Telangana:ಆರ್‌ಟಿಸಿ ಬಸ್ ನಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ಲೈಫ್ ಟೈಮ್ ಪಾಸ್.!
Telangana:ಸರ್ಕಾರಿ ಬಸ್‌ಗಳಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ಟಿಎಸ್‌ಆರ್‌ಟಿಸಿ ಆಡಳಿತ ಮಂಡಳಿಯು (TSRTC management) ಲೈಫ್ ಟೈಮ್ ಪಾಸ್ ನೀಡಿದೆ.
ಹೈದರಾಬಾದ್ (ತೆಲಂಗಾಣ): ಸರ್ಕಾರಿ ಬಸ್‌ಗಳಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ಟಿಎಸ್‌ಆರ್‌ಟಿಸಿ ಆಡಳಿತ ಮಂಡಳಿಯು (TSRTC management) ಲೈಫ್ ಟೈಮ್ ಪಾಸ್ ನೀಡಿದೆ. ಅವರನ್ನು 'ನಿರಂತರ ಪ್ರಯಾಣಿಕರು' ಎಂದು ಗೊತ್ತುಪಡಿಸಿ ಜೀವನಪರ್ಯಂತ ಬಸ್ ನಲ್ಲಿ ಫ್ರೀ ಆಗಿ ಓಡಾಡಲು ಅವಕಾಶ ನೀಡಿದೆ.
ನಿಗಮದಿಂದ ಹುಟ್ಟುಹಬ್ಬದ ಉಡುಗೊರೆಯಾಗಿ ಇಬ್ಬರು ಹೆಣ್ಣು ಮಕ್ಕಳಿಗೆ TSRTC ನಲ್ಲಿ ಜೀವನಪೂರ್ತಿ ಉಚಿತ ಬಸ್ ಪ್ರಯಾಣವನ್ನು ನೀಡಲಾಗಿದೆ.
ಇದನ್ನೂ ಓದಿ: OMG: ಈ ಸ್ವೆಟರ್ ಬೆಲೆ 30 ಲಕ್ಷ ರೂಪಾಯಿಯಂತೆ, ಅಂಥದ್ದೇನಿದೆ ಇದರಲ್ಲಿ?
ನ.30ರಂದು ನಾಗರಕರ್ನೂಲ್ ಡಿಪೋಗೆ ಸೇರಿದ ಬಸ್‌ನಲ್ಲಿ ಪೆದ್ದಕೋಟಪಲ್ಲಿ ಗ್ರಾಮದ ಬಳಿ ಮೊದಲ ಹೆಣ್ಣು ಮಗು ಜನಿಸಿತ್ತು. ಡಿ.7ರಂದು ಮಧ್ಯಾಹ್ನ ಸಿದ್ದಿಪೇಟೆ ಬಳಿಯ ಆಸಿಫಾಬಾದ್ ಡಿಪೋದ ಆರ್‌ಟಿಸಿ ಬಸ್‌ನಲ್ಲಿ ಮತ್ತೊಬ್ಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಟಿಎಸ್‌ಆರ್‌ಟಿಸಿ ಸಿಬ್ಬಂದಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಾಯಂದಿರು ಮತ್ತು ನವಜಾತ ಶಿಶುಗಳನ್ನು 108 ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು ಮತ್ತು ಇಬ್ಬರು ಆರೋಗ್ಯವಾಗಿದ್ದಾರೆ.
ಬಿಡುಗಡೆಯಾಯಿತು 'RRR ಟ್ರೇಲರ್ , ರಿಲೀಜ್ ಆಗುತ್ತಿದ್ದಂತೆ ಸಿಕ್ಕಿದೆ ಭಾರೀ ರೆಸ್ಪಾನ್ಸ್