ನವದೆಹಲಿ :  Indian Railways/IRCTC : ಕರೋನಾ (Coronavirus) ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆಯನ್ನು ಮತ್ತೆ ನಿಧಾನವಾಗಿ ಆರಂಭಗೊಳಿಸಲಾಗುತ್ತಿದೆ. ಕರೋನಾ ಪ್ರೋಟೋಕಾಲ್ ಅನುಸರಿಸಿ,  ಮತ್ತೆ ಎಲ್ಲಾ ರೈಲುಗಳನ್ನು (Train) ಹಳಿಗೆ ತರಲು ರೈಲ್ವೆ ಇಲಾಖೆ ನಿರ್ಧರಿಸಿದೆ.  ರೈಲು ಯಾತ್ರಿಗಳಿಗೆ ಪ್ರಯಾಣ ಮಾಡಲು ಯಾವುದೇ ತೊಂದರೆಯಾಗದಂತೆ ಇಲಾಖೆ ಕ್ರಮ ಕೈಗೊಳುತ್ತಿದೆ.   


COMMERCIAL BREAK
SCROLL TO CONTINUE READING

ಮತ್ತೊಮ್ಮೆ ಕರೋನಾ (Coronavirus) ಸೋಂಕು ವೇಗವಾಗಿ ಹರಡುತ್ತಿದೆ. ಈ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರೈಲುಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ನಿಧಾನವಾಗಿ ಎಲ್ಲಾ ರೈಲುಗಳನ್ನು (train) ಮತ್ತೆ ಹಳಿಗೆ ತರಲು ತೀರ್ಮಾನಿಸಲಾಗಿದೆ. ಕರೋನ ಮಾರ್ಗಸೂಚಿಗಳನ್ನು (Corona Guidelines) ಸರಿಯಾದ ರೀತಿಯಲ್ಲಿ ಪಾಲಿಸಿಕೊಂಡು ಎಲ್ಲಾ ರೈಲು ಸೇವೆ ಆರಂಭಿಸಲು ಇಲಾಖೆ ನಿರ್ಧರಿಸಿದೆ. ಸೋಮವಾರ, ಉತ್ತರ ರೈಲ್ವೆಯ 70 ಕ್ಕೂ ಹೆಚ್ಚು ಸ್ಥಳೀಯ ರೈಲುಗಳು ಓಡಾಟ ಆರಂಭಿಸಿದೆ.  ಈಗ ಶತಾಬ್ದಿಯಂತಹ ರೈಲುಗಳ ಓಡಾಟಕ್ಕೂ ಸಿದ್ಧತೆ ನಡೆಸಲಾಗಿದೆ.  ನಾಲ್ಕು ಶತಾಬ್ದಿ ಸ್ಪೆಷಲ್ ಮತ್ತು ಒಂದು ಡುರೊಂಟೊ ವಿಶೇಷ ರೈಲುಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ (Piyush Goyal) ಟ್ವೀಟ್ ನಲ್ಲಿ ತಿಳಿಸಿದ್ದಾರೆ. 


ಇದನ್ನೂ ಓದಿ : Video :ಬೈಯಪ್ಪನಹಳ್ಳಿಯಲ್ಲಿ ಕಾರ್ಯಾರಂಭಿಸಲಿದೆ ದೇಶದ ಮೊದಲ AC Railway Terminal


ರೈಲ್ವೆ ಮೂಲಗಳ ಪ್ರಕಾರ, ಹೆಚ್ಚಿನ ರೈಲುಗಳನ್ನು ಓಡಿಸಲು ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಇಲಾಖೆ ಪೂರ್ಣಗೊಳಿಸಿದೆ. ಇದಕ್ಕಾಗಿ ಟೈಮ್ ಟೇಬಲ್ ಸಹ ಸಿದ್ಧವಾಗಿದೆ. ಕೋವಿಡ್ (COVID-19) ಪ್ರೋಟೋಕಾಲ್ ನೊಂದಿಗೆ ಏಪ್ರಿಲ್ 10 ರಿಂದ 90 ಪ್ರತಿಶತದಷ್ಟು ರೈಲುಗಳು ಓಡಾಟ ಆರಂಭಿಸಲಿದೆ.  ಹೀಗಾಗಿ ಇನ್ನು ರೈಲಿನಲ್ಲಿ ಉಂಟಾಗುವ ಜನಸಂದಣಿಯನ್ನು ತಪ್ಪಿಸಿದಂತಾಗುತ್ತದೆ. 


ರೈಲ್ವೆ ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ 10 ರಿಂದ ಅಮೃತಸರ ಶತಾಬ್ಡಿ, ಚಂಡೀಗಢ ಶತಾಬ್ಡಿ, ಜೈಪುರ ಶತಾಬ್ದಿ ಸೇರಿದಂತೆ ರಾಜಧಾನಿ ರೈಲುಗಳ (Rajdhani Train) ಓಡಾಟ ಆರಂಭವಾಗಲಿದೆ. ಕೋವಿಡ್ ಕಾರಣ, ಎಲ್ಲಾ ರೈಲುಗಳು ವಿಶೇಷವಾಗಿ ಆರಂಭಗೊಲಿಸಲಾಗುತ್ತದೆ. ಹಾಗಾಗಿ  ಪ್ರಯಾಣದ ಶುಲ್ಕವೂ ಹೆಚ್ಚಿರುತ್ತದೆ.  ಕೋವಿಡ್ ಸೋಂಕಿನ ಪ್ರಕರಣವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಯಿಲ್ಲದೆ ಪ್ರಯಾಣಿಕರಿಗೆ ರೈಲಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ ಎನ್ನಲಾಗಿದೆ. ಹರಿದ್ವಾರ್ ನಿಲ್ದಾಣದಲ್ಲಿ (Railway station) ಸೋಮವಾರದಿಂದಲೇ ಈ ನಿಯಮವನ್ನು ಜಾರಿಗೆ ತರಲಾಗಿದೆ. 


ಇದನ್ನೂ ಓದಿ : Indian Railways: ರೈಲಿನಲ್ಲಿ ನಿಮ್ಮ ಸಾಮಾನು ಕಳುವಾದರೆ, ಹೀಗೆ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.