Gold Price Today: ಚಿನ್ನ ಖರೀದಿಸಲು ಬಯಸುವವರಿಗೊಂದು ಮಹತ್ವದ ಮಾಹಿತಿ, ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ
21-9-2020 ಅಂದರೆ ಸೋಮವಾರದಂದು ಚಿನ್ನದ ಬೆಲೆ (Gold Price Today) ಮಾರುಕಟ್ಟೆಯ ವಹಿವಾಟು ಆರಂಭವಾಗುತಲೇ ಭಾರಿ ಕುಸಿತ ಕಂಡಿದೆ. ಬೆಳಿಗ್ಗೆ 10.00 ರ ಸುಮಾರಿಗೆ ಚಿನ್ನವು ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ MCX) ನಲ್ಲಿ 10 ಗ್ರಾಂ.ಗೆ 51610.00 ರೂ.ಗೆ ವಹಿವಾಟು ನಡೆಸುತ್ತಿದ್ದು, ಸುಮಾರು 105.00 ರೂ. ಗಳ ಕುಸಿತ ದಾಖಲಿಸಿದೆ.
ನವದೆಹಲಿ: 21-9-2020 ಅಂದರೆ ಸೋಮವಾರದಂದು ಚಿನ್ನದ ಬೆಲೆ (Gold Price Today) ಮಾರುಕಟ್ಟೆಯ ವಹಿವಾಟು ಆರಂಭವಾಗುತಲೇ ಭಾರಿ ಕುಸಿತ ಕಂಡಿದೆ. ಬೆಳಿಗ್ಗೆ 10.00 ರ ಸುಮಾರಿಗೆ ಚಿನ್ನವು ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ MCX) ನಲ್ಲಿ 10 ಗ್ರಾಂ.ಗೆ 51610.00 ರೂ.ಗೆ ವಹಿವಾಟು ನಡೆಸುತ್ತಿದ್ದು, ಸುಮಾರು 105.00 ರೂ. ಗಳ ಕುಸಿತ ದಾಖಲಿಸಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯೂ(Silver Price) ಕೂಡ ಕೆ.ಜಿಗೆ 214 ರೂ.ಗಳ ಕುಸಿತ ಕಂಡು 67663.00ರೂ.ಗಳಲ್ಲಿ ತನ್ನ ವಹಿವಾಟು ಮುಂದುವರೆಸಿದೆ.
ಇದನ್ನು ಓದಿ- PM Modi ಸರ್ಕಾರದ ಈ ಸ್ಕೀಮ್ ಮೂಲಕ ಅಗ್ಗದ ಚಿನ್ನ ಖರೀದಿಸಿ, ಉತ್ತಮ ಆದಾಯ ನಿಮ್ಮದಾಗಿಸಿಕೊಳ್ಳಿ
ಮಾರುಕಟ್ಟೆಯ ಏರಿಳಿತದ ನಡುವೆ ಚಿನ್ನದ ಹೂಡಿಕೆ ವೇಗ ಪಡೆದುಕೊಳ್ಳುತ್ತಿದೆ. ಚಿನ್ನದ ಇಟಿಎಫ್ ಬಾಂಡ್ ಗಳ ಮೂಲಕ ಚಿನ್ನದ ಹೂಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ತಜ್ಞ ಕೋಟಕ್ ಸೆಕ್ಯುರಿಟೀಸ್ ರವೀಂದ್ರ ರೈ ಅವರ ಪ್ರಕಾರ, ಮುಂಬರುವ ಸಮಯದಲ್ಲಿ ಹೂಡಿಕೆದಾರರು ಚಿನ್ನದ ಇಟಿಎಫ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಲಿದ್ದಾರೆ. ಇದಕ್ಕೂ ಮೊದಲು ಹೂಡಿಕೆದಾರರು ಭೌತಿಕ ಚಿನ್ನದಲ್ಲಿ ಮಾತ್ರ ಹೂಡಿಕೆ ಮಾಡಲು ಆದ್ಯತೆ ನೀಡುತ್ತಿದ್ದರು. ಆದರೆ ಈಗ ಚಿನ್ನದ ಇಟಿಎಫ್‌ಗಳು ಚಿನ್ನದಲ್ಲಿ ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿವೆ. ಅದರಲ್ಲಿ ಹೂಡಿಕೆ ಮಾಡುವುದು ಮತ್ತು ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಕಳೆದ ಎರಡು ವರ್ಷಗಳಲ್ಲಿ ಚಿನ್ನದ ಇಟಿಎಫ್‌ಗಳಲ್ಲಿನ ಹೂಡಿಕೆ ಹೆಚ್ಚಾಗಿದೆ. ಜನರು ಈಗ ತಮ್ಮ ಬಂಡವಾಳದ ಶೇಕಡಾ 10 ರಿಂದ 15 ರಷ್ಟು ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಗೋಲ್ಡ್ ಇಟಿಎಫ್‌ನ ಹೆಚ್ಚುತ್ತಿರುವ ಕ್ರೇಜ್, ನೀವು ಹೇಗೆ ಹೂಡಿಕೆ ಮಾಡಬಹುದು ಎಂದು ತಿಳಿಯಿರಿ
ಕ್ವಾಂಟಮ್ ಗೋಲ್ಡ್ ಇಟಿಎಫ್ ನ ಚಿರಾಗ್ ಮೆಹ್ತಾ ಹೇಳುವ ಪ್ರಕಾರ, ಚಿನ್ನದ ಇಟಿಎಫ್‌ಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿದೆ. ಅದರಲ್ಲಿ ಅರ್ಧ ಗ್ರಾಂ,ನಿಂದ ಹೂಡಿಕೆ ಪ್ರಾರಂಭಿಸಬಹುದು. ಇದರಲ್ಲಿ ಶುದ್ಧತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಭೌತಿಕ ಚಿನ್ನದಲ್ಲಿ ಶುದ್ಧತೆ ದೊಡ್ಡ ಸವಾಲಾಗಿದೆ. ಮುಂಬರುವ ಸಮಯದಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ. ಬಳಸಬೇಕಾದ ಚಿನ್ನವನ್ನು ಭೌತಿಕ ಚಿನ್ನವಾಗಿ ಇಡಬೇಕು ಎಂದು ಜನರು ಈಗ ಅರ್ಥಮಾಡಿಕೊಂಡಿದ್ದಾರೆ. ಜನರು ಹೂಡಿಕೆಗಾಗಿ ಚಿನ್ನದ ಇಟಿಎಫ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆಯ ಅಗತ್ಯವಿದೆ. ಡಿಮ್ಯಾಟ್ ಖಾತೆ ಇಲ್ಲದವರು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು
ಇದನ್ನು ಓದಿ- ದೀಪಾವಳಿ ಹಬ್ಬದವರೆಗೆ ಚಿನ್ನದ ಬೆಲೆ 60 ಸಾವಿರಕ್ಕೆ ತಲುಪುವ ಸಾಧ್ಯತೆ, ಹೂಡಿಕೆಯ ಮೊದಲು ಈ ವಿಷಯಗಳನ್ನು ಗಮನಿಸಿ
ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ನ ಚಿಂತನ್ ಹರಿಯಾ ಹೇಳುವ ಪ್ರಕಾರ, ಚಿನ್ನದ ಇಟಿಎಫ್‌ಗಳ ಒಂದು ಯುನಿಟ್ ಮೌಲ್ಯ 45 ರಿಂದ 50 ರೂ.ಗಳಷ್ಟು ಆಗಿರುತ್ತದೆ. ಈ ಆಧಾರದ ಮೇಲೆ, ನೀವು ಚಿನ್ನದ ಮೇಲೆ ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಚಿನ್ನದ ಭೌತಿಕ ವಿತರಣೆಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಚಿನ್ನದ ಸುರಕ್ಷತೆ ಮತ್ತು ಶುದ್ಧತೆಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಎನ್ನುತ್ತಾರೆ.
ಇದನ್ನು ಓದಿ- ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಬಯಸಿದರೆ, ಈ 5 ಸುಲಭ ಮಾರ್ಗಗಳನ್ನು ಅನುಸರಿಸಿ