ಪಡಿತರ ಚೀಟಿದಾರರಿಗೆ ಸಿಹಿಸುದ್ದಿ..! ಸರ್ಕಾರವು ಇದೇ ಮೊದಲ ಬಾರಿಗೆ ನೀಡುತ್ತಿದೆ ಈ ಅದ್ಭುತ ಸೌಲಭ್ಯ, ಪ್ರತಿಯೊಬ್ಬರಿಗೂ ಸಿಗಲಿದೆ ಪ್ರಯೋಜನ
ಪಡಿತರ ಚೀಟಿದಾರರಿಗೆ ಮೊದಲ ಬಾರಿಗೆ ಸರ್ಕಾರವು ಅನೇಕ ದೊಡ್ಡ ಸೌಲಭ್ಯಗಳನ್ನು ನೀಡುತ್ತಿದೆ. ಈಗ ಪಡಿತರ ಚೀಟಿ ಸಂಬಂಧಿತ ಸೇವೆಗಳು ದೇಶಾದ್ಯಂತ 3.7 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ.
ನವದೆಹಲಿ : ಪಡಿತರ ಚೀಟಿದಾರರಿಗೆ (Ration card holders) ಮೊದಲ ಬಾರಿಗೆ ಸರ್ಕಾರವು ಅನೇಕ ದೊಡ್ಡ ಸೌಲಭ್ಯಗಳನ್ನು ನೀಡುತ್ತಿದೆ. ಈಗ ಪಡಿತರ ಚೀಟಿ ಸಂಬಂಧಿತ ಸೇವೆಗಳು ದೇಶಾದ್ಯಂತ 3.7 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಲಭ್ಯವಿರುತ್ತವೆ. ಈ ಸೇವೆಗಳಲ್ಲಿ ಹೊಸ ಪಡಿತರ ಚೀಟಿಗಾಗಿ (Ration card) ಅರ್ಜಿ ಸಲ್ಲಿಸುವುದು, ಆಧಾರ್‌ನೊಂದಿಗೆ ಅಪ್ಡೇಟ್ ಮತ್ತು ಲಿಂಕ್ ಮಾಡುವುದು ಸೇರಿವೆ. ಸರ್ಕಾರದ ಈ ಕ್ರಮದಿಂದ ದೇಶಾದ್ಯಂತ 23.64 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಅನುಕೂಲವಾಗಲಿದೆ.
ಪಡಿತರ ಚೀಟಿದಾರರಿಗೆ ಸಿಗಲಿದೆ ಈ ಸೌಲಭ್ಯ :
1. ನೀವು ಸಾಮಾನ್ಯ ಸೇವಾ ಕೇಂದ್ರದ (CSC) ಮೂಲಕ ಪಡಿತರ ಚೀಟಿಯನ್ನು ನವೀಕರಿಸಬಹುದು.
2. ಆಧಾರ್ ಕಾರ್ಡ್ (Aadhaar Card) ಅನ್ನು ಲಿಂಕ್ ಮಾಡಬಹುದು.
3. ನಿಮ್ಮ ಪಡಿತರ ಚೀಟಿಯ ನಕಲು ಮುದ್ರಣವನ್ನು ಪಡೆಯಬಹುದು.
4. ಪಡಿತರ ಲಭ್ಯತೆಯ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು.
5. ನೀವು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು.
6. ಪಡಿತರ ಚೀಟಿ ಕಳೆದು ಹೋದರೆ, ಹೊಸ ಪಡಿತರ ಚೀಟಿಗೆ (Ration card) ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ನವೆಂಬರ್ 4 ರವರೆಗೆ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪಡೆಯಿರಿ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್
ಡಿಜಿಟಲ್ ಇಂಡಿಯಾ ನೀಡಿದ ಮಾಹಿತಿ :
ಡಿಜಿಟಲ್ ಇಂಡಿಯಾ (Digital India) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದೆ. ಸಾಮಾನ್ಯ ಸೇವಾ ಕೇಂದ್ರ ಸುವಿಧಾ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಪ್ರಕಾರ, ದೇಶಾದ್ಯಂತ 3.70 ಲಕ್ಷ ಸಿಎಸ್‌ಸಿಗಳ ಮೂಲಕ ಪಡಿತರ ಚೀಟಿ ಸೇವೆಗಳು ಲಭ್ಯವಾಗಲಿವೆ. ಈ ಪಾಲುದಾರಿಕೆಯು ದೇಶಾದ್ಯಂತ 23.64 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರಿಗೆ ಲಾಭವಾಗುವ ನಿರೀಕ್ಷೆಯಿದೆ.
ಈ ಪ್ರಮುಖ ಸೇವೆಗಳನ್ನು ಲಭ್ಯ :
1. ಪಡಿತರ ಚೀಟಿ ವಿವರಗಳನ್ನು ಸಾಮಾನ್ಯ ಸೇವಾ ಕೇಂದ್ರದ ಮೂಲಕ ನವೀಕರಿಸಬಹುದು.
2. ನಿಮ್ಮ ಪಡಿತರ ಚೀಟಿಯ ನಕಲು ಮುದ್ರಣವನ್ನು ಪಡೆಯಬಹುದು.
3. ಪಡಿತರ ಲಭ್ಯತೆಯ ಬಗ್ಗೆಯೂ ತಿಳಿದುಕೊಳ್ಳಬಹುದು.
4. ನೀವು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು
5. ಪಡಿತರ ಚೀಟಿ ಕಳೆದು ಹೋದರೆ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ದಲಿತ ವ್ಯಕ್ತಿಯನ್ನು ಸಿಎಂ ಮಾಡಿರುವುದು ಕಾಂಗ್ರೆಸ್ಸಿನ ಚುನಾವಣಾ ಸ್ಟಂಟ್ ಎಂದ ಮಾಯಾವತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.