ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಿದ ನರ ರಾಕ್ಷಸರು
ಎಫ್‌ಐಆರ್‌ನ (FIR) ಪ್ರಕಾರ, ಫೆಬ್ರವರಿ 19ರಂದು ಐವರು ಯುವಕರು ಬಾಲಕಿಗೆ ಆಮಿಷವೊಡ್ಡಿ ಯಾರಿಲ್ಲದ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಅಸ್ಸೋಂ: ರಾಜಧಾನಿ ಗುವಾಹಟಿಯಲ್ಲಿ ಅಪ್ರಾಪ್ತೆ (Minor girl) ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಐವರು ಯುವಕರ ಪತ್ತೆಗೆ ಅಸ್ಸೋಂ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: PF ಖಾತೆದಾರರಿಗೆ ಬಂಪರ್ ಆಫರ್ : ನಿಮಗೆ ಸಿಗಲಿದೆ ₹7 ಲಕ್ಷ, ಅದಕ್ಕೆ ಈ ಕೆಲಸ ಮಾಡಬೇಕಷ್ಟೆ
ಎಫ್‌ಐಆರ್‌ನ (FIR) ಪ್ರಕಾರ, ಫೆಬ್ರವರಿ 19ರಂದು ಐವರು ಯುವಕರು ಬಾಲಕಿಗೆ ಆಮಿಷವೊಡ್ಡಿ ಯಾರಿಲ್ಲದ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಅದನ್ನು ಮೊಬೈಲ್ ನಲ್ಲಿ (Mobile) ರೆಕಾರ್ಡ್ ಕೂಡ ಮಾಡಿಕೊಂಡಿದ್ದಾರೆ.
ಘಟನೆ ಫೆಬ್ರವರಿ 19ರಂದು ನಡೆದಿದ್ದರೂ ಸಂತ್ರಸ್ತೆ ಮತ್ತು ಆಕೆಯ ಕುಟುಂಬವು ಮಾರ್ಚ್ 8ರಂದು ಪ್ರಕರಣ ದಾಖಲಿಸಿದೆ.
ಐವರು ಆರೋಪಿಗಳಾದ ಬಿಕಿ ಅಲಿ, ಫೈಜುಲ್ ಅಲಿ, ಪಿಂಕು ಅಲಿ, ಪೋನಾ ಅಲಿ ಮತ್ತು ರಾಜಾ ಅಲಿ ಈ ಕುಟುಂಬಕ್ಕೆ ಬೆದರಿಕೆ (Blackmail) ಹಾಕಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Big Braking : ತೆಲಂಗಾಣ ಸಿಎಂ ಕೆಸಿಆರ್ ಗೆ ಹೃದಯಾಘಾತ
ಗುವಾಹಟಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ (Pocso) ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.