ರಾಜಸ್ಥಾನದಲ್ಲಿ ವಾಯುಪಡೆಯ ಮಿಗ್-21 ಜೆಟ್ ಪತನ: ಇಬ್ಬರು ಪೈಲಟ್‌ಗಳು ಸಾವು!

"ಐಎಎಫ್ ಇಬ್ಬರು ಪೈಲಟ್‌ಗಳ ಪ್ರಾಣತ್ಯಾಗಕ್ಕೆ ವಿಷಾದ ವ್ಯಕ್ತಪಡಿಸುತ್ತದೆ. ದುಃಖಿತ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ" ಎಂದು ಹೇಳಿಕೆಯನ್ನು ನೀಡಿದೆ. ಸದ್ಯ ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಹೇಳಿದೆ.

Written by - Bhavishya Shetty | Last Updated : Jul 29, 2022, 07:48 AM IST
  • ವಾಯುಯಾನ ನಡೆಸುತ್ತಿದ್ದ ಏರ್‌ಫೋರ್ಸ್‌ನ ಮಿಗ್ -21 ಜೆಟ್ ವಿಮಾನವು ಪತನ
  • ಐಎಎಫ್‌ನ ಡಬಲ್‌-ಸೀಟ್‌ಗಳ ಮಿಗ್-21 ತರಬೇತಿ ವಿಮಾನ
  • ರಾತ್ರಿ 9:10 ರ ಸುಮಾರಿಗೆ ಬಾರ್ಮರ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ
ರಾಜಸ್ಥಾನದಲ್ಲಿ ವಾಯುಪಡೆಯ ಮಿಗ್-21 ಜೆಟ್ ಪತನ: ಇಬ್ಬರು ಪೈಲಟ್‌ಗಳು ಸಾವು! title=
Air Force

ರಾಜಸ್ಥಾನದ ಬಾರ್ಮರ್‌ನಲ್ಲಿ ಜುಲೈ 28ರಂದು ಸಂಜೆ ತರಬೇತಿಗಾಗಿ ವಾಯುಯಾನ ನಡೆಸುತ್ತಿದ್ದ ಏರ್‌ಫೋರ್ಸ್‌ನ ಮಿಗ್ -21 ಜೆಟ್ ವಿಮಾನವು ಪತನಗೊಂಡಿದ್ದು, ಪರಿಣಾಮ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಐಎಎಫ್‌ನ ಡಬಲ್‌-ಸೀಟ್‌ಗಳ ಮಿಗ್-21 ತರಬೇತಿ ವಿಮಾನವು ರಾಜಸ್ಥಾನದ ಉತರ್ಲೈ ವಾಯುನೆಲೆಯಿಂದ ತರಬೇತಿಗಾಗಿ ಹಾರಾಟ ನಡೆಸಿತ್ತು. ಆದರೆ ರಾತ್ರಿ 9:10 ರ ಸುಮಾರಿಗೆ ಬಾರ್ಮರ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ. ಇಬ್ಬರೂ ಪೈಲಟ್‌ಗಳಿಗೆ ಭಾರೀ ಪ್ರಮಾಣದಲ್ಲಿ ಗಾಯಗಳಾಗಿವೆ ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ಇದೀಗ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದೆ. 

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳಿಗೆ ಆ.11ರವರೆಗೆ ನ್ಯಾಯಾಂಗ ಬಂಧನ

"ಐಎಎಫ್ ಇಬ್ಬರು ಪೈಲಟ್‌ಗಳ ಪ್ರಾಣತ್ಯಾಗಕ್ಕೆ ವಿಷಾದ ವ್ಯಕ್ತಪಡಿಸುತ್ತದೆ. ದುಃಖಿತ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ" ಎಂದು ಹೇಳಿಕೆಯನ್ನು ನೀಡಿದೆ. ಸದ್ಯ ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಹೇಳಿದೆ.

ಇನ್ನು ಘಟನೆ ನಡೆದ ಬಗ್ಗೆ ಮಾಹಿತಿ ಪಡೆದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಳಿಕ ಟ್ವೀಟ್‌ ಮಾಡಿದ ಅವರು, "ರಾಜಸ್ಥಾನದ ಬಾರ್ಮರ್ ಬಳಿ ಐಎಎಫ್‌ನ ಮಿಗ್ -21 ತರಬೇತುದಾರ ವಿಮಾನ ಅಪಘಾತಕ್ಕೀಡಾಗಿದೆ. ಪರಿಣಾಮ ಇಬ್ಬರು ಏರ್ ವಾರಿಯರ್‌ಗಳನ್ನು ಕಳೆದುಕೊಂಡಿದ್ದು, ತೀವ್ರ ದುಃಖವಾಗಿದೆ" ಎಂದು ಸಂತಾಪ ಸೂಚಿಸಿದ್ದಾರೆ. 

"ದೇಶಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬಗಳ ಬಗ್ಗೆ ನಾನು ಚಿಂತಿಸುತ್ತಿದ್ದೇನೆ" ಎಂದು ಅವರು ಹೇಳಿದರು. 

ಇದನ್ನೂ ಓದಿ: ಈ ಮೂರು ರಾಶಿಯವರ ಮೇಲೆ ಶನಿಯ ವಕ್ರ ದೃಷ್ಟಿ: 2023 ರವರೆಗೆ ಇರಲಿ ಎಚ್ಚರ

MiG-21 ಸೋವಿಯತ್ ಯುಗದ ಏಕ-ಎಂಜಿನ್ ಮಲ್ಟಿರೋಲ್ ಫೈಟರ್/ಗ್ರೌಂಡ್ ಅಟ್ಯಾಕ್ ಏರ್‌ಕ್ರಾಫ್ಟ್ ಆಗಿದ್ದು ಅದು ಒಂದೊಮ್ಮೆ ಐಎಎಫ್‌ ಫ್ಲೀಟ್‌ನ ಬೆನ್ನೆಲುಬಾಗಿತ್ತು. ವಿಮಾನವು ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿದ್ದು, ಮುಂದಿನ ದಶಕದಲ್ಲಿ ಸೇವೆಯಿಂದ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಅಥವಾ ಹೆಚ್ಚು ಆಧುನಿಕ ಪ್ರಕಾರಗಳೊಂದಿಗೆ ಬದಲಾಯಿಸುವ ಸಾಧ್ಯತೆಯೂ ಇದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News