ನವದೆಹಲಿ: ಇದೀಗ ಚಿನ್ನದ ಬೆಲೆಗಳು ಆಕಾಶವನ್ನು ಮುಟ್ಟುತ್ತಿವೆ. ಕಳೆದ ಕೆಲವು ದಿನಗಳಿಂದ ಚಿನ್ನದ (Gold) ಬೆಲೆಗಳು ನಿರಂತರವಾಗಿ ಏರುತ್ತಿವೆ. ಆದರೆ ಇಂದು ಚಿನ್ನದ ಬೆಲೆಗಳು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿವೆ.


COMMERCIAL BREAK
SCROLL TO CONTINUE READING

ಹತ್ತು ಗ್ರಾಂ ಚಿನ್ನದ ಮೌಲ್ಯ 54,560 ರೂ.
ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ (Gold Price) ಇಂದು 10 ಗ್ರಾಂಗೆ 550 ರೂ.ಗಳಷ್ಟು ಏರಿಕೆ ಕಂಡು 54,560 ರೂ.ಗೆ ತಲುಪಿದೆ. ಎಂಸಿಎಕ್ಸ್ ಇಂದು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಬೆಳ್ಳಿ 6 ಶೇಕಡಾ ವೇಗವಾಗಿ ಪ್ರತಿ ಕೆಜಿಗೆ 69,999 ರೂ. ದಾಟಿದೆ.


ನಿಮ್ಮ ಬಳಿ‌ ಸರ್ಕಾರಕ್ಕೆ ಗೊತ್ತಿಲ್ಲದ ಚಿನ್ನ ಇದ್ದರೆ ಬೀಳಲಿದೆ ತೆರಿಗೆ ಅಥವಾ ದಂಡ!


ವಿದೇಶಿ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ ಔನ್ಸ್‌ಗೆ $ 2000 ದಾಟಿದೆ ಎಂದು ತಜ್ಞರು ಹೇಳುತ್ತಾರೆ. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 30 ಡಾಲರ್‌ಗಳ ಜಿಗಿತವಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ಶೇಕಡಾ 7 ರಷ್ಟು ಏರಿಕೆಯಾಗಿದೆ.


ಯುಎಸ್ ಡಾಲರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ದುರ್ಬಲಗೊಳ್ಳುವುದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ ಚಿನ್ನದ ಮತ್ತು ಬೆಳ್ಳಿಯನ್ನು ಮಾರುಕಟ್ಟೆಯ ಏರಿಳಿತದ ನಡುವೆ ಉತ್ತಮ ಮತ್ತು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.