ಮುಂಬೈ: Sharjeel Usmani Hate Speech - ಹಿಂದೂಗಳ ವಿರುದ್ಧ ದ್ವೇಷಪೂರಿತ  ಭಾಷಣ ಮಾಡಿದ ಮಾಜಿ ವಿದ್ಯಾರ್ಥಿ ಮುಖಂಡ ಶಾರ್ಜೀಲ್ ಉಸ್ಮಾನಿ (Sharjeel Usmani) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರು ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ. ಈ ವರ್ಷದ ಜನೆವರಿ 30 ರಂದು ಪುಣೆಯ ಯಲಗಾರ್ ಪರಿಷತ್‌ನಲ್ಲಿ (Yalgar Parishad) ಶಾರ್ಜೀಲ್ ಉಸ್ಮಾನಿ ಈ ಭಾಷಣ ಮಾಡಿದ್ದ.


COMMERCIAL BREAK
SCROLL TO CONTINUE READING

ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದ ಮಹಾ ಮಾಜಿ ಮುಖ್ಯಮಂತ್ರಿ
ಸಿಎಂ ಉದ್ಧವ್ ಠಾಕ್ರೆ (Uddhav Thackeray)ಅವರಿಗೆ ಬರೆದ ಪತ್ರದಲ್ಲಿ ದೇವೇಂದ್ರ ಫಡ್ನವೀಸ್ (Devendra Fadnavis) ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾರ್ಜೀಲ್ ಉಸ್ಮಾನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಮುಂಬೈನ (Mumbai) ಬಿಜೆಪಿ ಶಾಸಕ ಅತುಲ್ ಭಾತ್ಕಲ್ಕರ್  ಮತ್ತು ಪುಣೆಯ ವಕೀಲ ಪ್ರದೀಪ್ ಗಾವಡೆ ಅವರು ಶಾರ್ಜಿಲ್ ಉಸ್ಮಾನಿ  (Sharjeel Usmani) ವಿರುದ್ಧ ಮುಂಬೈನ ದಿಂಡೋಶಿ ಪೊಲೀಸ್ ಠಾಣೆ ಮತ್ತು ಪುಣೆಯ ಸ್ವಾರ್ಗೆಟ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.


ಯಲಗಾರ್ ಪರಿಷದ್ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಭಾಷಣ ಮಾಡಿದ ಶರ್ಜೀಲ್ 
ದೂರಿನ ಪ್ರಕಾರ, ಶಾರ್ಜೀಲ್ ಉಸ್ಮಾನಿ 2021 ಜನವರಿ 30 ರಂದು ಪುಣೆ ಬಳಿ ಯಲ್ಗಾರ್ ಪರಿಷತ್‌ ನಲ್ಲಿ ಈ ಪ್ರಚೋದನಾತ್ಮಕ ಭಾಷಣ ಮಾಡಿದ್ದ. ಆ ಸಮಾರಂಭದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಉಸ್ಮಾನಿ ಹಿಂದೂಗಳ ವಿರುದ್ಧ ತೀವ್ರ ವಿಷ ಹೊರಹಾಕಿದ್ದಾನೆ. ಈ ಭಾಷಣದ ಮೂಲಕ ಶಾರ್ಜೀಲ್ ಉಸ್ಮಾನಿ ಹಿಂದೂಗಳ ವಿರುದ್ಧ ಜನರನ್ನು ಪ್ರಚೋದಿಸಲು ಯತ್ನಿಸಿದ್ದಾನೆ.


ಶರ್ಜೀಲ್ ಉಸ್ಮಾನಿ ಹೊರಹಾಕಿರುವ ವಿಷವಾದರು ಏನು ?
'ಭಾರತದಲ್ಲಿ ಹಿಂದೂ ಸಮಾಜ ಕೊಳೆತು ಹೋಗಿದೆ. ಜುನೈದ್ ನನ್ನು ಚಲಿಸುವ ರೈಲಿನ ಕೆಳಗೆ ಕೊಲ್ಲಿಸುತ್ತಾರೆ.  ಉಳಿಸಲು ಯಾರೂ ಬರುವುದಿಲ್ಲ. ಲಿಂಚಿಂಗ್ ಮಾಡುವ ಈ ಜನರು ಕೊಲೆ ಮಾಡುತ್ತಾರೆ. ಕೊಲ್ಲಲ್ಪಟ್ಟ ನಂತರ ಅವರು ತಮ್ಮ ಮನೆಗೆ ಹೋದರೆ, ಅವರು ತಮ್ಮನ್ನು ತಾವು ಏನು ಮಾಡುತ್ತಿರಬಹುದು? ಕೆಲವರು ಹೊಸ ರೀತಿಯಲ್ಲಿ ಕೈ ತೊಳೆದರೆ, ಇನ್ನುಳಿದವರು ನೀರಲ್ಲಿ ಔಷಧಿ ಬೆರೆಸಿ  ಸ್ನಾನ ಮಾಡುತ್ತಿರಬಹುದು. ಬಳಿಕ ಇವರು ನಮ್ಮೊಂದಿಗೆ ಬೆರೆತು ಊಟಮಾಡುತ್ತಾರೆ, ನಮ್ಮೊಂದಿಗೆ ಕುಳಿತು ಚಿತ್ರ ನೋಡುತ್ತಾರೆ. ಮರುದಿನ ಅವರು ಮತ್ತೆ ಯಾರನ್ನಾದರೂ ಹಿಡಿಯುತ್ತಾರೆ, ನಂತರ ಕೊಲೆ ಮಾಡಿ ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ಇವರು ತಮ್ಮ ಮನೆಯಲ್ಲಿ ಪ್ರೀತಿಯನ್ನು ಕೂಡ ಮಾಡುತ್ತಾರೆ. ತಂದೆಯ ಪಾದಗಳನ್ನು ಮುಟ್ಟುತ್ತಿದ್ದಾನೆ, ದೇವಾಲಯದಲ್ಲಿ ಪೂಜೆ ಕೂಡ ಸಲ್ಲಿಸುತ್ತಾರೆ. ನಂತರ ಹೊರಗೆ ಬಂದು ಅದೇ ರೀತಿ ಮಾಡುತ್ತಾನೆ. ಲಿಂಚಿಂಗ್ ಅವರಿಗೆ ಸಾಮಾನ್ಯವಾಗಿದೆ" ಎಂದು ಶರ್ಜೀಲ್ ತನ್ನ ಭಾಷಣದಲ್ಲಿ ಹಿಂದೂಗಳ ವಿರುದ್ಧ ಕಿಡಿಕಾರಿದ್ದಾನೆ.


ಇದನ್ನು ಓದಿ-ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸ್ ನೇಮಕ


ಮೂಲಭೂತವಾದಿ ಶರ್ಜೀಲ್ ಉಸ್ಮಾನಿ ವಿರುದ್ಧ ದೂರು ನೀಡಿರುವ ಬಿಜೆಪಿ ಶಾಸಕ ಅತುಲ್ ಭಾತ್ಕಲ್ಕರ್, ಮಹಾರಾಷ್ಟ್ರದಲ್ಲಿ ಸದ್ಯ ಹಿಂದೂ ವಿರೋಧಿ ಸರ್ಕಾರ ಅಸ್ತಿತ್ವದಲ್ಲಿದೆ.  ಹೀಗಾಗಿ ಮಹಾ ವಿಕಾಸ್ ಅಘಾಡಿ ಸರ್ಕಾರದಿಂದ ಏನನ್ನು ಕೂಡ ಅಪೇಕ್ಷಿಸುವುದು ವ್ಯರ್ಥ. ಒಂದು ವೇಳೆ ತಾವು ನೀಡಿರುವ ದೂರಿನ ವಿರುದ್ಧ ಪೊಲೀಸರು ಕ್ರಮಕೈಗೊಳ್ಳದೆ ಇದ್ದರೆ, ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದ್ದಾರೆ.


ಇದನ್ನು ಓದಿ-ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಗೆ ಕೊರೊನಾ ಧೃಡ


ಪುಣೆಯಲ್ಲಿಯೂ ಕೂಡ ಶರ್ಜೀಲ್ ವಿರುದ್ಧ ಪ್ರಕರಣ ದಾಖಲು
ಅತ್ತ ಪುಣೆಯಲ್ಲಿಯೂ ಕೂಡ ವೃತ್ತಿಯಲ್ಲಿ ವಕೀಲರಾಗಿರುವ ಪ್ರದೀಪ್ ಗಾವಡೆ ಅವರು ಕೂಡ ಸ್ವಾರ್ಗೆಟ್ ಪೋಲೀಸ್ ಠಾಣೆಯಲ್ಲಿ ಶರ್ಜೀಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ತನ್ನನ್ನು ತಾನು ಹಿಂದೂಗಳ ಹಿತಚಿಂತಕ ಎಂದು ಹೇಳಿಕೊಳ್ಳುವ  ಮಹಾರಾಷ್ಟ್ರದ ಉದ್ಧವ್ ಠಾಕರೆ ನೇತೃತ್ವದ ಸರ್ಕಾರ ಸಂಪೂರ್ಣ ಪ್ರಕರಣದ ಬಗ್ಗೆ ಮೌನ ಧೋರಣೆ ತಳೆದಿದೆ. ಈ ಪ್ರಕರಣದ ವಿರುದ್ಧ ಕ್ರಮಕೈಗೊಳ್ಳುವ ಬದಲು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿರುವ ಹಾಗೂ NCP ಮುಖಂಡ ಛಗನ್ ಭುಜ್ಭಲ್ (Chagan Bhujbhal) ಜನರಿಗೆ ಎಚ್ಚರಿಕೆಯಿಂದ ಹೇಳಿಕೆ ನೀಡುವ ಸಲಹೆ ನೀಡುತ್ತಿದ್ದಾರೆ.


ಇದನ್ನು ಓದಿ-'ಶಿವಸೇನಾ ಬಳೆ ತೊಟ್ಟಿದೆ' ಎಂದ ಫಡ್ನವೀಸ್ ಹೇಳಿಕೆಗೆ ಆದಿತ್ಯ ಠಾಕ್ರೆ ತಿರುಗೇಟು ನೀಡಿದ್ದು ಹೀಗೆ....!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.