ಶ್ರಾವಣ ಮಾಸದಲ್ಲಿ ರೈಲ್ವೇ ಪ್ರಯಾಣ ಮಾಡುತ್ತೀರಾ? ಹಾಗಾದ್ರೆ ಇಲಾಖೆಯಿಂದ ನಿಮಗಿದೆ ಸಿಹಿಸುದ್ದಿ

ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC ಇಸ್ಕಾನ್‌ನ ಗೋವಿಂದ ರೆಸ್ಟೋರೆಂಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ನೀವು ಪ್ರಯಾಣಕ್ಕೆ ಟಿಕೆಟ್‌ ಬುಕ್‌ ಮಾಡುವ ಸಂದರ್ಭದಲ್ಲಿ ಗೋವಿಂದ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದರೆ, ಸಾತ್ವಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ.  

Written by - Bhavishya Shetty | Last Updated : Jul 29, 2022, 09:47 AM IST
  • ಶ್ರಾವಣ ಮಾಸದಲ್ಲಿ ಸಾತ್ವಿಕ ಆಹಾರ ನೀಡಲು ರೈಲ್ವೇ ನಿರ್ಧಾರ
  • ಇಸ್ಕಾನ್‌ನ ಗೋವಿಂದ ರೆಸ್ಟೋರೆಂಟ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಐಆರ್‌ಸಿಟಿಸಿ
  • ಧಾರ್ಮಿಕ ಯಾತ್ರೆಗೆ ತೆರಳುವ ಜನರಿಗೆ ಈ ಸೇವೆ ಸಹಾಯಕ
ಶ್ರಾವಣ ಮಾಸದಲ್ಲಿ ರೈಲ್ವೇ ಪ್ರಯಾಣ ಮಾಡುತ್ತೀರಾ? ಹಾಗಾದ್ರೆ ಇಲಾಖೆಯಿಂದ ನಿಮಗಿದೆ ಸಿಹಿಸುದ್ದಿ title=
Indian Railway

ರೈಲ್ವೇ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ನೆಚ್ಚಿನ ಆಹಾರಗಳನ್ನು ಸೇವಿಸಬಹುದು. ಇನ್ನು ಇದೀಗ ಶ್ರಾವಣ ಮಾಸ. ಕೆಲ ಜನರು ಈ ಮಾಸದಲ್ಲಿ ಸಸ್ಯಹಾರ ಸೇವನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಶ್ರಾವಣ ಮಾಸದಲ್ಲಿ ಸಾತ್ವಿಕ ಆಹಾರ (ಸಸ್ಯಹಾರ) ನೀಡುವ ಸೇವೆಯನ್ನು ಜಾರಿಗೊಳಿಸಲಿದೆ.  

ಇದನ್ನೂ ಓದಿ: ಡಬಲ್ ಚಿನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಫೇಶಿಯಲ್ ಯೋಗ ಪ್ರಯತ್ನಿಸಿ

ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC ಇಸ್ಕಾನ್‌ನ ಗೋವಿಂದ ರೆಸ್ಟೋರೆಂಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ನೀವು ಪ್ರಯಾಣಕ್ಕೆ ಟಿಕೆಟ್‌ ಬುಕ್‌ ಮಾಡುವ ಸಂದರ್ಭದಲ್ಲಿ ಗೋವಿಂದ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದರೆ, ಸಾತ್ವಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ.  

ಆರಂಭದಲ್ಲಿ, ಈ ಸೌಲಭ್ಯವನ್ನು ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಪ್ರಾರಂಭಿಸಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಇದೀಗ ರೈಲ್ವೇ ಇಲಾಖೆಯು ಇನ್ನೊಂದು ನಿಲ್ದಾಣದಲ್ಲಿ ಸಸ್ಯಾಹಾರದ ವ್ಯವಸ್ಥೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ರೈಲ್ವೆಯ ವಿವಿಧ ವಲಯಗಳಲ್ಲಿ ಈ ಸೌಲಭ್ಯ ಜಾರಿಯಿಂದ ಸಾತ್ವಿಕ ಆಹಾರ ಸೇವಿಸುವವರಿಗೆ ಅನುಕೂಲವಾಗಲಿದೆ.

ಅನೇಕ ಬಾರಿ ಪ್ರಯಾಣಿಕರು ಪ್ಯಾಂಟ್ರಿಯಲ್ಲಿನ ಆಹಾರದ ಶುದ್ಧತೆಯ ಬಗ್ಗೆ ಅನುಮಾನ ಹೊಂದಿರುತ್ತಾರೆ ಎಂದು ರೈಲ್ವೆ ಮಂಡಳಿಗೆ ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ದೂರ ಪ್ರಯಾಣ ಮಾಡುವವರಿಗೆ ತೊಂದರೆಯಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನದ ಪ್ರಯಾಣಿಕರಿಗೆ ಸಾತ್ವಿಕ ಆಹಾರವು ಹೆಚ್ಚಾಗಿ ಸಿಗುವುದಿಲ್ಲ. ಆದರೆ ಈಗ ಅಂತಹ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸಾತ್ವಿಕ ಆಹಾರವನ್ನು ಇಷ್ಟಪಡುವ ಪ್ರಯಾಣಿಕರು ರೈಲಿನಲ್ಲಿರುವ ಗೋವಿಂದ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡುವ ಮೂಲಕ ತಮಗೆ ಬೇಕಾದ ಆಹಾರವನ್ನು ಸೇವಿಸಬಹುದು. ಎ

ಪ್ರಯಾಣದಲ್ಲಿ ಸಾತ್ವಿಕ ಆಹಾರವನ್ನು ಪಡೆಯಲು ಬಯಸಿದರೆ, ನೀವು IRCTC ಇ-ಕ್ಯಾಟರಿಂಗ್ ವೆಬ್‌ಸೈಟ್ ಅಥವಾ ಫುಡ್ ಆನ್ ಟ್ರ್ಯಾಕ್ ಅಪ್ಲಿಕೇಶನ್‌ನಲ್ಲಿ ಬುಕ್ ಮಾಡಬಹುದು. ರೈಲು ಹೊರಡುವ ಕನಿಷ್ಠ ಎರಡು ಗಂಟೆಗಳ ಮೊದಲು ಪ್ರಯಾಣಿಕರು PNR ಸಂಖ್ಯೆಯೊಂದಿಗೆ ಆರ್ಡರ್ ಮಾಡಬೇಕಾಗುತ್ತದೆ.

ಇದನ್ನೂ ಓದಿ: Gold Price Today : ಚಿನ್ನ ಪ್ರಿಯರಿಗೆ ಶಾಕಿಂಗ್ ; ಭಾರೀ ದುಬಾರಿಯಾಯಿತು ಚಿನ್ನ 

ಧಾರ್ಮಿಕ ಯಾತ್ರೆಗೆ ತೆರಳುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಆರಂಭಿಸಲಾಗಿದೆ ಎಂದು IRCTC ಹೇಳಿದೆ. ಮೊದಲ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ ಬಂದರೆ ವಿಸ್ತರಣೆ ಮಾಡಲಾಗುವುದು. ಮೆನುವಿನಲ್ಲಿ ಡೀಲಕ್ಸ್ ಥಾಲಿ, ಮಹಾರಾಜ ಥಾಲಿ, ಓಲ್ಡ್‌ಡೆಲ್ಲಿ ವೆಜ್ ಬಿರಿಯಾನಿ, ಪನೀರ್‌ನಿಂದ ಮಾಡಿದ ಭಕ್ಷ್ಯಗಳು, ನೂಡಲ್ಸ್, ದಾಲ್ ಮಖಾನಿ ಮತ್ತು ಇನ್ನೂ ಅನೇಕ ಸಾತ್ವಿಕ ಭಕ್ಷ್ಯಗಳು ಸೇರಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News