ನವದೆಹಲಿ: Gold Price Today 14 ಆಗಸ್ಟ್ 2020: ಕಳೆದ ಕೆಲ ವಾರಗಳಿಂದ ಗಗನಮುಖಿಯಾಗಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯತ್ತ ಮುಖಮಾಡಿದೆ. ಈ ವಾರ ಎರಡು ದಿನಗಳ ಭಾರಿ ಕುಸಿತದ ಬಳಿಕ ಗುರುವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಏರಿಕೆಯಾಗಿದೆ.  10 ಗ್ರಾಮ್ ಚಿನ್ನದ ಬೆಲೆ 56,000 ಗಡಿ ದಾಟಿದ ಬಳಿಕ ಸದ್ಯ 52,000 ಹತ್ತಿರಕ್ಕೆ ಬಂದು ತಲುಪಿವೆ.  ದೇಸಿಯ ಮಾರುಕಟ್ಟೆಯಲ್ಲಿ ಸತತ ಏರಿಕೆಯ ಬಳಿಕ ಇದೀಗ ಚಿನ್ನದ ಬೆಲೆ ಇಳಿಕೆಯತ್ತ ಮುಖಮಾಡಿವೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ದರದಲ್ಲಿ ಇಳಿಕೆಯನ್ನುbbbbb ಗಮನಿಸಲಾಗಿದ. ಆದರೆ ಚಿನ್ನದ ಬೆಲೆಯಲ್ಲಿ ಮುಂದೆಯೂ ಕೂಡ ಇಳಿಕೆಯಾಗಲಿದೆಯೋ ಅಥವಾ ಏರಿಕೆಯಾಗಲಿದೆ? ಎಂಬ ಪ್ರಶ್ನೆ ಇದೀಗ ಹಲವರನ್ನು ಕಾಡುತ್ತಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತದ ಹಂತ ಮುಂದುವರೆದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಮತ್ತೊಮ್ಮೆ, ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟದ ಏರಿಕೆಯನ್ನು ಗಮನಿಸಲಾಗಿದೆ. ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನವು 10 ಗ್ರಾಂಗೆ 11 ರೂ.ನಿಂದ ಚೇತರಿಕೆ ಕಂಡು ರೂ. 53,132ಕ್ಕೆ ತಲುಪಿದೆ. ಇನ್ನೊಂದೆಡೆ  ಬೆಳ್ಳಿ ಬೆಲೆಯೂ ಸಹ 1,554 ರೂ.ಏರಿಕೆ ಕಂಡು 68,349 ರೂ.ಗೆ ತಲುಪಿದೆ. ಕಳೆದ ಅವಧಿಯಲ್ಲಿ ಈ ಬೆಲೆ ರೂ.66, 795 ರಷ್ಟಿತ್ತು.


ಕಡಿಮೆ ಅವಧಿಗೆ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಲಿದೆ
ಈ ಕುರಿತು ಹೇಳಿಕೆ ನೀಡಿರುವ ತಜ್ಞರು, ಮುಂಬರುವ ದಿನಗಳಲ್ಲಿ ಪ್ರತಿ 10 ಗ್ರಾಮ್   ಚಿನ್ನದ ಬೆಲೆ ರೂ.48,000 ವರೆಗೆ ಇಳಿಕೆಯಾಗುವ ಸಾಧ್ಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕಿಂತ ಕೆಳಗಿಳಿಯುವ ಸಾಧ್ಯತೆ ಈ ವರ್ಷದಲ್ಲಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.  ಇನ್ನೊಂದೆಡೆ ದೀಪಾವಳಿ ಹಾಗೂ ಧನತ್ರಯೋದಶಿಯವರೆಗೆ ಚಿನ್ನದ ದರ ಮತ್ತ್ತೆ ವೇಗ ಪಡೆದುಕೊಳ್ಳಲಿದ್ದು, ಇದು, ಪ್ರತಿ 10ಗ್ರಾಮ್ ಗೆ 60,000ಕ್ಕೆ ತಲುಪುವ ಸಾಧ್ಯತೆ ಇದ್ದು, ಬೆಳ್ಳಿ ಬೆಲೆಯೂ ಕೂಡ 80 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅತ್ಯಲ್ಪ ಅವಧಿಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ ಹಾಗೂ ದೀಪಾವಳಿಯವರೆಗೆ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ರೂ.65000ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.


ಇಳಿಕೆಯಾಗುವ ಸಾಧ್ಯತೆ ಏಕೆ?
ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿನ ಈ  ಕುಸಿತವು ಅಂತರರಾಷ್ಟ್ರೀಯ ಮಾರುಕಟ್ಟೆ ಅದರಲ್ಲೂ ವಿಶೇಷವಾಗಿ ಅಮೆರಿಕನ್ ಮಾರುಕಟ್ಟೆಯಲ್ಲಿನ ಕುಸಿತದ ಕಾರಣ ಸಂಭವಿಸಿದೆ. ಜಗತ್ತಿನಲ್ಲಿ ಬಿಕ್ಕಟ್ಟು ಉಂಟಾದಾಗಲೆಲ್ಲಾ ಹೂಡಿಕೆದಾರರು ಚಿನ್ನವನ್ನು ನಂಬುತ್ತಾರೆ. 1970 ರ ದಶಕದ ಆರ್ಥಿಕ ಹಿಂಜರಿತದ ಸಮಯದಲ್ಲಿ ಇದೇ ರೀತಿ ನಡೆದಿತ್ತು 2008 ರ ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಕೂಡ ಈ ಟ್ರೆಂಡ್ ಗಮನಿಸಲಾಗಿತ್ತು.  80 ರ ದಶಕದಲ್ಲಿಯೂ ಕೂಡ ಚಿನ್ನದ ಬೆಲೆ ಏಳು ಪಟ್ಟು ಹೆಚ್ಚಾಗಿದೆ ಆದರೆ ನಂತರ ಅದು ಭಾರಿ ಕುಸಿತ ಕಂಡಿದೆ. 2008 ರ ಜಾಗತಿಕ ಬಿಕ್ಕಟ್ಟಿನ ನಂತರ, ಯುಎಸ್ ಮಾರುಕಟ್ಟೆಯಲ್ಲಿ ಚಿನ್ನವು 2011 ರಲ್ಲಿ 1900 ಡಾಲರ್ ಗಡಿ ದಾಟಿತ್ತು. ಆದರೆ, ಅದರ ನಂತರದ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿತ್ತು.


ದೀಪಾವಳಿ ಹೊತ್ತಿಗೆ ಮತ್ತೆ ಏರಿಕೆಯಾಗಲಿದೆ ಚಿನ್ನದ ಬೆಲೆ
ಈ ಕುರಿತು PNG ಜ್ಯುವೆಲ್ಲರ್ಸ್‌ನ ಸೌರಭ್ ಗಾಡಗೀಳ್ ಹೇಳುವ ಪ್ರಕಾರ, ದೀಪಾವಳಿಯವರೆಗೆ ಚಿನ್ನಬೆಲೆ  ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ. ಆದರೆ ಅದರ ಆಸುಪಾಸಿನಲ್ಲಿ ಚಿನ್ನದ ಬೆಲೆಯ ಏರಿಳಿತ ಮುಂದುವರೆಯಲಿದೆ.  ಈ ಬಾರಿಯ ದೀಪಾವಳಿ ಹಬ್ಬದ ವೇಳೆಗೆ ಬೆಲೆ ಪ್ರತಿ 10 ಗ್ರಾಮ್ ಗೆ 65 ಸಾವಿರ ರೂಪಾಯಿಗಳವರೆಗೆ ಹೋಗಬಹುದು. ವಾಮನಾ ಹರಿ ಪೀಠೆ ಜ್ಯುವೆಲರ್ಸ್ ನಿರ್ದೇಶಕಿ ಆದಿತ್ಯ ಪೀಠೆಯ ಪ್ರಕಾರ, ಚಿನ್ನದ ಬೆಲೆ ಇನ್ನೂ 10 ರಿಂದ 15% ರಷ್ಟು ಏರಿಕೆಯಾಗಬಹುದು. ಜನರು ಚಿನ್ನದ ಖರೀದಿಯಲ್ಲಿ ಬಲಿಷ್ ಆಗಿ ವರ್ತಿಸುತ್ತಿದ್ದಾರೆ.  ಉತ್ತಮವಾಗಿ ಶಾಪಿಂಗ್ ಮಾಡುತ್ತಿದ್ದಾರೆ. ಚಿನ್ನದ ಬೆಲೆ  50 ಸಾವಿರ ರೂಪಾಯಿಗಳಿಗಿಂತ ಹೆಚ್ಚಿಗೆ ತಲುಪಿರುವ ಕಾರಣ ಇದೀಗ ಜನರು ಚಿನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದರ ಅರ್ಥ ಚಿನ್ನದ ಬೆಲೆ ಏರಿಕೆಯ ಮೇಲಿನ ಮಟ್ಟ ದಾಟಿದೆ ಎಂದೇ ಅರ್ಥೈಸಲಾಗುತತ್ತಿದೆ ಎಂದಿದ್ದಾರೆ.