Human Life On Earth - ಭೂಮಿಯ ಮೇಲೆ ಮಾನವ ಸಂಕುಲದ ಅಸ್ತಿತ್ವದ ಕುರಿತು ಕರಾಳ ಭವಿಷ್ಯ

Human Life On Earth - ಹಾರ್ವರ್ಡ್ ವಿಶ್ವವಿದ್ಯಾನಿಲಯದ (Harvard University) ಪ್ರಾಧ್ಯಾಪಕ ಹಾಗೂ ಖಗೋಳ ಶಾಸ್ತ್ರಜ್ಞ ಅವಿ ಲೋಯೇಬ್ (Scientist & Astronomer Avi Loeb) ಅವರು ತಮ್ಮ ಸಹ ವಿಜ್ಞಾನಿಗಳಿಗೆ ಈ ಜಗತ್ತು ಎಷ್ಟು ಕಾಲ ಉಳಿಯಲಿದೆ ಎಂಬ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದರಲ್ಲಿ ಭೂಮಿಯ ಅಂತ್ಯದ ದಿನಾಂಕ ಯಾವುದು? ಮತ್ತು ಮಾನವ ಸಂಕುಲದ ಅಂತ್ಯ ಯಾವಾಗ ಎಂಬುದರ ಕುರಿತು ಪ್ರಶ್ನೆ ಕೇಳಿ ಯುವ ವಿಜ್ಞಾನಿಗಳಿಗೆ ಅವರು ಸಲಹೆಯೊಂದನ್ನು ನೀಡಿದ್ದಾರೆ.

Written by - Nitin Tabib | Last Updated : May 22, 2021, 03:10 PM IST
  • ಈ ಜಗತ್ತು ಎಷ್ಟು ಕಾಲ ಉಳಿಯಲಿದೆ?
  • ಭೂಮಿಯ ಅಂತ್ಯ ಯಾವಾಗ? ಮಾನವ ಸಂಕುಲದ ಅಂತ್ಯ ಯಾವಾಗ?
  • ಕರಾಳ ಭವಿಷ್ಯ ನುಡಿದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ. ಅವಿ ಲೋಯೇಬ್
Human Life On Earth - ಭೂಮಿಯ ಮೇಲೆ ಮಾನವ ಸಂಕುಲದ ಅಸ್ತಿತ್ವದ ಕುರಿತು ಕರಾಳ ಭವಿಷ್ಯ title=
Human Life On Earth (File Photo)

ನವದೆಹಲಿ: Human Life On Earth - ಮಾನವ ಸಂಕುಲದ ಉಗಮದ ಜೊತೆಗೆ, ಪ್ರಪಂಚದ ಸೃಷ್ಟಿ ಮತ್ತು ವಿನಾಶದ ಬಗ್ಗೆ ಇರುವ ಅನೇಕ ಪರಿಕಲ್ಪನೆಗಳ ನಡುವೆ, ಭೂಮಿ ಅಥವಾ ಮಾನವರ ಅಂತ್ಯ ಯಾವಾಗ? ಎಂಬ ಪ್ರಶ್ನೆಯೂ ಆಗಾಗ ಉದ್ಭವಿಸುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಜೀವನದ ಸೃಷ್ಟಿ ಮತ್ತು ಅಂತ್ಯವು ದೇವರ ಕೈಯಲ್ಲಿದೆ. ವಿಷ್ಣು ಸ್ವತಃ ಕಾಲಕಾಲಕ್ಕೆ ಅವತಾರಗಳನ್ನು ತೆಗೆದುಕೊಂಡು ಭೂಮಿಯನ್ನು ಮತ್ತು ಮಾನವಕುಲವನ್ನು ಉಳಿಸಿದ್ದಾನೆ. ಇದನ್ನು ಪ್ರತಿಯೊಂದು ಧರ್ಮದಲ್ಲೂ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇಂದಿನ ಯುಗದಲ್ಲಿ, ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ದೃಷ್ಟಿಕೋನದಿಂದ, ಪ್ರಪಂಚದ ಅನೇಕ ವಿಜ್ಞಾನಿಗಳು ಮಾನವರ ಹಾಗೂ ಪ್ರಪಂಚದ ಅಂತ್ಯದ ಕುರಿತು ಹಲವು ವಾದಗಳನ್ನು ಮಂಡಿಸಿದ್ದಾರೆ. ಪ್ರಪಂಚದ ಚಲನಚಿತ್ರಗಳು ಹಾಗೂ ವಿಶ್ವದ ಪ್ರಾಚೀನ ನಾಗರಿಕತೆಗಳ ಉಲ್ಲೇಖದ ಮೂಲಕ ಕೂಡ ವಿಶ್ವ ವಿನಾಶ, ಭೂಮಿಯ ಸರ್ವನಾಶದ ಕಾಲದ ಕುರಿತು ಹಲವು ಚರ್ಚೆಗಳು ಆಗಾಗ ಕೇಳಿಬರುತ್ತವೆ.

ಭವಿಷ್ಯದ ಕುರಿತಾದ ದೊಡ್ಡ ಪ್ರಶ್ನೆ
ಈ ಚರ್ಚೆ ಈಗ್ಯಾಕೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ನಿಜ ಹೇಳುವುದಾದರೆ, ಹಾರ್ವರ್ಡ್ ವಿಶ್ವವಿದ್ಯಾಲಯದ (Harvard University) ಪ್ರಾಧ್ಯಾಪಕ ಮತ್ತು ವಿಜ್ಞಾನಿ ಅವಿ ಲೋಯೆಬ್ (Avi Loeb) ವಿಜ್ಞಾನಿಗಳಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ. ಜಗತ್ತು ಎಷ್ಟು ಕಾಲ ಉಳಿಯುತ್ತದೆ? ಭೂಮಿಯ ಅಂತ್ಯದ ದಿನಾಂಕ ಅಥವಾ ಮಾನವರ ಅಂತ್ಯ ಯಾವುದು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ಅವರು ಜಾಗತಿಕ ತಾಪಮಾನ ಏರಿಕೆಯನ್ನು (Global Warming) ತಡೆಯಲು ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ. ಇದರೊಂದಿಗೆ ವ್ಯಾಕ್ಸಿನ್ ತಯಾರಿಕೆಯ ಜೊತೆಗೆ  ಸುಸ್ಥಿರ ಶಕ್ತಿಗೆ ಶುದ್ಧ ಪರ್ಯಾಯವನ್ನು ಕಂಡುಕೊಳ್ಳಲು ಅವರು ಆಗ್ರಹಿಸಿದ್ದಾರೆ.

'ಖಗೋಳದಲ್ಲಿ ಸ್ಪರ್ಮ್ ಬ್ಯಾಂಕ್ ಸಿದ್ಧತೆ'
ಇನ್ನೂ ಸಾಕಷ್ಟು ಕೆಲಸಗಳು ನಡೆಯಬೇಕಿದೆ ಎಂದಿರುವ ಪ್ರಾಧ್ಯಾಪಕರು,  ಪ್ರತಿಯೊಬ್ಬರೂ ಪೌಸ್ಟಿಕ್ ಆಹಾರವನ್ನು ಸೇವಿಸಬೇಕು ಮತ್ತು ಅದನ್ನು ಮಾಡಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಬಾಹ್ಯಾಕಾಶದಲ್ಲಿ ದೊಡ್ಡ ಬೇಸ್ ಸ್ಟೇಷನ್ ನಿರ್ಮಿಸಲು ಸಿದ್ಧರಾಗಬೇಕು. ವಿದೇಶಿಯರನ್ನು ಸಂಪರ್ಕಿಸಲು ಸಹ ಪ್ರಯತ್ನಿಸಿ. ಏಕೆಂದರೆ ನಾವು ತಾಂತ್ರಿಕವಾಗಿ ಸಂಪೂರ್ಣವಾಗಿ ಪ್ರಬುದ್ಧರಾದ ದಿನದಿಂದ ಇಡೀ ಮಾನವರ ಸಂಕುಲ ಮತ್ತು ಭೂಮಿಯು ನಾಶವಾಗಲು ಸಿದ್ಧವಾಗಲಿದೆ. ವಿಶೇಷವೆಂದರೆ, ಕಳೆದ ಕೆಲವು ವರ್ಷಗಳಲ್ಲಿ, ವಿಶ್ವದ ದೊಡ್ಡ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ವೀರ್ಯ ಬ್ಯಾಂಕುಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ದಿಕ್ಕಿನಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇಂತಹ ಕಾರ್ಯಾಚರಣೆಗಳ ಮೂಲಕ, ಭೂಮಿಯ ನಾಶದ ಸಮಯದಲ್ಲಿ, ನಮ್ಮೆಲ್ಲಾ ಆವಿಷ್ಕಾರಗಳು ಹಾಗೂ ತಾಂತ್ರಿಕ ಅಭಿವೃದ್ಧಿಯ ಸಹಾಯದಿಂದ ಆ ಸಮಯದಲ್ಲಿ ಇರುವ ಕೆಲವು ಮನುಷ್ಯರನ್ನು ಉಳಿಸಲು ಸಾಧ್ಯವಾಗಲಿದೆ ಎಂದು ಪ್ರೊಫೆಸರ್ ಲೋಯೆಬ್ ಅವರು ಹೇಳಿದ್ದಾರೆ. 

'ಮನುಷ್ಯರ ವಯಸ್ಸು ಹೆಚ್ಚಿಸುವ ಅವಶ್ಯಕತೆ ಇದೆ'
ಹಾರ್ವರ್ಡ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಪ್ರೊಫೆಸರ್ ಲೋಯೇಬ್, "ಸದ್ಯದ ಸ್ಥಿತಿಯಲ್ಲಿ ಮಾನವರ ಜೀವಿತ ಕಾಲ ಹೆಚ್ಚಿಸುವುದು ನಮ್ಮ ಆದ್ಯತೆಯಾಗಿರಬೇಕು. ಏಕೆಂದರೆ, ಎಷ್ಟು ವರ್ಷಗಳವರೆಗೆ ನಮ್ಮ ತಾಂತ್ರಿಕ ಸಭ್ಯತೆ ಜೀವಂತ ಉಳಿಯಲಿದೆ? ಎಂಬ ಪ್ರಶ್ನೆ ನನಗೆ ಹಲವು ಬಾರಿ ಎದುರಾಗಿದೆ" ಎಂದು ಗಣಿತದ ಒಂದು ಲೆಕ್ಕಾಚಾರದ ಆಧಾರದ ಮೇಲೆ ಹೇಳಿದ್ದಾರೆ. "ಇದಕ್ಕೆ ನನ್ನ ಉತ್ತರ ಎಂದರೆ, ಪ್ರಸ್ತುತ ನಾವು ಮಾನವ ಜೀವನದ ಮಧ್ಯಭಾಗದಲ್ಲಿದ್ದೇವೆ. ಈ ಭೂಮಿ ಇನ್ನೂ ಲಕ್ಷಾಂತರ ವರ್ಷ ಉಳಿಯುವ ಸಾಧ್ಯತೆ ಇದೆ ಅಥವಾ ಮಾನವ ಹಲವು  ಶತಮಾನಗಳವರೆಗೆ ಜೀವಿಸಬಲ್ಲ ಆದರೆ, ಅದಕ್ಕಿಂತ ಹೆಚ್ಚು ಜೀವಿಸಲು  ಸಾಧ್ಯವಿಲ್ಲ. ಆದರೆ, ಈ ಭವಿಷ್ಯ ಬದಲಾಯಿಸಲು ಸಾಧ್ಯವೇ? "ಎಂದು ಅವರು ಯುವ ವಿಜ್ಞಾನಿಗಳನ್ನು ಪ್ರಶ್ನಿಸಿದ್ದಾರೆ. 

'ಮಹಾಮಾರಿ ಹಾಗೂ ಯುದ್ಧಗಳ ಪಾತ್ರ'
ಮಾನವರ ಕಾರಣದಿಂದಾಗಿ ಭೂಮಿಯ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದರೆ, ಮನುಷ್ಯರಿಗೆ ಭೂಮಿಯ ಮೇಲೆ ಹೆಚ್ಚು ಕಾಲ ಬದುಕಲು ಸಾಧ್ಯವಾಗುವುದಿಲ್ಲ ಎಂಬಂತೆ ತೋರುತ್ತಿದೆ ಎಂದು ಅವಿ ಲೋಯೆಬ್ ಹೇಳಿದ್ದಾರೆ. ಕೆಲವು ಶತಮಾನಗಳಲ್ಲಿ, ಭೂಮಿಯ ಸ್ಥಿತಿ ತುಂಬಾ ಹದಗೆಡಲಿದೆ, ಜನರು ಬಾಹ್ಯಾಕಾಶಕ್ಕೆ ಹೋಗಬೇಕಾಗುವ ಪರಿಸ್ಥಿತಿ ಎದುರಾಗಲಿದೆ. ಇದರಲ್ಲಿ ತಾಂತ್ರಿಕ ದುರಂತ (Technological Catastrophe) ಅತಿದೊಡ್ಡ ಅಪಾಯವೆಂದು ಸಾಬೀತಾಗಲಿವೆ. ಇದಲ್ಲದೆ ಮತ್ತೆ  ಎರಡು ಪ್ರಮುಖ ಅಪಾಯಗಳಿವೆ. ಅವುಗಳೆಂದರೆ ಮಾನವರ ಮೂಲಕ ಅಭಿವೃದ್ಧಿಗೊಂಡ ಮಹಾಮಾರಿಗಳು (Pandemic) ಹಾಗೂ ದೇಶಗಳ ನಡುವಿನ ಯುದ್ಧಗಳು.  ಈ ಎಲ್ಲಾ ಸಂಗತಿಗಳನ್ನು ಸಕಾರಾತ್ಮಕವಾಗಿ ನಿರ್ವಹಿಸದಿದ್ದರೆ, ಭೂಮಿ ತನ್ನಷ್ಟಕ್ಕೆ ತಾನೇ ಮನುಷರನ್ನು ಅಂತ್ಯಗೊಳಿಸಲಿದೆ ಅಥವಾ ತನ್ನಷ್ಟಕ್ಕೆ ತಾನೇ ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Corona Death: ವರದಿಯಾಗಿರುವುದು ಕೆಲವೇ ಅಂಕಿ-ಅಂಶ, ವಾಸ್ತವಿಕ ಸಂಖ್ಯೆ ದ್ವಿಗುಣವಾಗಿರಬಹುದು- WHO

ವಿವಿಧ ದೇಶಗಳ ಹವಾಮಾನ ಸ್ಥಿತಿಗತಿಗಳು ಅನಿರೀಕ್ಷಿತವಾಗಿ ನಿರಂತರವಾಗಿ ಬದಲಾಗುತ್ತಿವೆ ಎಂದು ಲೋಯೆಬ್ ಹೇಳಿದ್ದಾರೆ. ಹಿಮನದಿಗಳು ಕರಗುತ್ತಿವೆ. ಸಮುದ್ರ ಮಟ್ಟ ಏರುತ್ತಿದೆ. ನೂರಾರು ವರ್ಷಗಳಿಂದ ನಿದ್ರಿಸುತ್ತಿದ್ದ ಜ್ವಾಲಾಮುಖಿಗಳು ಮತ್ತೆ ಪ್ರಜ್ವಲಿಸುತ್ತಿವೆ. ಅಮೆಜಾನ್ ಕಾಡು ಮತ್ತು ಇತರ ಪ್ರಮುಖ ಭಾಗಗಳಂತಹ ಭೂಮಿಯ ಮೇಲಿನ ಆಮ್ಲಜನಕದ ಮೂಲಗಳು ಬೆಂಕಿಯಿಂದ ನಾಶವಾಗುತ್ತಿವೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಯಾರು ಹೇಗೆ ಮರೆಯಲು ಸಾಧ್ಯ. ಲಕ್ಷಾಂತರ ಪ್ರಾಣಿಗಳು ಅದರಲ್ಲಿ ನಶಿಸಿ ಹೋಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಚೀನಾದ ವಾಯುವ್ಯ ಕಿಂಗ್‌ಹೈ ಪ್ರಾಂತ್ಯದಲ್ಲಿ 7.4 ತೀವ್ರತೆಯ ಭೂಕಂಪನ

'ನಿಸರ್ಗದ ಜೊತೆಗೆ ಚೆಲ್ಲಾಟ ನಿಂತುಹೋಗಲಿ'
ಹಿರಿಯ ವಿಜ್ಞಾನಿ ಮತ್ತು ಪ್ರಾಧ್ಯಾಪಕರು ಆಗಿರುವ ಅವಿ ಲೋಯೇಬ್, ಭೌತಶಾಸ್ತ್ರದ ಸರಳ ಮಾದರಿ  ನಾವೆಲ್ಲರೂ ಧಾತುರೂಪದ ಕಣಗಳಿಂದ ಕೂಡಿದ್ದೇವೆ ಎಂದು ಹೇಳುತ್ತದೆ ಎಂದಿದ್ದಾರೆ. ನಮ್ಮಲ್ಲಿ ಪ್ರತ್ಯೇಕವಾಗಿ ಏನನ್ನೂ ಸೇರಿಸಲಾಗಿಲ್ಲ. ಆದ್ದರಿಂದ, ಪ್ರಕೃತಿಯ ನಿಯಮಗಳ ಆಧಾರದ ಮೇಲೆ, ಮೂಲಭೂತ ಮಟ್ಟದಲ್ಲಿ ಅವುಗಳನ್ನು ಹಾಳುಮಾಡುವ ಯಾವುದೇ ಹಕ್ಕು ನಮಗಿಲ್ಲ. ಒಂದು ವೇಳೆ ಪ್ರಕೃತಿಯ ನಿಯಮಗಳ ಜೊತೆಗೆ ಇದೆ ರೀತಿ ಚೆಲ್ಲಾಟ ಮುಂದುವರೆದಿದ್ದೆ ಆದಲ್ಲಿ, ಅಂತಿಮವಾಗಿ ಅದು ಎಲ್ಲರಿಗೂ ಸಾಮೂಹಿಕ ನಷ್ಟವನ್ನುಂಟು ಮಾಡಲಿದೆ. ಹೀಗಾಗಿ ಮಾನವ ಹಾಗೂ ಆತನ ಜಟಿಲ ಶಾರೀರಿಕ ಸಂರಚನೆಯ ಕುರಿತು ವೈಯಕ್ತಿಕ ಮಟ್ಟದಲ್ಲಿ ಯಾವುದೇ ವಿಪತ್ತಿನ ಭವಿಷ್ಯವಾಣಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Alert: Coronavirus ನಿಂದ ಪುರುಷರಲ್ಲಿ ನಪುಂಸಕತ್ವ ಬರುವ ಸಾಧ್ಯತೆ ಎಂದ ಅಧ್ಯಯನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News