ಬೆಂಗಳೂರು : ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ನಿಲ್ದಾಣ (India First Centralized AC Railway Terminal) ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭವಾಗಲಿದೆ. ಈ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (Sir M Visvesvaraya terminal) ಎಂದು ಹೆಸರಿಸಲಾಗಿದೆ. ಈ ಹವಾನಿಯಂತ್ರಿತ ಟರ್ಮಿನಲ್ ಬಹುತೇಕ ರೆಡಿಯಾಗಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ.
ದೇಶದ ಮೊದಲ ಎಸಿ ಟರ್ಮಿನಲ್ ಅನ್ನು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ. ಇಲ್ಲಿ ವಿಮಾನ ನಿಲ್ದಾಣದಲ್ಲಿರುವಂತೆಯೇ (Airport) ಎಲ್ಲಾ ಸೌಲಭ್ಯಗಳೂ ಇರಲಿವೆ. ಭಾರತದ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ (India First Centralized AC Railway Terminal) ಇದಾಗಲಿದೆ. ಕೆಲ ದಿನಗಳ ಹಿಂದೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಟ್ವೀಟ್ (tweet) ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಇದೀಗ ಮಿನಿಸ್ಟರ್ ಆಫ್ ರೈಲ್ವೇಸ್ ಈ ನಿಲ್ದಾಣದ ವಿಡಿಯೋವನ್ನು ಶೇರ್ ಮಾಡಿದೆ.
Transformation for New India:
India's first centralised AC terminal in Bengaluru, named after Sir M Visvesvaraya. pic.twitter.com/RY2tEmrfb6
— Ministry of Railways (@RailMinIndia) March 23, 2021
ಇದನ್ನೂ ಓದಿ : DK Shivakumar: 'ನನಗಿರುವುದು ಒಬ್ಬಳೆ ಹೆಂಡತಿ, ಒಂದೇ ಸಂಸಾರ'
ಸುಮಾರು 314 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್. ಎಂ ವಿಶ್ವೇಶ್ವರಯ್ಯ ಟರ್ಮಿನಲ್ (Sir M Visvesvaraya terminal) ನಿರ್ಮಾಣ ಮಾಡಲಾಗಿದೆ. 2021 ಫೆಬ್ರವರಿಯಲ್ಲಿ ಈ ಟರ್ಮಿನಲ್ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕರೋನಾ (Coronavirus) ಕಾರಣದಿಂದಾಗಿ ಕೆಲಸ ಸ್ಥಗಿತಗೊಂಡಿದ್ದು, ಇದೀಗ ಟರ್ಮಿನಲ್ ಪೂರ್ತಿಯಾಗಿ ರೆಡಿಯಾಗಿ ನಿಂತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಎಸಿ ಟರ್ಮಿನಲ್ ಅನ್ನು ನಿರ್ಮಿಸಲಾಗಿದೆ. ಈ ನಿಲ್ದಾಣ ಯಾವ ವಿಮಾನ ನಿಲ್ದಾಣಕ್ಕೂ ಕಡಿಮೆ ಇಲ್ಲ ಎನ್ನಲಾಗಿದೆ. ಈ ನಿಲ್ದಾಣ ಕಾರ್ಯಾರಂಭ ಮಾಡಲು ಶುರು ಮಾಡಿದರೆ, ನಂತರ ಕೆಎಸ್ ಆರ್ (KSR)ಮತ್ತು ಯಶವಂತಪುರ (Yashawanthpura) ರೈಲು ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ.
ದೇಶದ ಮೊದಲ ಎಸಿ ಟರ್ಮಿನಲ್ ನಿರ್ಮಾಣದೊಂದಿಗೆ ಇನ್ನು ಬೆಂಗಳೂರಿಗೆ (Bengaluru) ಹೆಚ್ಚು ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಕಾರಣದಿಂದಾಗಿ ಬಹುತೇಕ ಎಲ್ಲಾ ಜಿಲ್ಲೆಗಳಿಂದಲೂ ಬೆಂಗಳೂರಿಗೆ ರೈಲು ಸಂಚಾರ ಸಾಧ್ಯವಾಗಲಿದೆ.
ಇದನ್ನೂ ಓದಿ : Coronavirus: ಮೈಸೂರಿನಲ್ಲಿ ಮತ್ತೆ ಕೋವಿಡ್ ಆತಂಕ, ಒಂದೇ ಶಾಲೆಯ 19 ಮಕ್ಕಳಿಗೆ ಕರೋನ ದೃಢ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.