Aadhaar Card Latest News: ಇನ್ಮುಂದೆ ನೋಂದಣಿ ಮಾಡದ ಮೊಬೈಲ್ ಮೇಲೂ ಕೂಡ ನೀವು Aadhaar Card ಡೌನ್ ಲೋಡ್ ಮಾಡಬಹುದು

Aadhaar Card Latest News:ಆಧಾರ್ ಕಾರ್ಡ್ (Aadhaar Card) ಧಾರಕರಿಗಾಗಿ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಹೌದು ಇನ್ಮುಂದೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಸಹ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಆಧಾರ್ (Aadhaar) ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದನ್ನು ಘೋಷಿಸಿದೆ. 

Written by - Nitin Tabib | Last Updated : Sep 19, 2021, 11:45 AM IST
  • ಆಧಾರ್ ಕಾರ್ಡ್ ಧಾರಕರಿಗಾಗಿ ಇಲ್ಲಿದೆ ಒಂದು ಗುಡ್ ನ್ಯೂಸ್
  • ಅಧಿಕೃತ ಮೊಬೈಲ್ ಸಂಖ್ಯೆ ಇಲ್ಲದಿದ್ದರೋ ಕೂಡ ನೀವು ಆಧಾರ್ ಡೌನ್ಲೋಡ್ ಮಾಡಬಹುದು.
  • UIDAI ಇದನ್ನು ಘೋಷಿಸಿದೆ.
Aadhaar Card Latest News: ಇನ್ಮುಂದೆ ನೋಂದಣಿ ಮಾಡದ ಮೊಬೈಲ್ ಮೇಲೂ ಕೂಡ ನೀವು Aadhaar Card ಡೌನ್ ಲೋಡ್ ಮಾಡಬಹುದು title=
Aadhaar Card Latest News (File Photo)

ನವದೆಹಲಿ: Aadhaar Card Latest News - ಆಧಾರ್ ಕಾರ್ಡ್ (Aadhaar Card) ಧಾರಕರಿಗಾಗಿ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಹೌದು ಇನ್ಮುಂದೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಸಹ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಆಧಾರ್ (Aadhaar) ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದನ್ನು ಘೋಷಿಸಿದೆ. ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಬಳಕೆದಾರರಿಗೆ ಆಧಾರ್ ಕಾರ್ಡ್ (Aadhaar Card) ಡೌನ್‌ಲೋಡ್ ಮಾಡಲು ಆಧಾರ್‌ಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿತ್ತು. ಮೊಬೈಲ್ ಸಂಖ್ಯೆ ಇಲ್ಲದೆ ನೀವು ಆಧಾರ್ ಕಾರ್ಡ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ತಿಳಿದುಕೊಳ್ಳೋಣ ಬನ್ನಿ

ಆಧಾರ್ ಡೌನ್ಲೋಡ್ ಮಾಡುವ ಸುಲಭ ಪ್ರಕ್ರಿಯೆ ಇಲ್ಲಿದೆ
1. ಇದಕ್ಕಾಗಿ ನೀವು ಮೊದಲು UIDAI (UIDAI Update) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು 'ನನ್ನ ಆಧಾರ್' ಆಯ್ಕೆಯನ್ನು ಟ್ಯಾಪ್ ಮಾಡಿ.
2. ಈಗ 'ಆಧಾರ್ ಪಿವಿಸಿ ಕಾರ್ಡ್ ಅನ್ನು ಆರ್ಡರ್ ಮಾಡಿ' ಮೇಲೆ ಕ್ಲಿಕ್ ಮಾಡಿ.
3. ಈಗ ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಲು ಕೇಳಲಾಗುವುದು.
4. ಇಲ್ಲಿ ನೀವು ಆಧಾರ್ ಸಂಖ್ಯೆಯ ಬದಲು 16 ಅಂಕಿಯ ವರ್ಚುವಲ್ ಗುರುತಿನ ಸಂಖ್ಯೆಯನ್ನು (VID) ಸಹ ನಮೂದಿಸಬಹುದು.
5. ಈ ಪ್ರಕ್ರಿಯೆಯ ನಂತರ, ನಿಮಗೆ ನೀಡಿದ ಭದ್ರತೆ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
6. ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಡೌನ್‌ಲೋಡ್ ಮಾಡಲು ಬಯಸಿದರೆ, 'ನನ್ನ ಮೊಬೈಲ್ ಸಂಖ್ಯೆ ನೋಂದಣಿಯಾಗಿಲ್ಲ' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಇದನ್ನೂ ಓದಿ-ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದೆಯೇ? ಆಧಾರ್ ಕಾರ್ಡ್‌ಗೆ ತ್ವರಿತವಾಗಿ ಲಿಂಕ್ ಮಾಡಿ, ಹಂತ ಹಂತದ ಪ್ರಕ್ರಿಯೆ ಇಲ್ಲಿದೆ

7. ಈಗ ನಿಮ್ಮ ಪರ್ಯಾಯ ಸಂಖ್ಯೆ ಅಥವಾ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
8. ಈಗ 'OTP ಕಳುಹಿಸಿ' ಮೇಲೆ ಕ್ಲಿಕ್ ಮಾಡಿ
9. ಈಗ ನೀವು ನಮೂದಿಸಿದ ಪರ್ಯಾಯ ಸಂಖ್ಯೆಯ ಮೇಲೆ ಒನ್ ಟೈಮ್ ಪಾಸ್ವರ್ಡ್ (OTP) ಬರುತ್ತದೆ.
10. ಮುಂದೆ, ನೀವು 'ನಿಯಮಗಳು ಮತ್ತು ಷರತ್ತುಗಳು' ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಅಂತಿಮವಾಗಿ 'ಸಬ್ಮಿಟ್' ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ-Alert! SBI ಗ್ರಾಹಕರು ಓದಲೇಬೇಕಾದ ಸುದ್ದಿ ಇದು, ಬೇಗ ಈ ಕೆಲಸ ಮುಗಿಸಿಕೊಳ್ಳಿ ಇಲ್ದಿದ್ರೆ...?

11. ಈಗ ನಿಮ್ಮನ್ನು ಹೊಸ ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ.
12. ರೀಪ್ರಿಂಟಿಂಗ್ ವೆರಿಫಿಕೆಶನ್ ಗಾಗಿ, ನೀವು ಇಲ್ಲಿ ಆಧಾರ್ ಪತ್ರದ ಪೂರ್ವವೀಕ್ಷಣೆಯ ಆಯ್ಕೆಯನ್ನು ಪಡೆಯುತ್ತೀರಿ.
13. ಇದರ ನಂತರ ನೀವು 'ಪೇಮೆಂಟ್ ' ಆಯ್ಕೆಯನ್ನು ಆರಿಸಿಕೊಳ್ಳಿ.

ಇದನ್ನೂ ಓದಿ-Aadhaar Card: ವಾಹನದ ಸಂಖ್ಯೆಯಂತೆ, ಈಗ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಾ? UIDAI ನೀಡಿದೆ ಈ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News