Good News: ವ್ಯಾಪಕವಾಗಿ ಬಳಕೆಯಾಗುವ ಕೆಲ ಅಗತ್ಯ ಔಷಧಿಗಳ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ (Modi Government) ಸಿದ್ಧತೆ ನಡೆಸಿದೆ. ಇದಕ್ಕಾಗಿ ಸರ್ಕಾರವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಪರಿಷ್ಕರಿಸಲಿದೆ ಮತ್ತು ಪ್ರಸ್ತಾವಿತ ಬೆಲೆ ಶ್ರೇಣಿಗಾಗಿ 39 ಹೊಸ ಹೆಸರುಗಳನ್ನು (Essential Medicines) ಪಟ್ಟಿಯ ಅಡಿಯಲ್ಲಿ ಸೇರಿಸಲಾಗುತ್ತಿವೆ ಎಂದು ಮೂಲಗಳು ತಿಳಿಸಿವೆ. ಕೆಲವು ಆಂಟಿವೈರಲ್‌ ಔಷಧಿಗಳ ಹೊರತಾಗಿ ಕ್ಯಾನ್ಸರ್, ಮಧುಮೇಹ, ಟಿವಿ ಮತ್ತು ಎಚ್‌ಐವಿ ವಿರುದ್ಧ ಹೋರಾಡುವ ಔಷಧಿಗಳನ್ನು ಈ ಪಟ್ಟಿಗೆ ಸೇರಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಸರ್ಕಾರ ಪ್ರಸ್ತುತ ಇರುವ ಪಟ್ಟಿಯಿಂದ ಸುಮಾರು 16 ಔಷಧಿಗಳನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಇದೀಗ ಈ ಪಟ್ಟಿಯಲ್ಲಿ ಸುಮಾರು 399 ಔಷಧಿಗಳಿದ್ದು, ಸರ್ಕಾರ ಈ ಔಷಧಿಗಳ ಬೆಲೆ ಇಳಿಕೆ ಮಾಡಿದೆ.


ಇದನ್ನೂ ಓದಿ- Modi Government Big Plan: ಹೋಮ್ ಇನ್ಸೂರೆನ್ಸ್ ಯೋಜನೆ ಜಾರಿಗೆ ತರಲು ಮುಂದಾದ ಮೋದಿ ಸರ್ಕಾರ, ಎನಿರಲಿದೆ ವಿಶೇಷತೆ


ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (Indian Medical Research Counsil) ಅಡಿಯಲ್ಲಿ ಪರಿಣಿತ ಸಮಿತಿಯು ಸಿದ್ಧಪಡಿಸಿದ ಪರಿಷ್ಕೃತ ಪಟ್ಟಿಯನ್ನು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಗುರುವಾರ ಸಲ್ಲಿಸಲಾಗಿದೆ. ಆರೋಗ್ಯ ಸಚಿವಾಲಯವು ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಅದನ್ನು ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ಸ್ಥಾಯಿ ಸಮಿತಿಯು ಮೌಲ್ಯಮಾಪನ ಮಾಡುತ್ತದೆ. ಇದರಲ್ಲಿ, ಯಾವ ಔಷಧಿಗಳ ಬೆಲೆಯನ್ನು ಹೆಚ್ಚು ಕಡಿಮೆ ಮಾಡುವ ಅವಶ್ಯಕತೆ ಇದೆ ಎಂಬುದನ್ನು ನಿರ್ಧರಿಸಲಾಗುತ್ತದೆ.


ಇದನ್ನೂ ಓದಿ-DICGC Amendment Bill 2021: ಬ್ಯಾಂಕ್ ದಿವಾಳಿಯಾಗಲಿ ಅಥವಾ ಬಂದ್ ಆಗಲಿ, 90 ದಿನಗಳೊಳಗೆ ಗ್ರಾಹಕರಿಗೆ 5 ಲಕ್ಷ ರೂ. ವಿಮಾ ಮೊತ್ತ ಸಿಗಲಿದೆ


ನೀತಿ ಆಯೋಗದ (Niti Aayog) ಸದಸ್ಯರಾಗಿರುವ ಡಾ. ವಿ.ಕೆ ಪಾಲ್ (Dr. VK Paul) ನೆರುತ್ವದ SCAMHPನ ಶಿಫಾರಸ್ಸುಗಳನ್ನು ಆಧರಿಸಿ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ (National Drug Pricing Authority) ಅಂತಿಮ ಬೆಲೆಯನ್ನು ನಿಗದಿಪಡಿಸುತ್ತದೆ.


ಇದನ್ನೂ ಓದಿ-Rahul Gandhi On Central Govt: 'GDP ಅಂದ್ರೆ Gas, Diesel, Petrol ಬೆಲೆ ಏರಿಕೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.