ರವನ್ನು ಬಳಸಿದೆ ಎಂಬುದನ್ನು ನೀವು ನೋಡಬಹುದು. ಬಾಳೆ ಎಲೆಯನ್ನು ಬಾಯಿಗೆ ಹಿಡಿದುಕೊಂಡ ಸಿಂಹ, ತನ್ನ ಇಡೀ ದೇಹವನ್ನು ಅದರಿಂದ ಕೊಡೆಯ ರೂಪದಲ್ಲಿ ಆವರಿಸಿಕೊಂಡಿದೆ. ಅಷ್ಟೇ ಅಲ್ಲ ಬಾಳೆ ಎಲೆಯನ್ನು ಅತ್ಯಂತ ಸಲೀಸಾಗಿ ಬಾಯಿಯಲ್ಲಿ ಹಿಡಿದುಕೊಂಡು ಸಲೀಸಾಗಿ ಅದು ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುತ್ತಿದೆ. ಸಿಂಹದ ಈ ಸ್ವ್ಯಾಗ್ ನೋಡಿ ನೆಟ್ಟಿಗರು ಮಾತ್ರ ಅವಾಕ್ಕಾಗಿದ್ದಾರೆ.  ಈ ಅಪೂರ್ವ ದೃಶ್ಯವನ್ನು ಯಾರೋ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಒಮ್ಮೆ ನೀವೂ ಕೂಡ ನೋಡಿ...

ಇದನ್ನೂ ಓದಿ-Dangerous Dates 2023: ವರ್ಷ 2023ರ ಈ 6 ದಿನಾಂಕಗಳು ಮನುಷ್ಯರ ಪಾಲಿಗೆ ಖತರ್ನಾಕ್ ಸಾಬೀತಾಗಲಿವೆ, ಬೆಚ್ಚಿಬೀಳಿಸುವ ಭವಿಷ್ಯವಾಣಿ!

ಭಾರಿ ಗಮನ ಸೆಳೆದ ಕಾಡಿನ ರಾಜ
ಈ ವೀಡಿಯೋ ನೋಡಿ ನೀವೂ ತಬ್ಬಿಬ್ಬಾಗಿರಬಹುದು. ಈ ತಮಾಷೆಯ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ಲೈಕ್ ಮಾಡಿದ್ದಾರೆ. ಇದಲ್ಲದೆ ತಮಾಷೆ ಮಾಡುತ್ತಾ ಜನರು ವೀಡಿಯೊಗೆ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಸಿಂಹವು ಮನುಷ್ಯರನ್ನು ಫೇಲ್ ಮಾಡಿದೆ ಎಂದು ಓರ್ವ ಬಳಕೆದಾರ ಕಾಮೆಂಟ್ ಮಾಡಿದರೆ. ಕಾಡಿನ ರಾಜ ತನ್ನ ಅದ್ಭುತ ರೂಪದ ದರ್ಶನ ನೀಡುತ್ತಿದೆ  ಎಂದು ಕೆಲವರು ಹೇಳುತ್ತಿದ್ದಾರೆ. ಇದುವೇ ಓರ್ವ ‘ರಾಜನ ಅಸಲಿ ಸವಾರಿ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನೀವೂ ಕೂಡ ತಿಳಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News