Dharwad Crime: ಮದುವೆ ಮನೆಯಲ್ಲಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ!

ಗಂಭೀರವಾಗಿ ಗಾಯಗೊಂಡಿದ್ದ ಸಾಧಿಕ್‌ನನ್ನು ಸ್ಥಳೀಯರು ತಕ್ಷಣವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.

Written by - Zee Kannada News Desk | Last Updated : Mar 9, 2022, 08:20 PM IST
  • ಮದುವೆ ಮನೆಯಲ್ಲಿ ಜಗಳ ಬಡಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
  • ಧಾರವಾಡದ ಪೆಂಡಾರ್ ಗಲ್ಲಿಯಲ್ಲಿ ನಡೆದಿರುವ ಘಟನೆ
  • ಆರೋಪಿಯನ್ನು ಬಂಧಿಸಿದ ಧಾರವಾಡ ಶಹರ ಠಾಣೆ ಪೊಲೀಸರು
Dharwad Crime: ಮದುವೆ ಮನೆಯಲ್ಲಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ!  title=
ಜಗಳ ಬಡಿಸಲು ಹೋಗಿ ಪ್ರಾಣ ಕಳೆದುಕೊಂಡ!

ಧಾರವಾಡ: ಮದುವೆ ಮನೆಯಲ್ಲಿ ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಧಾರವಾಡ(Dharwad)ದಲ್ಲಿ ನಡೆದಿದೆ. ಪೆಂಡಾರ್ ಗಲ್ಲಿಯ ಹಾಲ್ ನಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ಜಾಂಬವಂತನಗರ ನಿವಾಸಿ ಸಾಧಿಕ್ ಮೃತಪಟ್ಟವರು.

ಮದುವೆ ಮನೆಯಲ್ಲಿ ಇಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಗಳ ಬಿಡಿಲು ಸಾಧಿಕ್ ಹೋಗಿದ್ದಾನೆ. ಈ ವೇಳೆ ನಡೆದ ತಳ್ಳಾಟ-ನೂಕಾಟದಲ್ಲಿ ಸಿಲುಕಿದ್ದರಂತೆ ಸಾಧಿಕ್ ತಲೆಗೆ ಗೇಟ್ ಬಡಿದಿದೆ. ಪರಿಣಾಮ ಆತನ ತಲೆಗೆ ಗಂಭೀರ ಪೆಟ್ಟಿ ಬಿದ್ದು ಗಾಯಗೊಂಡಿದ್ದಾನೆ.

ಇದನ್ನೂ ಓದಿ: 8 ಕೋಟಿ ರೂ. ಮೌಲ್ಯದ ಡ್ರಗ್ಸ್ ಡೀಲ್! ಮನೆಯಲ್ಲಿಯೇ ನಶೆ ಲೋಕ ಸೃಷ್ಟಿಸಿದ್ದ ಜೋಡಿ

ಗಂಭೀರವಾಗಿ ಗಾಯಗೊಂಡಿದ್ದ ಸಾಧಿಕ್‌ನನ್ನು ಸ್ಥಳೀಯರು ತಕ್ಷಣವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ(Kims Hospital Hubli)ಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.     

ರಿಜ್ವಾನ್ ಎಂಬಾತ ಸಾಧಿಕ್‌ನನ್ನು ತಳ್ಳಿದ್ದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು(Sahara Police Station) ಭೇಟಿ ನೀಡಿದ್ದು, ಆರೋಪಿ ರಿಜ್ವಾನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.   

ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News