Buddha Purnima: ಬುದ್ಧ ದೇವ ಮಾನವ ಆಗಲು ಕಾರಣವೇನು.. ಮಹತ್ವ ಇಲ್ಲಿದೆ ನೋಡಿ!

Buddha Purnima 2023: ಬುದ್ಧ ದೇವ ಮಾನವನಾಗಲು ಕಾರಣವೇನು..ರಾಜವೈಭವ ತ್ಯಜಿಸಿ ಸರಳ ಮಾರ್ಗ ಹಿಡಿದ ರಾಜ ಗೌತಮ ಬುದ್ಧನನ್ನು ಇಂದಿಗೂ ಆರಾಧಿಸಲಾಗುತ್ತದೆ. ಇನ್ನಷ್ಟು ಬುದ್ಧ ಪೂರ್ಣಿಮೆ ಮಹತ್ವ ಇಲ್ಲಿದೆ ನೋಡಿ..  

Written by - Zee Kannada News Desk | Last Updated : May 5, 2023, 12:50 PM IST
  • ನೇಪಾಳದ ಲಿಂಬಿನಿಯಲ್ಲಿ ಜನಿಸಿದ ಗೌತಮ ಬುದ್ಧ
  • ಬುದ್ದ ಬೌದ್ದ ಧರ್ಮಕ್ಕೆ ಮಾತ್ರ ಸೀಮಿತವಾಗಿರದೇ ಪ್ರತಿ ಮಾನವೂ ಆರಾಧಿಸುವ ದೇವ ಮಾನವ
  • ಭಗಾವಾನ್‌ ಬುದ್ದನನ್ನು ದೇವ ಮಾನವನಾಗಿ ಆರಾಧನೆ
 Buddha Purnima: ಬುದ್ಧ ದೇವ ಮಾನವ ಆಗಲು ಕಾರಣವೇನು.. ಮಹತ್ವ ಇಲ್ಲಿದೆ ನೋಡಿ! title=

ಬುದ್ಧ ಪೂರ್ಣಿಮೆ: ಭಗಾವಾನ್‌ ಬುದ್ದನನ್ನು ದೇವ ಮಾನವನಾಗಿ ಆರಾಧಿಸಲಾಗುತ್ತದೆ. ನೇಪಾಳದ ಲಿಂಬಿನಿಯಲ್ಲಿ ವೈಶಾಖ ಹುಣ್ಣಿಮೆಯಂದು ಭಗವಾನ್​ ಬುದ್ಧ ಜನಿಸಿದರು. ಹೀಗಾಗಿ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಕೂಡ ಕರೆಯಲಾಗುತ್ತದೆ. ಗೌತಮ ಬುದ್ಧನ ಅನುಯಾಯಿಗಳು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 

ಬುದ್ಧ ಪೂರ್ಣಿಮೆ
ಬುದ್ಧನಿಗೆ ಜ್ಞಾನೋದಯವಾದ ದಿನ, ಹುಟ್ಟಿದ ದಿನ ಹಾಗೂ ನಿರ್ವಾಣ ಹೊಂದಿದ ದಿನವನ್ನೂ ಭಾರತಾದ್ಯಂತ ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಇದನ್ನು ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಎಪ್ರಿಲ್‌- ಮೇ ತಿಂಗಳ ಪವಿತ್ರ ದಿನ ಎಂದರ್ಥ.

ಇದನ್ನೂ ಓದಿ: NCP New President! NCP ಅಧ್ಯಕ್ಷರಾಗಿಯೇ ಮುಂದುವರೆಯಲಿದ್ದಾರೆ ಶರದ್ ಪವಾರ್, ರಾಜೀನಾಮೆ ತಿರಸ್ಕರಿಸಿದ ಸಮಿತಿ

ಭಗವಾನ್‌ ಗೌತಮ ಬುದ್ಧ ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡಿ ಏಷ್ಯಾದ ಬೆಳಕು ಎಂದೇ ಪ್ರಸಿದ್ಧ ಪಡೆದರು. ರಾಜಬೋಗ ಅನುಭವಿಸುವ ಭಾಗ್ಯ ಅನುಭವಿಸುವ ಎಲ್ಲಾ ಅರ್ಹತೆ ಇದ್ದರೂ ಎಲ್ಲಾವನ್ನು ತ್ಯಜಿಸಿ ಶಾಂತಿ ದಾರಿ ಹಿಡಿದರು..

ಗೌತಮ ಬುದ್ದ ಬೌದ್ದ ಧರ್ಮಕ್ಕೆ ಮಾತ್ರ ಸೀಮಿತವಾಗಿರದೇ ಪ್ರತಿ ಮಾನವೂ ಆರಾಧಿಸುವ ಮಾನವ ಆಗಿದ್ದಾರೆ. ರಸೊತ್ತಿಗೆಯನ್ನು ತ್ಯಜಿಸಿ, ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಅರಿಸಿ, ವಿರಾಗಿಯಾಗಿ ಭರತಖಂಡದುದಕ್ಕೂ ಶಾಂತಿ, ಅಹಿಂಸಾ ತಣ್ತೀಗಳನ್ನು ಸಾರಿದರು. ಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ. 

ಇದನ್ನೂ ಓದಿ: Weather Update: ರಾಜ್ಯದಲ್ಲಿ ಸೈಕ್ಲೋನ್ ಭೀತಿ: ಮುಂದಿನ 5 ದಿನ ಈ ಪ್ರದೇಶಗಳಲ್ಲಿ ಭಾರೀ ವರ್ಷಧಾರೆ! ಎಚ್ಚರಿಕೆ ನೀಡಿದ ಇಲಾಖೆ

ತಾನೂ ಅನುಭವಿಸಲು ರಾಜ ಮಾರ್ಗ ಇದ್ದರೂ ಎಲ್ಲವನ್ನು ತ್ಯಜಿಸಿ  ದುಃಖ ದುಮ್ಮಾನಗಳಿಂದ ಕೂಡಿರುವ ಜಗತ್ತಿಗೆ ಪರಿಹಾರ ಹುಡುಕಬೇಕೆಂದು ರಾತ್ರೋರಾತ್ರಿ ಹೆಂಡತಿ, ಮಗನನ್ನು ಬಿಟ್ಟು ಲೋಕ ಸಂಚಾರನಾಗಿ ಹೊರಟು ಮುಂದೆ ಜ್ಞಾನೋದಯವಾಗಿ ಬುದ್ಧನಾಗುತ್ತಾನೆ, ಬೌದ್ಧ ಧರ್ಮವನ್ನು ಸ್ಥಾಪಿಸುತ್ತಾನೆ.

ಆದಾದ ಬಳಿಕ ವಾರಾಣಾಸಿಯ ಜಿಂಕೆಗಳ ವನದಲ್ಲಿ ಮೊದಲ ಬಾರಿಗೆ ಧಾರ್ಮಿಕ, ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಬೌದ್ಧ ಧರ್ಮದ ಆಶಯಗಳನ್ನು ಬಿತ್ತಿದ್ದರು.

ಬುದ್ದನ ಪ್ರಕಾರ ಧರ್ಮ ಎಂದರೆ
ಮನುಕುಲದಲ್ಲಿ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದು ,ಧರ್ಮ ಎಂದರೆ ದಾನ , ಮಾನವೀಯತೆ ಎನ್ನುವುದೇ ಧರ್ಮ ಎನ್ನುತ್ತಾರೆ.  ದಿನ ನಿತ್ಯ ಜಾತಿ ಧರ್ಮ ಎಂದು ಕಚ್ಚಾಡುವ ಮನಸ್ಥಿತಿ  ಉಳ್ಳವರು ಪ್ರಸ್ತುತ ದಿನದಲ್ಲಿ ಧರ್ಮ ಅರ್ಥ ಅರಿವುದು ಮುಖ್ಯವಾಗಿದೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News