ನವದೆಹಲಿ: ವಿಮಾ ಕಾರ್ಯಕ್ರಮಗಳ ವಿಭಿನ್ನ ಪ್ಯಾಕೇಜ್ ಗಳ ಅಡಿ ಬರದ ಹಾಗೂ ದುಬಾರಿ ಚಿಕಿತ್ಸೆಯ ಅಗತ್ಯತೆ ಇರುವ ಆಯುಷ್ಮಾನ್ ಭಾರತ ಲಾಭಾರ್ಥಿಗಳಿಗೆ ರಾಷ್ಟ್ರೀಯ ಆರೋಗ್ಯ ನಿಧಿ(RAN) ಕಾರ್ಯಕ್ರಮದಲ್ಲಿ ಇನ್ಮುಂದೆ ಸುಮಾರು 15 ಲಕ್ಷ ರೂ.ಗಳ ವರೆಗೆ ಧನ ಸಹಾಯ ಲಬಿಸಲಿದೆ.


COMMERCIAL BREAK
SCROLL TO CONTINUE READING

ಆಯುಷ್ಮಾನ್ ಭಾರತ- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಲಾಭಾರ್ಥಿಗಳಾಗಿದ್ದರೂ ಕೂಡ ಪ್ರಾಣಕ್ಕೆ ಕುತ್ತು ತರುವ ರೋಗದಿಂದ ಬಳಲುತ್ತಿರುವ ರೋಗಿಗಳು ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ RAN ಯೋಜನೆಗಾಗಿ ನೂತನ ತಿದ್ದುಪಡಿ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.


ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಎಲ್ಲಾ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳು, ಎಲ್ಲಾ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು, ಖರ್ಚು ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ), ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉನ್ನತ ಸಂಸ್ಥೆಗಳಿಗೆ ಈ ಕುರಿತು ಪತ್ರ ಬರೆಯಲಾಗಿದೆ.


ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, "ವೈದ್ಯಕೀಯ ಸಮಾಲೋಚನೆಯಡಿಯಲ್ಲಿ ಸೂಚಿಸಲಾದ ಚಿಕಿತ್ಸೆಯು ಎಬಿ-ಪಿಎಂಜೆಎ ಅನುಮೋದಿಸಿದ ಯಾವುದೇ ಪಟ್ಟಿ ಮಾಡಲಾದ ಪ್ಯಾಕೇಜ್‌ಗಳ ಅಡಿಯಲ್ಲಿ ಬರದಿದ್ದರೆ, RAN ಯೋಜನೆಯಿಂದ ಎಬಿ-ಪಿಎಂಜೆಎ ಯೋಜನೆಯ ಫಲಾನುಭವಿಗಳಿಗೆ  ರೂ .15 ಲಕ್ಷದವರೆಗೆ ಹಣಕಾಸಿನ ನೆರವು ನೀಡಬಹುದು." ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


 ಇಂತಹ ಪರಿಸ್ಥಿತಿಯಲ್ಲಿ ಫಲಾನುಭವಿಗಳ ಆರೋಗ್ಯ ಸ್ಥಿತಿಯ ಕುರಿತು ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗಳಿಂದ ಅವರು ಎಬಿ-ಪಿಎಂಜೆಎವೈ ಯೊಜನೆಯ ಅಡಿ ಚಿಕಿತ್ಸೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಪ್ರಮಾಣೀರಿಸಲಾಗುವುದು ಎನ್ನಲಾಗಿದ್ದು, ರೋಗಿಗೆ RAN ಅಡಿ ಹಣಕಾಸಿನ ನೆರವು ನೀಡಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಅಖಿಲ ಭಾರತ ಆಯುರ್ವಿಜ್ಞಾನ ಸಂಸ್ಥೆ ಹಾಗೂ NHA ಆರೋಗ್ಯ ಸಚಿವಾಲಯಕ್ಕೆ ಈ ಕುರಿತು ಪತ್ರ ಬರೆದು AB-PMJAYE ಅಡಿ ವಂಚಿತವಾಗಿರುವ ಚಿಕಿತ್ಸೆ ಅಗತ್ಯವಿರುವ ರೋಗಿಗಳು RNA ಕಾರ್ಯಕ್ರಮದ ಅಡಿ ಆರ್ಥಿಕ ನೆರವು ಪಡೆಯಬಹುದು ಎಂದು ಸಲಹೆ ನೀಡಿದ್ದವು. ರಕ್ತ ಕ್ಯಾನ್ಸರ್, ಪಿತ್ತ ಜನಕಾಂಗ ಕಾಯಿಲೆ ಹಾಗೂ ಅಂಗಾಂಗ ಕಸಿ ಮುಂತಾದ ಪ್ರಕರಣಗಳು ಈ ಯೋಜನೆಯ ಅಡಿ ಪಟ್ಟಿ ಮಾಡಲಾದ ಸುಮಾರು 1393 ವೈದ್ಯಕೀಯ ಪ್ಯಾಕೇಜ್ ಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬುದರ ಮೇಲೆ ಆರೋಗ್ಯ ಸಚಿವಾಲಯದ ಗಮನ ಸೆಳೆದಿದ್ದವು.


ಇದಕ್ಕೂ ಮೊದಲು, ನವೆಂಬರ್ ನಲ್ಲಿ ಆರೋಗ್ಯ ಸಚಿವಾಲಯ ಅವರ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು ಹಾಗೂ PM-JAY ಅಡಿಯಲ್ಲಿ ಬರುವ 'ಕಾರ್ಯವಿಧಾನ'ದ ಅಡಿಯಲ್ಲಿ ಅಂಗಾಂಗ ಕಸಿಯನ್ನು ಶಾಮೀಲುಗೊಳಿಸಿ. ಪ್ರತಿ ವರ್ಷ ನೀಡಲಾಗುವ 5 ಲಕ್ಷ ರೂ.ಗಳ ಮಿತಿಯನ್ನು  ವಿಸ್ತರಿಸಿ ಅವಶ್ಯಕತೆ ಇರುವ ರೋಗಿಗಳು ಯೋಜನೆಯ ಲಾಭ ಪಡೆಯುವಂತೆ ಮಾಡಬೇಕು ಎಂದು ಹೇಳಿತ್ತು.