West Bengal SSC Scam : ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ್ತಾದ ಟಾಲಿಗಂಜ್ ಪ್ರದೇಶದಲ್ಲಿರುವ  ಅರ್ಪಿತಾಮುಖರ್ಜಿ ಅವರ  ಡೈಮಂಡ್ ಸಿಟಿ ಸೌತ್ ಕಾಂಪ್ಲೆಕ್ಸ್‌ನಿಂದ ನಾಲ್ಕು ಐಶಾರಾಮಿ ಕಾರುಗಳು ನಾಪತ್ತೆಯಾಗಿವೆ. ಮೂಲಗಳ ಪ್ರಕಾರ ಅರ್ಪಿತಾ ಮುಖರ್ಜಿ ಬಂಧನದ ನಂತರವೇ ಅವರ 4 ಐಷಾರಾಮಿ ಕಾರುಗಳು ಮನೆಯಿಂದ ನಾಪತ್ತೆಯಾಗಿದ್ದವು ಎನ್ನಲಾಗಿದೆ. ಈ ವಾಹನಗಳಲ್ಲಿ ಅಪಾರ ಪ್ರಮಾಣದ ನಗದನ್ನು ಇರಿಸಲಾಗಿದ್ದು,  ಸ್ಥಳದಿನದ ಅದನ್ನು ಬೇರೆಡೆ ಸಾಗಿಸಲಾಗಿದೆ ಎನ್ನಲಾಗಿದೆ. ಇದೀಗ ಇಡಿ ಕಾಂಪ್ಲೆಕ್ಸ್‌ನ ಅಧಿಕಾರಿಗಳಿಂದ ಸಿಸಿಟಿವಿ ಫೂಟೇಜ್ ಒದಗಿಸುವಂತೆ ಬೇಡಿಕೆ ಇಟ್ಟಿದೆ. ಆ ಕಾಂಪ್ಲೆಕ್ಸ್‌ನಿಂದ ಇಲ್ಲಿಯವರೆಗೆ ಒಂದು ಬಿಳಿ ಮರ್ಸಿಡಿಸ್ ಅನ್ನು ಮಾತ್ರ ಇಡಿ ಸ್ವಾಧೀನಪಡಿಸಿಕೊಂಡಿದೆ. ಉಳಿದ 4 ಐಷಾರಾಮಿ ಕಾರುಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಇದರೊಂದಿಗೆ ಬೆಲ್ಘಾರಿಯಾ ಪ್ರದೇಶದಲ್ಲಿರುವ  ಅರ್ಪಿತಾ ಮುಖರ್ಜಿ ಅವರ  ಕಾಂಪ್ಲೆಕ್ಸ್‌ನ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಕೂಡಾ ಇಡಿ ಕೇಳಿದೆ. 


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದ ಸಚಿವ  ಪಾರ್ಥ ಚಟರ್ಜಿಯ ಮತ್ತೊಬ್ಬ ಸ್ನೇಹಿತನ ಪಾಸ್‌ಪೋರ್ಟ್‌ ಮೂಲಕ ಮಲೇಷ್ಯಾಕ್ಕೆ ತೆರಳಿರುವ ಬಗ್ಗೆ ವರದಿಯಾಗಿದೆ. ಇದೀಗ ಮಲೇಷ್ಯಾಕ್ಕೆ ತೆರಳಿರುವ ಹಿಂದಿನ ಉದ್ದೇಶ ಏನು ಎಂಬುದರ ವಿಚಾರಣೆ ನಡೆಸಲಾಗುತ್ತಿದೆ. ಸ್ನೇಹಿತನ ಪಾಸ್‌ಪೋರ್ಟ್, ಆತನ ಫೋಟೋ ಹಾಗೂ ಇತರೆ ದಾಖಲೆಗಳನ್ನು ಇಡಿ ಕಲೆ ಹಾಕುತ್ತಿದೆ. ಹಣವನ್ನು ಮಲೇಷ್ಯಾಕ್ಕೆ ಸಾಗಿಸುವ ಸಲುವಾಗಿ ಮಲೇಷ್ಯಾಕ್ಕೆ ಪ್ರಯಾಣ ಬೆಳೆಸಲಾಗಿತ್ತೇ ಎನ್ನುವುದರ ಬಗ್ಗೆ ಕೂಡಾ  ಇಡಿ ಮಾಹಿತಿ ಸಂಗ್ರಹಿಸುತ್ತಿದೆ.


ಇದನ್ನೂ ಓದಿ : ಶ್ರಾವಣ ಮಾಸದಲ್ಲಿ ರೈಲ್ವೇ ಪ್ರಯಾಣ ಮಾಡುತ್ತೀರಾ? ಹಾಗಾದ್ರೆ ಇಲಾಖೆಯಿಂದ ನಿಮಗಿದೆ ಸಿಹಿಸುದ್ದಿ


ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರಿಗೆ ಸೇರಿದ ಮತ್ತೊಂದು ಅಪಾರ್ಟ್‌ಮೆಂಟ್‌ನ ಚಿನಾರ್ ಪಾರ್ಕ್ ಪ್ರದೇಶದಲ್ಲಿ ಗುರುವಾರ ಸಂಜೆ ಇಡಿ ದಾಳಿ ನಡೆಸಿತ್ತು. ಅರ್ಪಿತಾ ಮುಖರ್ಜಿ ಅವರ ಫ್ಲ್ಯಾಟ್ ಮೇಲೆ ಇಡಿ ದಾಳಿ ನಡೆಸಿದ ಒಂದು ದಿನದ ನಂತರ ಸುಮಾರು 28 ಕೋಟಿ ನಗದು ವಶಪಡಿಸಿಕೊಂಡಿದೆ. ಶಾಲಾ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿ ಅವರನ್ನು ಇಡಿ ಬಂಧಿಸಿದೆ. ಕಳೆದ ವಾರ ಕೋಲ್ಕತ್ತಾದ ಮತ್ತೊಂದು ಫ್ಲಾಟ್‌ನಿಂದ ಇಡಿ 21 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗದನ್ನು ವಶಪಡಿಸಿಕೊಂಡಿತ್ತು.


ಇದನ್ನೂ ಓದಿ : ರಾಜಸ್ಥಾನದಲ್ಲಿ ವಾಯುಪಡೆಯ ಮಿಗ್-21 ಜೆಟ್ ಪತನ: ಇಬ್ಬರು ಪೈಲಟ್‌ಗಳು ಸಾವು!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.