CAA ಜಾರಿಗೊಳಿಸಿದ Modi Government, ಏನಿದು ಸಿಎಎ, ಇಲ್ಲಿದೆ ಅದರ ಕಂಪ್ಲೇಟ್ ಮಾಹಿತಿ

Citizenship Amendment Act 2024: ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಆಕ್ಟ್ ಅಂದರೆ ನಾಗರಿಕ ತಿದ್ದುಪಡಿ ಮಸೂದೆಗೆ (CAA) ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಕೇಂದ್ರ ಗೃಹ ಸಚಿವಾಲಯವು (Union Home Ministry) ಸಿಎಎ ಕುರಿತಾದ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಸಾಕಷ್ಟು ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. (National News In Kannada)

Written by - Nitin Tabib | Last Updated : Mar 11, 2024, 08:06 PM IST
  • ಪೌರತ್ವ ಹಕ್ಕುಗಳು ಅವರ ಭಾಷೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತಿಗೆ ರಕ್ಷಣೆ ಒದಗಿಸಲಿದೆ ಎಂದು ಸರ್ಕಾರ ಹೇಳಿದೆ.
  • ಇದರೊಂದಿಗೆ ವ್ಯಾಪಾರ, ಆರ್ಥಿಕ, ಮುಕ್ತ ಸಂಚಾರ,
  • ಆಸ್ತಿ ಖರೀದಿಯಂತಹ ಹಕ್ಕುಗಳನ್ನು ಸಹ ಈ ಕಾನೂನು ಖಾತ್ರಿಪಡಿಸಲಿದೆ.
CAA ಜಾರಿಗೊಳಿಸಿದ Modi Government, ಏನಿದು ಸಿಎಎ, ಇಲ್ಲಿದೆ ಅದರ ಕಂಪ್ಲೇಟ್ ಮಾಹಿತಿ title=

CAA Complete Detail: ಭಾರತದ ಇತಿಹಾಸದಲ್ಲಿ ಈ ದಿನ ಒಂದು ಅವಿಸ್ಮರಣೀಯ ದಿನವಾಗಿ ಉಳಿಯಲಿದೆ. ಇದು ಭವಿಷ್ಯದ ಪೀಳಿಗೆ ಈ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿರಿಸಿಕೊಳ್ಳುವ ದಿನ ಇದಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (CAA) ಸೋಮವಾರದಿಂದ ಜಾರಿಗೆ ಬಂದಿದೆ. ಗೃಹ ಸಚಿವಾಲಯವು ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಹಾಗಾದರೆ ಏನಿದು ಪೌದ್ರತ್ವ ತಿದ್ದುಪಡಿ ಕಾಯಿದೆ, ಇದರಿಂದ ಏನು ಲಾಭ ತಿಳಿದುಕೊಳ್ಳೋಣ ಬನ್ನಿ, (National News In Kannada)

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?
11 ಡಿಸೆಂಬರ್ 2019 ರಂದು, ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್ತು ಅಂಗೀಕಾರ ನೀಡಿದೆ. ಆದರೆ, ಆ ಕುರಿತು ಅಧಿಸೂಚನೆಯನ್ನು ಹೊರಡಿಸಿರಲಿಲ್ಲ. ಇದರಲ್ಲಿ 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 2014ರ ಡಿಸೆಂಬರ್‌ಗಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೆ ಬೇಸತ್ತು ಭಾರತಕ್ಕೆ ಶರಣಾರ್ಥಿಗಳಾಗಿ ಆಗಮಿಸಿದ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಈ ಕಾನೂನಿನಲ್ಲಿ ಮುಸ್ಲಿಮರನ್ನು ಸೇರಿಸಲಾಗಿಲ್ಲ.

6 ವರ್ಷಗಳಲ್ಲಿ ಭಾರತೀಯ ಪೌರತ್ವ ನೀಡಲಾಗುವುದು
ಮೇಲೆ ನಮೂಡಿಸಲಾಗಿರುವ ದೇಶಗಳಿಂದ ಭಾರತಕ್ಕ ಆಗಮಿಸಿದ ಈ ನಿರಾಶ್ರಿತರಿಗೆ 6 ವರ್ಷಗಳೊಳಗೆ ಭಾರತೀಯ ಪೌರತ್ವ ನೀಡಲಾಗುವುದು. ತಿದ್ದುಪಡಿಯ ಮೂಲಕ, ಈ ನಿರಾಶ್ರಿತರ ಸ್ವಾಭಾವಿಕತೆಯ ನಿವಾಸದ ಅಗತ್ಯವನ್ನು 11 ವರ್ಷಗಳಿಂದ ಐದು ವರ್ಷಗಳಿಗೆ ಕಡಿಮೆ ಮಾಡಲಾಗಿದೆ. ಮಹತ್ವದ ವಿಷಯ ಎಂದರೆ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳುವ ಕಾನೂನಲ್ಲ... ಬದಲಿಗೆ ಅದು ಪೌರತ್ವವನ್ನು ನೀಡುವ ಕಾನೂನು ಆಗಿದೆ.

ಮೊದಲ ಬಾರಿಗೆ ಬಿಲ್ ಮಂಡಿಸಲಾಗಿತ್ತು?
ಮೋದಿ ಸರ್ಕಾರವು (Modi Government) 2016 ರಲ್ಲಿ ಲೋಕಸಭೆಯಲ್ಲಿ ಮೊದಲ ಬಾರಿಗೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಅಲ್ಲಿಂದ ಅದು ಅನುಮೋದನೆಯನ್ನು ಪಡೆದುಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಅತಂತ್ರ ಸ್ಥಿತಿಯಲ್ಲಿ ತಲುಪಿತ್ತು. ಬಳಿಕ  ಅದನ್ನು ಸಂಸದೀಯ ಸಮಿತಿಗೆ (Cabinet Committee) ಕಳುಹಿಸಲಾಯಿತು. ಅಷ್ಟೊತ್ತಿಗೆ 2019ರ ಲೋಕಸಭೆ ಚುನಾವಣೆ ಬಂದ ಕಾರಣ. ಚುನಾವಣೆಯಲ್ಲಿ ಮೋದಿ ಸರ್ಕಾರ ಹಿಂದಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಇದನ್ನು ಮತ್ತೆ ಡಿಸೆಂಬರ್ 2019 ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಅಲ್ಲಿಂದ ಅಂಗೀಕಾರವಾದ ಬಳಿಕ ರಾಜ್ಯಸಭೆಯಲ್ಲೂ ಅದನ್ನು ಅಂಗೀಕರಿಸಲಾಯಿತು. ಜನವರಿ 10, 2020 ರಂದು ರಾಷ್ಟ್ರಪತಿಗಳ ಆಂಕಿತ ಕೂಡ ಅದಕ್ಕೆ ಲಭಿಸಿತು. ಆದರೆ ಇದಾದ ಬಳಿಕ ಕೋರೋನಾ ಮಹಾಮಾರಿಯ ಅಬ್ಬರ ಆರಂಭಗೊಂಡಿತು.

ಈ ಕಾಯ್ದೆ ಅಡಿ ನಾಗರಿಕತೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಸಿಎಎ ಜಾರಿಗೊಳಿಸಲು ಕೇಂದ್ರ ಸರ್ಕಾರ ಪೋರ್ಟಲ್ ಆರಂಭಿಸಿದೆ.
ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಮತ್ತು ಪೌರತ್ವ ನೀಡುವ ಪ್ರಕ್ರಿಯೆಯು ಆನ್‌ಲೈನ್ ಮುಖಾಂತರ ನಡೆಯಲಿದೆ
ಅರ್ಜಿದಾರರು ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ ವರ್ಷವನ್ನು ಅಲ್ಲಿ ನಮೂಡಿಸಬೇಕು. 
ಮೂಲಗಳ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವವರಿಗೆ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ ಎನ್ನಲಾಗಿದೆ.
ಬಳಿಕ ಗೃಹ ಸಚಿವಾಲಯವು ಅರ್ಜಿಯನ್ನು ಪರಿಶೀಲಿಸಿದ ನಂತರ ಅವರಿಗೆ ಪೌರತ್ವವನ್ನು ನೀಡುತ್ತದೆ.

ಸಿಎಎ ವಿವಾದಕ್ಕೆ ಸಿಲುಕಲು ಕಾರಣ ಏನು? 
ಈ ಕಾಯಿದೆಗೆ ವಿಪಕ್ಷ ನಾಯಕರು ಸೇರಿದಂತೆ ಕೆಲ ಮುಸ್ಲಿಂ ಪಂಗಡದವರಿಂದ ವಿರೋಧ ವ್ಯಕ್ತವಾಗಿದೆ. ಈ ಕಾಯಿದೆಯ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲಾಗುತ್ತದೆ ಮತ್ತು ಇದು ಸಂವಿಧಾನದ 14 ನೇ ವಿಧಿ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೂರು ದೇಶಗಳ ಮುಸ್ಲಿಮರಿಗೆ ಪೌರತ್ವದ ಬೇಡಿಕೆಯೂ ಇದೆ.

ಇದುವರೆಗೆ ಅವರಿಗೆ ಪೌರತ್ವ ಹೇಗೆ ಸಿಗುತ್ತಿತ್ತು?
ಯಾರಾದರೂ ಭಾರತದ ಪೌರತ್ವವನ್ನು ಬಯಸಿದರೆ, ಅವರು ಕನಿಷ್ಠ 11 ವರ್ಷಗಳ ಕಾಲ ಭಾರತದಲ್ಲಿ ವಾಸಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಹೊಸ ಕಾನೂನಿನ ಪ್ರಕಾರ, ಮೂರು ದೇಶಗಳಿಂದ ಬರುವ ಮುಸ್ಲಿಮೇತರರಿಗೆ 11 ವರ್ಷಗಳ ಬದಲಿಗೆ 6 ವರ್ಷಗಳ ಒಳಗೆ ಪೌರತ್ವ ನೀಡಲಾಗುವುದು ಎನ್ನಲಾಗಿದೆ. ಆದರೆ ಈ ದೇಶಗಳನ್ನು ಹೊರತುಪಡಿಸಿ ಬೇರೆ ದೇಶಗಳಿಂದ ಬರುವ ಜನರು ಭಾರತದಲ್ಲಿ 11 ವರ್ಷಗಳ ಕಾಲಾವಧಿ ಪೂರ್ಣಗೊಳಿಸಬೇಕಾಗಲಿದೆ, ಅವರು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೇರಿದವರಾಗಿರಬಹು.

ಇದನ್ನೂ ಓದಿ-NDA 400 ಅಂಕ ತಲುಪುವುದು ಕಷ್ಟಸಾಧ್ಯ, ಪ್ರತಿಪಕ್ಷಗಳಿಗೆ ಎಷ್ಟು ಸ್ಥಾನ? ಇಲ್ಲಿದೆ ಶಾಕಿಂಗ್ ಸಮೀಕ್ಷೆ

ಈ ಕಾನೂನು ಜಾರಿಗೆ ಬಂದ ಬಳಿಕ ಎನಾಗಲಿದೆ
ಪೌರತ್ವ ಮತ್ತು ವಲಸೆ ಬಂದವರ ಪುನರ್ವಸತಿಗೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಎಂದು ಮೋದಿ ಸರ್ಕಾರ ಹೇಳಿದೆ. ದಶಕಗಳಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳ ಎದುರಿಸುತ್ತಿರುವ ಮುಸ್ಲಿಮೇತರರಿಗೆ ಗೌರವಯುತ ಜೀವನವನ್ನು ಒದಗಿಸುವುದು ಇದರ ಮತ್ತೊಂದು ಉದ್ದೇಶವಾಗಿದೆ.

ಇದನ್ನೂ ಓದಿ-CAA: ಮೋದಿ ಸರ್ಕಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ‘ಲೋಕ’ ಚುನಾವಣೆಗೂ ಮುನ್ನ ಬ್ರಹ್ಮಾಸ್ತ್ರ

ಪೌರತ್ವ ಹಕ್ಕುಗಳು ಅವರ ಭಾಷೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತಿಗೆ ರಕ್ಷಣೆ ಒದಗಿಸಲಿದೆ ಎಂದು ಸರ್ಕಾರ ಹೇಳಿದೆ. ಇದರೊಂದಿಗೆ ವ್ಯಾಪಾರ, ಆರ್ಥಿಕ, ಮುಕ್ತ ಸಂಚಾರ, ಆಸ್ತಿ ಖರೀದಿಯಂತಹ ಹಕ್ಕುಗಳನ್ನು  ಸಹ ಈ ಕಾನೂನು ಖಾತ್ರಿಪಡಿಸಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News