ದಲಿತ ವ್ಯಕ್ತಿಯನ್ನು ಸಿಎಂ ಮಾಡಿರುವುದು ಕಾಂಗ್ರೆಸ್ಸಿನ ಚುನಾವಣಾ ಸ್ಟಂಟ್ ಎಂದ ಮಾಯಾವತಿ

ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿ ದಲಿತ ನಾಯಕ ಚರಣಜಿತ್ ಸಿಂಗ್ ಚನ್ನಿ ಪ್ರಮಾಣವಚನ ಸ್ವೀಕರಿಸಿದ ನಂತರ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಯಾವತಿ ದಲಿತರು ಕಾಂಗ್ರೆಸ್ ನ ದ್ವಿಮುಖ ನೀತಿ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.

Written by - Zee Kannada News Desk | Last Updated : Sep 20, 2021, 05:23 PM IST
  • ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿ ದಲಿತ ನಾಯಕ ಚರಣಜಿತ್ ಸಿಂಗ್ ಚನ್ನಿ ಪ್ರಮಾಣವಚನ ಸ್ವೀಕರಿಸಿದ ನಂತರ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಯಾವತಿ ದಲಿತರು ಕಾಂಗ್ರೆಸ್ ನ ದ್ವಿ ನೀತಿ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ದಲಿತ ವ್ಯಕ್ತಿಯನ್ನು ಸಿಎಂ ಮಾಡಿರುವುದು ಕಾಂಗ್ರೆಸ್ಸಿನ ಚುನಾವಣಾ ಸ್ಟಂಟ್ ಎಂದ ಮಾಯಾವತಿ  title=

ನವದೆಹಲಿ: ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿ ದಲಿತ ನಾಯಕ ಚರಣಜಿತ್ ಸಿಂಗ್ ಚನ್ನಿ ಪ್ರಮಾಣವಚನ ಸ್ವೀಕರಿಸಿದ ನಂತರ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಯಾವತಿ ದಲಿತರು ಕಾಂಗ್ರೆಸ್ ನ ದ್ವಿಮುಖ ನೀತಿ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ: Pujnab New CM - ಪಂಜಾಬ್ ನೂತನ ಮುಖ್ಯಮಂತ್ರಿಯ ಮೇಲೆ Me Too ಆರೋಪ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ: NCW ಅಧ್ಯಕ್ಷೆ

ಕಾಂಗ್ರೆಸ್ ಪಕ್ಷವೂ ಇನ್ನೂ ಕೂಡ ದಲಿತರನ್ನು ನಂಬುವುದಿಲ್ಲ,ಚುನಾವಣೆಗೂ ಮೊದಲು ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಯಾವತಿ ಕಿಡಿ ಕಾರಿದರು.ಪಂಜಾಬ್‌ನಲ್ಲಿ ಬಿಎಸ್‌ಪಿ ಮತ್ತು ಅಕಾಲಿದಳದ ಮೈತ್ರಿಯಿಂದ ಕಾಂಗ್ರೆಸ್‌ಗೆ ತೊಂದರೆಯಾಗಿದೆ ಎಂದು ಆರೋಪಿಸಿದ ಮಾಯಾವತಿ, ಹಿಂದಿನ ದಿನಗಳಲ್ಲಿ ಅವರೂ ಅಂಬೇಡ್ಕರ್ ರನ್ನೂ ಒಪ್ಪಿಕೊಂಡಿದ್ದರು, ಏಕೆಂದರೆ ಅವರಿಗೆ ಸಂವಿಧಾನವನ್ನು ರಚಿಸಲು ಅವರಿಗಿಂತ ಉತ್ತಮ ವ್ಯಕ್ತಿ ಸಿಗಲಿಲ್ಲ ಎಂದು ಹೇಳಿದರು. 

ಇದೆ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಿತಿಯೂ ಅದೇ ಆಗಿದೆ,ಅವರಿಗೆ ಒಬಿಸಿ ಸಮುದಾಯದ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅವರು ಜಾತಿ ಆಧಾರಿತ ಜನಗಣತಿಯ ಬೇಡಿಕೆಯನ್ನು ಒಪ್ಪಿಕೊಳ್ಳುತ್ತಿದ್ದರು ಎಂದು ಹೇಳಿದರು.

"ನಾನು ಚನ್ನಿ (Charanjit Singh Channi) ಗೆ ಶುಭ ಹಾರೈಸುತ್ತೇನೆ.ಆದರೆ ಕಾಂಗ್ರೆಸ್ ಪಕ್ಷವು ಈ ಮೊದಲೇ ಐದು ವರ್ಷಗಳ ಕಾಲ ಆಡಳಿತ ನಡೆಸಲು ಅವರನ್ನು ಸಿಎಂ ಆಗಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು, ಆದರೆ ಈಗ ಅವರನ್ನು ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿಯನ್ನಾಗಿ ಮಾಡುವುದು ಅವರ ಪೊಳ್ಳು ಚುನಾವಣಾ ತಂತ್ರ ಎಂದು ತೋರಿಸುತ್ತದೆ ಎಂದು ಮಾಯಾವತಿ ಹೇಳಿದರು.

"ಪಂಜಾಬ್‌ನಲ್ಲಿ, ಮುಂಬರುವ ವಿಧಾನ ಸಭಾ ಚುನಾವಣೆಯು ದಲಿತೇತರ ನಾಯಕತ್ವದಲ್ಲಿ ಸ್ಪರ್ಧಿಸಲಿದೆ ಎಂದು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ, ಇದು ಕಾಂಗ್ರೆಸ್ ಇನ್ನೂ ದಲಿತರನ್ನು ನಂಬುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ದಲಿತರು ದ್ವಿಮುಖದ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಗಾಂಧಿ ಕುಟುಂಬದ ಮೌನವನ್ನು ಪ್ರಶ್ನಿಸಿದ ಪ್ರಕಾಶ್ ಜಾವಡೇಕರ್

"ಭಾರತದ ಸಂವಿಧಾನದ ರಚನೆಯ ಬಗ್ಗೆ ಮಾತುಕತೆ ಆರಂಭವಾದಾಗ, ಜವಾಹರ್ ಲಾಲ್ ನೆಹರು ಮತ್ತು ಕಂಪನಿಯು ಅಂಬೇಡ್ಕರ್ ಗಿಂತ ಹೆಚ್ಚು ಸಮರ್ಥ ವ್ಯಕ್ತಿಯನ್ನು ಹೊಂದಿದ್ದರೆ, ಅವರು ಸಂವಿಧಾನ ರಚನೆಯಲ್ಲಿ ಅವರನ್ನು ಎಂದಿಗೂ ತೊಡಗಿಸಿಕೊಳ್ಳುತ್ತಿರಲಿಲ್ಲ" ಎಂದು ಅವರು ಇತಿಹಾಸವನ್ನು ಉಲ್ಲೇಖಿಸಿದರು.ಬಿಜೆಪಿಗೆ ಸಂಬಂಧಿಸಿದಂತೆ, ಒಬಿಸಿಗಳ ಬಗ್ಗೆ ಪಕ್ಷದ ಹೊಸ ಪ್ರೀತಿ ನಿಜವಾದರೆ, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳ ಕೋಟಾದಡಿ ಸರ್ಕಾರಿ ಉದ್ಯೋಗ ಖಾಲಿ ಹುದ್ದೆಗಳನ್ನು ಕೇಂದ್ರವು ತುಂಬುತ್ತಿತ್ತು ಎಂದು ಅವರು ಹೇಳಿದರು.

ಪಂಜಾಬ್ ಅಥವಾ ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಹಿಂದುಳಿದವರು ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಲೋಭನೆಗೆ ಒಳಗಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಮಾಯಾವತಿ ಹೇಳಿದರು.

ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News