Good News: ಇ-ಸ್ಕೂಟರ್ ಖರೀದಿಸುವವರಿಗೆ ಸರ್ಕಾರದಿಂದ 40 ಸಾವಿರ ರೂ. ಸಹಾಯಧನ!
ಕೌಶಲರಹಿತ ಕಾರ್ಮಿಕರಿಗೆ ನೀಡುವ ಮಾಸಿಕ ವೇತನವನ್ನು 11,450 ರೂ.ಗೆ, ಅರೆಕೌಶಲ ಕಾರ್ಮಿಕರಿಗೆ 12,446 ರೂ. ಹಾಗೂ ಕೃಷಿ ಕಾರ್ಮಿಕರಿಗೆ 9,160 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ.
ನವದೆಹಲಿ: ಇ-ಸ್ಕೂಟರ್ ಖರೀದಿಸುವ ಕಾರ್ಮಿಕರಿಗೆ ಮಧ್ಯಪ್ರದೇಶ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಇ-ಸ್ಕೂಟರ್ ಖರೀದಿಸುವ ಕಾರ್ಮಿಕರಿಗೆ 40 ಸಾವಿರ ರೂ. ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಮೋಹನ್ ಯಾದವ್ ಘೋಷಿಸಿದ್ದಾರೆ. ಗ್ವಾಲಿಯರ್ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಮುನ್ನ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳ ಕುರಿತು ಮಾಹಿತಿ ನೀಡಿದ ಮೋಹನ್ ಯಾದವ್, ʼಮಧ್ಯಪ್ರದೇಶದಲ್ಲಿ ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ನೀಡುವ ಪರಿಹಾರವನ್ನು 1 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಏರಿಕೆ ಮಾಡಿದ್ದೇವೆ. ಅಂಗವೈಕಲ್ಯಕ್ಕೀಡಾಗುವ ಕಾರ್ಮಿಕರಿಗೆ ನೀಡುವ ಪರಿಹಾರವನ್ನೂ 4 ಲಕ್ಷ ರೂ.ಗೆ ಏರಿಕೆ ಮಾಡಿದ್ದೇವೆ. ವಿದ್ಯುತ್ ಚಾಲಿತ ಸ್ಕೂಟರ್ ಖರೀದಿಸುವವರಿಗೆ 40 ಸಾವಿರ ರೂ. ಸಹಾಯಧನ ನೀಡುತ್ತೇವೆʼ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ನಿರ್ಮಿತ ಅಗ್ನಿ-5 ಕ್ಷಿಪಣಿ 'ಮಿಷನ್ ದಿವ್ಯಾಸ್ತ್ರ' ಮೊದಲ ಪ್ರಾಯೋಗಿಕ ಪರೀಕ್ಷೆ ಯಶಸ್ವಿ : ಪ್ರಧಾನಿ ಮೋದಿ
ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ಮಾಸಿಕ ವೇತನವನ್ನೂ ಜಾಸ್ತಿ ಮಾಡಲಾಗಿದೆ. ಕೌಶಲರಹಿತ ಕಾರ್ಮಿಕರಿಗೆ ನೀಡುವ ಮಾಸಿಕ ವೇತನವನ್ನು 11,450 ರೂ.ಗೆ, ಅರೆಕೌಶಲ ಕಾರ್ಮಿಕರಿಗೆ 12,446 ರೂ. ಹಾಗೂ ಕೃಷಿ ಕಾರ್ಮಿಕರಿಗೆ 9,160 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮೋಹನ್ ಯಾದವ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿಎಂ ಆದ ಬಳಿಕ ಅವರು ಹಲವಾರು ಜನಪರ ಘೋಷಣೆಗಳನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಟಾಟಾ ನೆಕ್ಸಾನ್‌ನ ಎಲೆಕ್ಟ್ರಿಕ್ ಕಾರುಗಳಿಗೆ ರಿಯಾಯಿತಿ ಘೋಷಿಸಿದ್ದರು.
ಇದನ್ನೂ ಓದಿ: CAA ಜಾರಿಗೊಳಿಸಿದ Modi Government, ಏನಿದು ಸಿಎಎ, ಇಲ್ಲಿದೆ ಅದರ ಕಂಪ್ಲೇಟ್ ಮಾಹಿತಿ
ನೆಕ್ಸಾನ್ ಇವಿ ಫೇಸ್ ಲಿಫ್ಟ್‌ನ ಫಿಯರ್‌ಲೆಸ್ MR, ಎಂಪವರ್ಡ್ +LR ಮತ್ತು ಎಂಪವರ್ಡ್ MR ವೇರಿಯೆಂಟ್‌ಗಳ ಮೇಲೆ 50 ಸಾವಿರ ರೂ.ಗಳವರೆಗೆ ರಿಯಾಯಿತಿಯಾದರೆ, ಫಿಯರ್‌ಲೆಸ್ +MR, ಫಿಯರ್‌ಲೆಸ್ + SMR, ಫಿಯರ್‌ಲೆಸ್ + LR ರೂಪಾಂತರಗಳು 65 ಸಾವಿರ ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ. ಫಿಯರ್ಲೆಸ್ LR ರೂಪಾಂತರವು 85 ಸಾವಿರ ರೂ.ಗಳವರೆಗೆ ರಿಯಾಯಿತಿ ಪಡೆದರೆ, ಟಾಪ್-ಸ್ಪೆಕ್ ಫಿಯರ್ಲೆಸ್ + SLR 1 ಲಕ್ಷ ರೂ.ಗಳವರೆಗೆ ರಿಯಾಯಿತಿ ಮತ್ತು ಪ್ರಯೋಜನ ಹೊಂದಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.