Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ

Black Money In Swiss Bank - ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಎಷ್ಟು ಕಪ್ಪು ಹಣವನ್ನು ಹೊಂದಿದ್ದಾರೆ? ಅದನ್ನು ಮರಳಿ ತರಲು ಸರ್ಕಾರ ಏನನ್ನಾದರೂ ಮಾಡುತ್ತಿದೆಯೇ? ಈ ಕುರಿತಾದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರ ಸಂಸತ್ತಿನ (Parliament) ಮುಂದೆ ಬಿಚ್ಚಿಟ್ಟಿದೆ .

Written by - Nitin Tabib | Last Updated : Jul 22, 2021, 04:39 PM IST
  • Swiss Bank ನಲ್ಲಿ ಭಾರತೀಯರು ಎಷ್ಟು ಕಪ್ಪು ಹೊಂದಿದ್ದಾರೆ?
  • ಅದನ್ನು ಮರಳಿ ತರಲು ಸರ್ಕಾರ ಏನಾದರೂ ಮಾಡುತ್ತಿದೆಯೇ?
  • ಇದಕ್ಕಾಗಿ ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ?
Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ title=
Black Money In Swiss Bank (File Photo)

ನವದೆಹಲಿ: Swiss Bank ನಲ್ಲಿ ಭಾರತೀಯರು ಎಷ್ಟು ಕಪ್ಪು ಹೊಂದಿದ್ದಾರೆ? ಅದನ್ನು ಮರಳಿ ತರಲು ಸರ್ಕಾರ ಏನಾದರೂ ಮಾಡುತ್ತಿದೆಯೇ? ಇದಕ್ಕಾಗಿ ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ? ಇಂತಹ ಪ್ರಶ್ನೆಗಳ ಮೇಲೆ, ಪ್ರತಿಪಕ್ಷಗಳು ಸರ್ಕಾರವನ್ನು ಸುತ್ತುವರೆಯುವ ಪ್ರಯತ್ನ ಮುಂದುವರೆಸಿರುವ ಬೆನ್ನಲ್ಲೇ, ಈ ಕುರಿತಾದ ಸತ್ಯಾಸತ್ಯತೆಯನ್ನು ಸರ್ಕಾರ ಸಂಸತ್ತಿನಲ್ಲಿ (Parliament) ಮಂಡಿಸಿದೆ. ಮಾನ್ಸೂನ್ ಅಧಿವೇಶನದಲ್ಲಿ (Monsoon Session) ಕಾರ್ಯಕಲಾಪದ ವೇಳೆ ಸರ್ಕಾರ (Modi Government) ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ. ಇದರೊಂದಿಗೆ, 2020 ರಲ್ಲಿ, ಸ್ವಿಟ್ಜರ್ಲೆಂಡ್‌ನ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿರುವ ಭಾರತೀಯರ ಹಣದಲ್ಲಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಸ್ವಿಟ್ಜರ್ಲೆಂಡ್ ಅನ್ನು ಟ್ಯಾಕ್ಸ್ ಹೆವನ್ ಕಂಟ್ರಿ ಎಂದು  ಕರೆಯಲಾಗುತ್ತದೆ. ಭಾರತೀಯರು ತಮ್ಮ ಕಪ್ಪು ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ್ದಾರೆ ಎಂಬುದಕ್ಕೆ ಈ ಮೊದಲು ಹಲವು ಪುರಾವೆಗಳು ದೊರೆತಿವೆ.

ಯಾವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿದೆ
2020 ರ ಆರ್ಥಿಕ ವರ್ಷದಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರು ಮತ್ತು ಭಾರತೀಯ ಕಂಪನಿಗಳ ಖಾತೆಗಳಲ್ಲಿ ಠೇವಣಿ ಇಟ್ಟಿರುವ ಕಪ್ಪು ಹಣದ (Black Money) ಪ್ರಮಾಣದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಾಗಿದೆ. ಇದಲ್ಲದೆ, ಸ್ವಿಸ್ ಬ್ಯಾಂಕುಗಳಲ್ಲಿ (Swiss Bank)ಠೇವಣಿ ಇರಿಸಿದ ಮೊತ್ತವು 2020 ರಲ್ಲಿ 255 ಕೋಟಿ ರೂ.ಗೆ ಏರಿದೆ ಎಂಬುದು ನಿಜವೇ? ಮತ್ತು ಈ ಮೊತ್ತವನ್ನು ಮರಳಿ ತರಲು ಸರ್ಕಾರ ಯಾವ ಪ್ರಯತ್ನ ಮಾಡುತ್ತಿದೆ? ಎಂಬ ಪ್ರಶ್ನೆಗಳನ್ನು ಕೂಡ ಕೇಳಲಾಗಿದೆ.

ಕೇಂದ್ರ ಹಣಕಾಸು ರಾಜ್ಯ ಸಚಿವರು ನೀಡಿರುವ ಉತ್ತರವೇನು?
ಈ ಕುರಿತು ಲಿಖಿತ ರೂಪದಲ್ಲಿ ಸಂಸತ್ತಿಗೆ ಉತ್ತರಿಸಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, "2020 ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರಿಂದ ಇರಿಸಲಾಗಿರುವ ಠೇವಣಿ ಮೊತ್ತದಲ್ಲಿ ಹೆಚ್ಚಳವಾಗಿದೆ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ. ಆದರೆ,  ಎಲ್ಲಾ ಅಂಕಿ ಅಂಶಗಳು ಸ್ವಿಸ್ ಬ್ಯಾಂಕುಗಳಲ್ಲಿನ ಕಪ್ಪು ಹಣದ ಕಡೆಗೆ ಸೂಚಿಸುವುದಿಲ್ಲ. ಏಕೆಂದರೆ ಇದಕ್ಕೂ ಮೊದಲು ಕೂಡ ಈ ಕುರಿತು ಸ್ಪಸ್ಥನೆ ನೀಡಿರುವ ಸರ್ಕಾರ ಸ್ವಿಸ್ ಬ್ಯಾಂಕ್ ವತಿಯಿಂದ ಈ ಕುರಿತು ಜಾರಿಗೊಳಿಸಲಾಗಿರುವ ಅಂಕಿ-ಅಂಶಗಳನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಈ ಅಂಕಿ-ಅಂಶಗಳೇ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಹೀಗಿರುವಾಗ ಕೆಲವೊಂಮ್ಮೆ ಅಂಕಿ-ಅಂಶಗಳಲ್ಲಿನ ಗೊಂದಲಗಳು ಭ್ರಾಂತಿ ಹುಟ್ಟಿಸುವ ಕೆಲಸ ಮಾಡುತ್ತವೆ. ಆದರೆ, ಸ್ವಿಟ್ಜರ್ಲ್ಯಾಂಡ್ ನ ಬ್ಯಾಂಕುಗಳಲ್ಲಿ ಇರಿಸಲಾಗಿರುವ ಹಣವನ್ನು ಅಘೋಷಿತ ರೀತಿಯಲ್ಲಿ ಬ್ಲಾಕ್ ಮನಿ ಎಂದು ಭಾವಿಸಲಾಗುತ್ತದೆ ಎಂಬುದು ಪಂಕಜ್ ಚೌಧರಿ ಅಭಿಪ್ರಾಯ.

ಇದನ್ನೂ ಓದಿ-Hero Glamour Xtec Launch: ಬೈಕ್ ಸವಾರರಿಗೊಂದು ಸಂತಸದ ಸುದ್ದಿ

ಕೇವಲ ಸ್ವಿಟ್ಜರ್ಲ್ಯಾಂಡ್ ನಲ್ಲಿರುವ ಮೊತ್ತವೇ ಆ ಮೊತ್ತ ಆಗಬೇಕು ಎಂದೇನಿಲ್ಲ
ಪಂಕಜ್ ಚೌಧರಿ ಅವರ ಪ್ರಕಾರ, ಸ್ವಿಸ್ ಬ್ಯಾಂಕ್ ಬಿಡುಗಡೆ ಮಾಡಿದ ಅಂಕಿ ಅಂಶಗಳು ಸ್ವಿಸ್ ಬ್ಯಾಂಕಿಂಗ್ ಚಿತ್ರವನ್ನು ಪ್ರಸ್ತುತಪಡಿಸುತ್ತವೆ. ಈ ಅಂಕಿಅಂಶಗಳು ಸ್ವಿಸ್ ನ್ಯಾಷನಲ್ ಬ್ಯಾಂಕಿನ ವಾರ್ಷಿಕ ಬ್ಯಾಂಕಿಂಗ್ ಅನ್ನು ಆಧರಿಸಿವೆ. ಬ್ಯಾಂಕುಗಳಲ್ಲಿ ಠೇವಣಿ ಇಡುವ ಸಂಪೂರ್ಣ ಮೊತ್ತ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಾತ್ರ ಇರಬೇಕಾಗಿಲ್ಲ ಎಂದು ಸ್ವಿಸ್ ಅಧಿಕಾರಿಗಳ ಪರವಾಗಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸ್ವಿಟ್ಜರ್ಲೆಂಡ್ನಲ್ಲಿನ ಠೇವಣಿಗಳ ಬಗ್ಗೆ ಮಾಹಿತಿ ನೀಡಲು ಈ ಡೇಟಾವನ್ನು ಭಾರತೀಯರು ಬಳಸಬಾರದು ಎಂದಿದ್ದಾರೆ.

ಇದನ್ನೂ ಓದಿ-YouTube Super Thanks: YouTuberಗಳಿಗಾಗಿ ತೆರೆದುಕೊಂಡ ಆದಾಯದ ಹೊಸ ಮಾರ್ಗ

ಕಪ್ಪು ಹಣ ವಾಪಸ್ ಬರಲಿದೆಯೇ? ಇದಕ್ಕಾಗಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿತ್ತ ರಾಜ್ಯ ಸಚಿವರು, "ಭಾರತ ಮತ್ತು ಸ್ವಿಟ್ಜರ್ಲೆಂಡ್ ಎರಡೂ ದೇಶಗಳು ಈ ಮಾಹಿತಿಯನ್ನು ಡಬಲ್ ಟ್ಯಾಕ್ಸೇಶನ್ ಅವೈಡನ್ಸ್ ಒಪ್ಪಂದ (DTAA) ಅಡಿಯಲ್ಲಿ ಪಡೆಯುತ್ತಿವೆ. ದೇಶದಲ್ಲಿ ಕಪ್ಪು ಹಣವನ್ನು ಮರಳಿ ತರಲು ಕೇಂದ್ರ ಸರ್ಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ  ಕಪ್ಪು ಹಣ ಮತ್ತು Imposition of Tax Act 2015 ಮುಂಚೂಣಿಯಲ್ಲಿವೆ, ಇದನ್ನು ಜುಲೈ 1 ರಿಂದ ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿ, ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಬಹುದು" ಎಂದು ಹೇಳಿದ್ದಾರೆ. 

ಇದನ್ನೂ ಓದಿ- Google To Shut Down Important Service: 16 ವರ್ಷಗಳ ಬಳಿಕ Googleನ ಈ ವಿಶೇಷ ಸೇವೆ ಸ್ಥಗಿತಗೊಳ್ಳುತ್ತಿದೆ, ಸೆ. 30ರೊಳಗೆ ಸುರಕ್ಷಿತವಾಗಿಸಿ ನಿಮ್ಮ ಡೇಟಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News