IndiGO: ಖಾಸಗಿ ವಲಯದ ವಿಮಾನಯಾನ ಕಂಪನಿ ಇಂಡಿಗೊ ತನ್ನ ರದ್ದಾದ ವಿಮಾನಗಳಲ್ಲಿನ ಎಲ್ಲಾ ಪ್ರಯಾಣಿಕರಿಗೆ ಜನವರಿ 31, 2021 ರೊಳಗೆ ಟಿಕೆಟ್ ಹಣವನ್ನು ಹಿಂದಿರುಗಿಸುವುದಾಗಿ ಘೋಷಿಸಿದೆ. ಕರೋನಾ ವೈರಸ್ (Coronavirus) ಹರಡುವುದನ್ನು ತಡೆಗಟ್ಟಲು ಘೋಷಿಸಲಾಗಿದ್ದ ಲಾಕ್ ಡೌನ್ ನಿಂದ ಈ ವರ್ಷ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ನಂತರ ರದ್ದಾದ ಟಿಕೆಟ್‌ಗಳಲ್ಲಿ ವಿಮಾನಯಾನ ಸಂಸ್ಥೆ 'ಕ್ರೆಡಿಟ್ ಶೆಲ್' ಅನ್ನು ರಚಿಸಿತ್ತು. ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಭವಿಷ್ಯದಲ್ಲಿ  ಪ್ರಯಾಣವನ್ನು ಕಾಯ್ದಿರಿಸಲು ಈ ಕ್ರೆಡಿಟ್ ಶೆಲ್ ಅನ್ನು ಬಳಸಬಹುದು ಎಂದು ಕಂಪನಿ ಹೇಳಿತ್ತು. ಆದರೆ ಸೋಮವಾರ ಈ ಕುರಿತು ಪ್ರಕಟಣೆ ನೀಡಿರುವ ಕಂಪನಿ ಸುಮಾರು 1,000 ಕೋಟಿ ರೂ.ಗಳ ಹಣ ಮರುಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದೆ. ಇದು ಪ್ರಯಾಣಿಕರಿಗೆ ಮರುಪಾವತಿಸಲಾಗುವ ಮೊತ್ತದ ಶೇ.90ರಷ್ಟು ಇದೆ ಎಂದು ಕಂಪನಿ ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ಹೆಚ್ಚಿನ ಪ್ರಯಾಣಿಕರಿಗೆ Flight ನಲ್ಲಿ ಪ್ರಯಾಣಿಸಲು ಅನುಮತಿ ಇಲ್ಲ, ಇಲ್ಲಿದೆ ಸರ್ಕಾರದ ತೀರ್ಮಾನ


ಜನವರಿ 31, 2021 ರೊಳಗೆ ಕ್ರೆಡಿಟ್ ಶೆಲ್ ಗಳ ಮರುಪಾವತಿ
"ಕೊರೊನಾ ಪ್ರಕೋಪದ ಕಾರಣ ಘೋಶಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆ ಮಾರ್ಚ್ ಅಂತ್ಯದಲ್ಲಿ ವಿಮಾನಯಾನ ಕಾರ್ಯಾಚರಣೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು" ಎಂದು ಇಂಡಿಗೋ (IndiGo) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋನೋಜಾಯ್ ದತ್ತಾ ತಿಳಿದ್ದಾರೆ. "ಇದರಿಂದ ನಮ್ಮ ಕಂಪನಿಗೆ ಹಣದ ಹರಿವು ನಿಂತುಹೋಗಿತ್ತು. ಈ ಕಾರಣದಿಂದ ನಾವು ಪ್ರಯಾಣಿಕಗೆ ಅವರ ಹಣ ಹಿಂದಿರುಗಿಸಿರಲಿಲ್ಲ. ಆದರೆ, ಇದೀಗ ಹಣದ ಹರಿವು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದು, ವಿಮಾನಯಾನದ ಬೇಡಿಕೆ ಕೂಡ ನಿಧಾನಕ್ಕೆ ಸುಧಾರಿಸುತ್ತಿದೆ. ಹೀಗಾಗಿ ರದ್ದಾದ ಟಿಕೆಟ್ ಪ್ರಯಾಣಿಕರಿಗೆ ಅವರ ಹಣ ಹಿಂದಿರುಗಿಸುವುದು ನಮ್ಮ ಮೊದಲ ಆದ್ಯತೆ ಆಗಿದೆ. ಜನವರು 31, 2021 ರೊಳಗೆ ನಾವು ಶೇ.100 ರಷ್ಟು ಕ್ರೆಡಿಟ್ ಶೆಲ್ ಗಳ ಹಣ ಮರುಪಾವತಿ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.


ಇದನ್ನು ಓದಿ-ಇಂಡಿಗೊ ವಿಮಾನ ದರದಲ್ಲಿ 2020 ರ ಡಿಸೆಂಬರ್ ವರೆಗೆ ಶೇ 25 ರಷ್ಟು ರಿಯಾಯಿತಿ ಘೋಷಣೆ....!


ಎರಡು ತಿಂಗಳ ಕಾಲ ದೇಸೀಯ ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು
ಲಾಕ್ ಡೌನ್ ಕಾಲದಲ್ಲಿ ಸ್ಥಗಿತಗೊಂಡಿದ್ದ ದೇಸೀಯ ವಿಮಾನಯಾನ ಸೇವೆಗಳು ಸುಮಾರು 2 ತಿಂಗಳ ನಂತರ ಮೇ 25ಕ್ಕೆ ಪುನರಾರಂಭಗೊಂಡಿತ್ತು. ಕರೋನವೈರಸ್ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳ ಕಾಲ ವಿಮಾನಗಳು ಸ್ಥಗಿತಗೊಂಡಿವೆ. ಆದಾಗ್ಯೂ, ಪ್ರಸ್ತುತ ದೇಶದಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 23 ರಿಂದ ಅಂತರರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡಿವೆ. ಆದರೆ, ವಿಮಾನಯಾನ ಸಂಸ್ಥೆಗಳಿಗೆ ವಿಶೇಷ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಮೇ ನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದದಡಿಯಲ್ಲಿ ನಡೆಸಲು ಅನುಮತಿ ನೀಡಲಾಗಿದೆ.