ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರು ಕರೋನವೈರಸ್ COVID-19 ಇರುವುದು ಧೃಢಪಟ್ಟಿದೆ.
I have been working every single day since the lockdown but now it seems that God wants me to stop for a while and take a break !
I have tested #COVID19 positive and in isolation.
Taking all medication & treatment as per the advice of the doctors.— Devendra Fadnavis (@Dev_Fadnavis) October 24, 2020
ದೇವೇಂದ್ರ ಫಡ್ನವೀಸ್ ಈ ಕುರಿತಾಗಿ ಟ್ವೀಟ್ ಮಾಡಿ "ಲಾಕ್‌ಡೌನ್‌ನಿಂದ ನಾನು ಪ್ರತಿದಿನವೂ ಕೆಲಸ ಮಾಡುತ್ತಿದ್ದೇನೆ, ಆದರೆ ಈಗ ನಾನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ವಿರಾಮ ತೆಗೆದುಕೊಳ್ಳಬೇಕೆಂದು ದೇವರು ಬಯಸುತ್ತಾನೆ ಎಂದು ತೋರುತ್ತದೆ! ನನಗೆ ಕೊರೊನಾ ಇರುವುದು ಧೃಢಪಟ್ಟಿದೆ. ಈ ಹಿನ್ನಲೆಯಲ್ಲಿ ನಾನು ಪ್ರತ್ಯೇಕಿಸಲ್ಪಟ್ಟಿದ್ದೇನೆ, ಎಲ್ಲಾ ಔಷದಿ ಮತ್ತು ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳುತ್ತಿದ್ದೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸ್ ನೇಮಕ
''ನನ್ನೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಕೋವಿಡ್ 19 ಪರೀಕ್ಷೆಗಳನ್ನು ಮಾಡಲು ಸೂಚಿಸಲಾಗಿದೆ. ಎಲ್ಲರೂ ನೋಡಿಕೊಳ್ಳಿ!" ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಫಡ್ನವೀಸ್ ಅವರನ್ನು ಬಿಜೆಪಿಯ ಉಸ್ತುವಾರಿ ಎಂದು ಹೆಸರಿಸಲಾಗಿತ್ತು.