ನವದೆಹಲಿ: Funny Viral Video - ಪ್ರಸ್ತುತ ಇಡೀ ವಿಶ್ವ ಕೊರೊನಾ ಮಹಾಮಾರಿ (Coronavirus Pandemic) ಹಾಗೂ ಅದರಿಂದಾಗುವ ಇತರೆ ಕಾಯಿಲೆಗಳ ವಿರುದ್ಧ ಹೋರಾಡುತ್ತಿದೆ.  ಹೀಗಿರುವಾಗ ಜನರು ಸೋಂಕಿನಿಂದ ಬಚಾವಾಗಲು ವಿವಿಧ ಉಪಾಯಗಳ ಮೇಲೆ ಒತ್ತು ನೀಡುತ್ತಿದ್ದಾರೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುತ್ತಾ ಅವರು ಸಾಮಾಜಿಕ ಅಂತರವನ್ನು ಕೂಡ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ ಡೋಂಗಿ ಬಾಬಾವೊಬ್ಬ ನಡೆಸುತ್ತಿರುವ ಹವನದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಬಾ ಕೊರೊನಾ ವೈರಸ್ (Coronavirus) ಹೊಡೆದೋಡಿಸಲು ಮಂತ್ರವನ್ನು ಜಪಿಸಿ ಅಗ್ನಿಗೆ ಆಹುತಿ ನೀಡುತ್ತಿದ್ದಾನೆ. 


COMMERCIAL BREAK
SCROLL TO CONTINUE READING

ಯಜ್ಞದಿಂದ ದೂರಾಗಲಿದೆ ಕೊರೊನಾ
ಒಂದೆಡೆ ಇಡೀ ವಿಶ್ವದಲ್ಲಿಯೇ ಇದುವರೆಗೆ ಕೊರೊನಾ ವೈರಸ್ (Covid-19) ವಿರುದ್ಧ ಹೋರಾಡುವ  ಪರ್ಫೆಕ್ಟ್ ಔಷಧಿ ಇಲ್ಲದಿರುವ ಹಿನ್ನೆಲೆ ವಿಜ್ಞಾನಿಗಳು ಔಷಧಿ ಅಭಿವೃದ್ದಿಪಡಿಸಲು ಯತ್ನಿಸುತ್ತಿದ್ದರೆ, ಇನ್ನೊಂದೆಡೆ ಹವನ ನಡೆಸುತ್ತಿರುವ ಓರ್ವ ಬಾಬಾ ಹೇಳುವ ಪ್ರಕಾರ, ಅವರು ಹೇಳುವ ಮಂತ್ರದಿಂದ  ಕೊರೊನಾದಿಂದ ಮುಕ್ತಿ ಸಿಗಲಿದೆ ಎಂದಿದ್ದಾರೆ. ಈ ಯಜ್ಞದ ವಿಶೇಷತೆ ಎಂದರೆ, ಕೊರೊನಾ ವೈರಸ್ ಅನ್ನು ಹೊಡೆದೋಡಿಸಲು ಬಾಬಾ ಹೇಳುತ್ತಿರುವ ಮಂತ್ರ ಎಲ್ಲರನ್ನು ಅವಾಕ್ಕಾಗಿಸಿದೆ. ಈ ವಿಡಿಯೋ ವಿಕ್ಷೀಸಿ ನೀವು ಕೂಡ ಹೊಟ್ಟೆ ಹಿಡಿದು ನಗುವುದಂತೂ ಗ್ಯಾರಂಟಿ.


ಇದನ್ನೂ ಓದಿ- Arvind Kejriwal : ಕೊರೋನಾದಿಂದ ಮಗನ ಕಳೆದುಕೊಂಡ ತಂದೆಗೆ ₹ 1 ಕೋಟಿ ಪರಿಹಾರ ನೀಡಿದ ದೆಹಲಿ ಸಿಎಂ​!


Human Life On Earth - ಭೂಮಿಯ ಮೇಲೆ ಮಾನವ ಸಂಕುಲದ ಅಸ್ತಿತ್ವದ ಕುರಿತು ಕರಾಳ ಭವಿಷ್ಯ


ಸಾಮಾಜಿಕ ಮಾಧ್ಯಮ ತಾಣವಾಗಿರುವ ಟ್ವಿಟ್ಟರ್ (Twitter) ನಲ್ಲಿ ಆಶಿ ಅಂಬೇಡ್ಕರ್ ಹೆಸರಿನ ಅಕೌಂಟ್ ನಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆಶಿ ಹಂಚಿಕೊಂಡಿರುವ ಈ ವಿಡಿಯೋಗೆ ಜನ ಹುಚ್ಚೆದ್ದು ಕಾಮೆಂಟ್ ಮಾಡುತ್ತಿದ್ದಾರೆ. ಬಹುತೇಕ ಪ್ರತಿಕ್ರಿಯೆ ನೀಡಿರುವ ಜನರು ಇಂತಹ ಕಠಿಣ ಪ್ರಸಂಗದಲ್ಲಿ ಈ ರೀತಿಯ ಡೋಂಗಿ ಬಾಬಾಗಳಿಂದ ಎಚ್ಚರದಿಂದಿರಬೇಕು ಎನ್ನುತ್ತಿದ್ದಾರೆ. ಈ ಕುರಿತು ವಿಡಿಯೋ ಕ್ಯಾಪ್ಶನ್ ನಲ್ಲಿ ಬರೆದುಕೊಂಡಿರುವ ಆಶಿ ಕೂಡ 'ಮಾರ್ಕೆಟ್ ನಲ್ಲಿ ಎಂತೆಂಥಾ ನಮೂನೆಗಳು ಬರುತ್ತವೆ, ಇದೀಗ ಕೊರೊನಾ ಹೊಡೆದೋಡಿಸಲು ಬಂದಿದ್ದಾನೆ ಓರ್ವ ತಾಂತ್ರಿಕ. ಇತನಿಗೆ ಕೊರೊನಾ ಚಿಕಿತ್ಸೆಯ ಜೊತೆಗೆ ಮೆದುಳಿನ ಚಿಕಿತ್ಸೆ ಕೂಡ ಮಾಡಿಸಬೇಕು' ಎಂದು ಹೇಳಿದ್ದಾಳೆ.


ಇದನ್ನೂ ಓದಿ-Two New Coronavirus Will Come Soon - ಈಗಿರುವ ಕೊರೊನಾ ವೈರಸ್ ನಿಂದಲೇ ಇನ್ನೂ ಮುಕ್ತಿ ಸಿಕ್ಕಿಲ್ಲ, ದಾಳಿಗೆ ಮತ್ತೆರಡು ವೈರಸ್ ರೆಡಿಯಾಗಿವೆಯಂತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.