ನವದೆಹಲಿ: ನೀವು ಫ್ಲೈಟ್ ಬುಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ವಿಮಾನ ಲಭ್ಯವಿಲ್ಲ ಎಂದು ಪರದಾಡುತ್ತಿದ್ದರೆ ಚಿಂತೆ ಬಿಡಿ. ಈಗ ವಿಮಾನದ ಕೊರತೆ ಹೋಗಿದೆ. ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ತಮ್ಮ ದೇಶೀಯ ವಿಮಾನಗಳ ಸಾಮರ್ಥ್ಯದ 60% ಅನ್ನು ಬಳಸಬಹುದು ಎಂದು ತಿಳಿಸಿದೆ. ಕರೋನಾ ಬಿಕ್ಕಟ್ಟಿನ ದೃಷ್ಟಿಯಿಂದ ಇಲ್ಲಿಯವರೆಗೆ ವಿಮಾನಯಾನವು ತನ್ನ ಸಂಪೂರ್ಣ ಸಾಮರ್ಥ್ಯದ 45% ವಿಮಾನಗಳನ್ನು ಮಾತ್ರ ಅನುಮತಿಸಲಾಗಿತ್ತು.


COMMERCIAL BREAK
SCROLL TO CONTINUE READING

ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ಪ್ರಯಾಣಿಕರಿಗೆ ಪ್ರಯೋಜನ: 
ಒಂದೆಡೆ ಅನ್ಲಾಕ್ -4 (Unlock 4) ರ ಅಡಿಯಲ್ಲಿ ತೆಗೆದುಕೊಂಡ ವಿಮಾನಯಾನ ಸಚಿವಾಲಯದ ಈ ನಿರ್ಧಾರದಿಂದ ವಿಮಾನಯಾನ ಸಂಸ್ಥೆಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ ಅವರು ಹೊಸ ವಿಮಾನ ಪ್ರಯಾಣಿಕರನ್ನು ಪಡೆಯುತ್ತಾರೆ, ಅದು ಅವರ ವ್ಯವಹಾರವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ ಪ್ರಯಾಣಿಕರು ಸಹ ಈ ನಿರ್ಧಾರದಿಂದ ಪ್ರಯೋಜನ ಪಡೆಯುತ್ತಾರೆ. ಏಕೆಂದರೆ ಅವರಿಗೆ ಹೆಚ್ಚಿನ ವಿಮಾನ ಆಯ್ಕೆಗಳು ಸಿಗುತ್ತವೆ, ಬಹುಶಃ ಶುಲ್ಕವೂ ಸ್ವಲ್ಪ ಕಡಿಮೆಯಾಗುತ್ತದೆ. ಹಬ್ಬದ ಋತುಮಾನವು ಪ್ರಾರಂಭವಾಗಲಿದೆ. ಪ್ರಯಾಣಿಕರು ದೀಪಾವಳಿ ಮತ್ತು ದಸರಾಗಳಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ. ಇದು ವಿಮಾನಯಾನ ಸಂಸ್ಥೆಗಳ ಗಳಿಕೆಯನ್ನೂ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.


ಅನ್​ಲಾಕ್-4: ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್​ ಆರಂಭ


ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿತ್ತು:
ಪ್ರಸ್ತುತ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ದೇಶೀಯ ವಾಯು ಪ್ರಯಾಣಿಕರ ದೃಷ್ಟಿಯಿಂದ ವಿಮಾನಯಾನ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮೇ ತಿಂಗಳಲ್ಲಿ, ವಾಯು ಪ್ರಯಾಣಿಕರ ಸಂಖ್ಯೆ ಒಂದು ದಿನದಲ್ಲಿ ಕೇವಲ 40,000 ಆಗಿತ್ತು, ಅದು ಈಗ 1 ಲಕ್ಷವನ್ನು ಮೀರಿದೆ. ಇದರಿಂದಾಗಿ ದಿನನಿತ್ಯದ ವಿಮಾನಗಳ ಸಂಖ್ಯೆಯೂ ಮೇ ತಿಂಗಳಲ್ಲಿ 500 ರಿಂದ ಈಗ ಸುಮಾರು 1100 ಕ್ಕೆ ಏರಿದೆ.


ಮಾರ್ಚ್ 24 ರಂದು ಲಾಕ್ ಡೌನ್ (Lockdown) ಮಾಡಿದ ನಂತರ ಎಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ. ಇದರ ನಂತರ ಮೇ 25 ರಂದು ಮತ್ತೆ ವಿಮಾನಗಳಿಗೆ ಅನುಮತಿ ನೀಡಲಾಯಿತು. ಈ ದಿನ ದೇಶೀಯ ವಿಮಾನಗಳಲ್ಲಿ 30,550 ಜನರು ಪ್ರಯಾಣಿಸಿದರು. ಸೆಪ್ಟೆಂಬರ್ 1ರ ಹೊತ್ತಿಗೆ, ದೈನಂದಿನ ಪ್ರಯಾಣಿಕರ ಸಂಖ್ಯೆ 1,20,725ಕ್ಕೆ ಏರಿದೆ ಮತ್ತು ವಿಮಾನಗಳ ಸಂಖ್ಯೆಯೂ 1,121 ಕ್ಕೆ ಏರಿದೆ.